ಮಲೈಕಾಗೆ ಹೇಳಿದ್ದನ್ನೇ ಕರೀನಾಗೂ ಸಲ್ಲು ಹೇಳಿದ್ದೇಕೆ?

<ul id="pagination-digg"><li class="previous"><a href="/bollywood/salman-khan-uncomfortable-to-intimate-kareena-kapoor-069252.html">« Previous</a>

Kareena Kapoor
ಸಲ್ಮಾನ್ ಖಾನ್ ಅವರಿಗೆ ವೃತ್ತಿ ಮುಖ್ಯವೋ ಅಥವಾ ಸಂಬಂಧವೋ ಎಂದು ಕೇಳುವಂತಿಲ್ಲ. ಕಾರಣ, ಸಲ್ಲೂ ಅಭಿಮಾನಿಗಳಿಗೆ- ಸಲ್ಲೂ ಸೂಪರ್ ಸ್ಟಾರ್ ಆಗಿರಬೇಕು, ಹಾಗಿರಬೇಕು, ಹೀಗಿರಬೇಕು... ಹಾಗೆ ಹೇಳಬಾರದು, ಹೀಗೆ ಹೇಳಬೇಕು ಎಂಬ ಅಭಿಪ್ರಾಯವಿರಬಹುದು. ಆದರೆ ಸ್ವತಃ ತಮಗಿರುವ ಅಭಿಪ್ರಾಯಕ್ಕೇ ಸಲ್ಲೂ ಬೆಲೆಕೊಡುವುದು ಖಂಡಿತ. ಹೀಗಿರುವಾಗ ಕರೀನಾ ಬಗ್ಗೆ ಸಲ್ಲೂ ಹೇಳಿರುವ ಮಾತಿನಿಂದ ಪಾತ್ರಕ್ಕೆ ನ್ಯಾಯ ಒದಗಲಾರದು ಎನ್ನುವಂತೆಯೂ ಇಲ್ಲ.

ಕಾರಣ, ಸಲ್ಮಾನ್ ಖಾನ್ ಈಗ ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್. 'ದಬಾಂಗ್', 'ಬಾಡಿಗಾರ್ಡ್' ಮೂಲಕ ಪ್ರವಾಹೋಪಾದಿಯಲ್ಲಿ ಮೇಲಕ್ಕೇರುತ್ತಿರುವ ಅವರ ವೃತ್ತಿ ಜೀವನ ಇತ್ತೀಚಿನ 'ಏಕ್ ಥಾ ಟೈಗರ್' ಚಿತ್ರದ ಮೂಲಕ ಅತಿ ಎತ್ತರಕ್ಕೇರಿದೆ. ಈ ಮೊದಲು ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಪಟ್ಟದಲ್ಲಿದ್ದ ಅಮೀರ್ ಖಾನ್ ಹಾಗೂ ಶಾರುಖ್ ಖಾನ್ ಅವರನ್ನೇ ಅಲ್ಲಾಡಿಸುವ ಮಟ್ಟಿಗೆ ಒಂದು ಕಾಲದ 'ಬಾಲಿವುಡ್ ಬ್ಯಾಡ್ ಬಾಯ್' ಸಲ್ಮಾನ್ ಖಾನ್ ಬೆಳೆದು ನಿಂತಿದ್ದಾರೆ.

ಅಚ್ಚರಿಯೆಂಬಂತೆ, ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೋಡಿಯ 'ಏಕ ಥಾ ಟೈಗರ್' ಚಿತ್ರವು ಬಾಲಿವುಡ್ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿರುವ ಅಮೀರ್ ಖಾನ್ ನಾಯಕತ್ವದ 'ತ್ರೀ ಈಡಿಯಟ್ಸ್' ಚಿತ್ರದ ದಾಖಲೆಗೆ ಅತಿ ಸಮೀಪವೇ ಬಂದು ನಿಂತಿದೆ. 'ತ್ರೀ ಈಡಿಯಟ್ಸ್' ದಾಖಲೆ ಮುರಿದು ಹೊಸ ದಾಖಲೆಯನ್ನು ಸ್ಥಾಪಿಸುವ 'ಏಕ್ ಥಾ ಟೈಗರ್' ಪ್ರಯತ್ನ ವಿಫಲವಾಗಿರುವ ಬೆನ್ನೆಲ್ಲೇ ಹೊಸ ಸುದ್ದಿಯೊಂದು ಸ್ಪೋಟವಾಗಿದೆ.

ಅದು, ಅಮೀರ್ ಖಾನ್ ನಟನೆಯ 'ತ್ರೀ ಈಡಿಯಟ್ಸ್' ಚಿತ್ರದ ಕಥೆಗಾರರಾಗಿರುವ ಚೇತನ್ ಭಗತ್, ಬರಲಿರುವ ಸಲ್ಮಾನ್ ಖಾನ್ 'ಕಿಕ್' ಚಿತ್ರಕ್ಕೆ ಚಿತ್ರಕಥೆ ಬರೆಯುತ್ತಿದ್ದಾರೆ, ಹೀಗಿರುವಾಗ ಈ ಚಿತ್ರ ಹಳೆಯ ಎಲ್ಲಾ ದಾಖಲೆಯನ್ನು ಅಳಿಸಿಹಾಕಿ ಹೊಸ ದಾಖಲೆ ಹುಟ್ಟುಹಾಕಿದರೆ ಆಶ್ಚರ್ಯವೇನೂ ಇಲ್ಲ. ಒಟ್ಟಿನಲ್ಲಿ, ಸದ್ಯಕ್ಕೆ ಸಲ್ಮಾನ್ ಖಾನ್ ಹವಾ ತೀರಾ ಜೋರಾಗಿದೆ. ಅವರೇನೂ ಮಾಡಿದರೂ ಸರಿ, ಅದರಲ್ಲಿ ತಪ್ಪನ್ನು ಹುಡುಕುವ ಕೆಲಸ ಮಾಡಲು ಬಾಲಿವುಡ್ ನಲ್ಲಿ ಯಾರೂ ತಯಾರಿಲ್ಲ! (ಏಜೆನ್ಸೀಸ್)

<ul id="pagination-digg"><li class="previous"><a href="/bollywood/salman-khan-uncomfortable-to-intimate-kareena-kapoor-069252.html">« Previous</a>

More from Filmibeat

English summary
Kareena Kapoor Khan will shoot a raunchy song 'Fevicol' for Salman Khan's Dabangg 2. But Salman Khan is not comfortable in getting intimate with Kareena.&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X