For Quick Alerts
  ALLOW NOTIFICATIONS  
  For Daily Alerts

  ಕರೀನಾ-ಸೈಫ್ ಎರಡನೇ ಮಗು ಹೆಸರು: ಮತ್ತೆ ಟ್ರೋಲ್‌ಗೆ ಗುರಿಯಾದ ದಂಪತಿ

  |

  ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಎರಡನೇ ಮಗು ಹೆಸರು ಏನಿರಬಹುದು ಎನ್ನುವ ಚರ್ಚೆ ಬಹಳ ಗಮನ ಸೆಳೆಯುತ್ತಿದೆ. ಏಕಂದ್ರೆ ಈ ಮೊದಲು ಮೊದಲನೇ ಮಗುವಿಗೆ ಹೆಸರಿಟ್ಟಾಗ ಈ ತಾರಾ ದಂಪತಿ ಟ್ರೋಲ್‌ಗೆ ಗುರಿಯಾಗಿದ್ದರು. ಅಜಾಗರೂಕತೆಯಿಂದ ಭಾರತ ದೇಶವನ್ನು ಲೂಟಿ ಮಾಡಿದ ಟರ್ಕಿ ದೊರೆಯ ಹೆಸರನ್ನು ಮಗನಿಗೆ ನಾಮಕರಣ ಮಾಡಲಾಗಿದೆ ಎಂದು ಟೀಕಿಸಿದ್ದರು. ಹೀಗಾಗಿ, ಎರಡನೇ ಮಗುವಿಗೆ ಏನು ಹೆಸರಿಡಬಹುದು ಎನ್ನುವ ಕುತೂಹಲ ಕಾಡ್ತಿದೆ.

  ಈ ನಡುವೆ ಸೈಫ್ ದಂಪತಿ ತಮ್ಮ ಎರಡನೇ ಮಗನಿಗೆ 'ಜೆಹ್ ಅಲಿ ಖಾನ್' ಎಂದು ಹೆಸರಿಟ್ಟಿದ್ದಾರೆ ಎನ್ನುವ ವಿಚಾರ ಇತ್ತೀಚಿಗಷ್ಟೆ ಬಹಿರಂಗವಾಗಿತ್ತು. ಕರೀನಾ ಕಪೂರ್ ತಂದೆ ರಣದೀರ್ ಕಪೂರ್ ಈ ಬಗ್ಗೆ ಮಾಧ್ಯಮಗಳಿಗೆ ಸುಳಿವು ನೀಡಿದ್ದರು. ಆದ್ರೀಗ, ಕರೀನಾ ಮಗನ ಹೆಸರು ಜೆಹ್ ಅಲ್ಲ, ಜಹಾಂಗೀರ್ ಎಂದು ತಿಳಿದು ಬಂದಿದೆ.

  ತೈಮೂರ್‌ಗಿಂತ ಈ ಹೆಸರು ವಿಭಿನ್ನ: ಕರೀನಾ-ಸೈಫ್ 2ನೇ ಮಗು ಹೆಸರು ಇದೇನಾ?ತೈಮೂರ್‌ಗಿಂತ ಈ ಹೆಸರು ವಿಭಿನ್ನ: ಕರೀನಾ-ಸೈಫ್ 2ನೇ ಮಗು ಹೆಸರು ಇದೇನಾ?

  ಸೈಫ್ ದಂಪತಿಯ ಎರಡನೇ ಮಗುವಿಗೆ ಜಹಾಂಗೀರ್ ಅಲಿ ಖಾನ್ ಎಂದು ನಾಮಕರಣ ಮಾಡಲಾಗಿದೆ. ಪ್ರೀತಿಯಿಂದ ಜೆಹ್ ಎಂದು ಕರೆಯುತ್ತಿದ್ದಾರೆ ಎನ್ನುವ ವಿಷಯ ಬಯಲಾಗಿದೆ..

  'ಒಟ್ಟಿಗೆ ಇದ್ದಿದ್ರೆ ಖುಷಿಯಾಗಿ ಇರ್ತಿರಲಿಲ್ಲ': ಪೋಷಕರ ಡಿವೋರ್ಸ್ ಬಗ್ಗೆ ಸಾರಾ ಹೇಳಿದ್ದೇನು?'ಒಟ್ಟಿಗೆ ಇದ್ದಿದ್ರೆ ಖುಷಿಯಾಗಿ ಇರ್ತಿರಲಿಲ್ಲ': ಪೋಷಕರ ಡಿವೋರ್ಸ್ ಬಗ್ಗೆ ಸಾರಾ ಹೇಳಿದ್ದೇನು?

  ಮೊದಲ ಮಗನಿಗೆ ಹೆಸರಿಡುವ ಸಂದರ್ಭದಲ್ಲಿ ಸೈಫ್ ಅಲಿ ಖಾನ್‌ಗೆ ಫಯಾಜ್ ಅಹ್ಮದ್ ಎಂಬ ಹೆಸರಿಡಲು ಇಷ್ಟ ಪಟ್ಟಿದ್ದರಂತೆ. ಆದರೆ, ಕರೀನಾ ಆಸೆಯಂತೆ ತೈಮೂರ್ ಎಂದು ನಾಮಕರಣ ಮಾಡಿದರು. ಈಗಲೂ ಎರಡನೇ ಮಗನಿಗೆ ಫಯಾಜ್ ಅಹ್ಮದ್ ಎಂದು ಹೆಸರಿಡಲು ಸೈಫ್ ಆಸಕ್ತಿ ತೋರಿದರು. ಆದರೆ, ಕುಟುಂಬದವರು ಒತ್ತಡಕ್ಕೆ ಮಣಿದು ಜಹಾಂಗೀರ್ ಎಂದು ಹೆಸರಿಡಲಾಗಿದೆ ಎಂದು ವರದಿಗಳು ಹೇಳಿವೆ. ಕರೀನಾ ಮಗನ ಹೆಸರು ಜಹಾಂಗೀರ್ ಅಲಿ ಖಾನ್ ಎಂದು ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗಳು ಹುಟ್ಟಿಕೊಂಡಿದೆ. ಮುಂದೆ ಓದಿ...

  ಜಹಾಂಗೀರ್, ಖಿಲ್ಜಿ, ಔರಂಗಜೇಬ್ ಇಟ್ಕೊಳಿ

  ಜಹಾಂಗೀರ್, ಖಿಲ್ಜಿ, ಔರಂಗಜೇಬ್ ಇಟ್ಕೊಳಿ

  ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಎರಡನೇ ಮಗನಿಗೆ ಜಹಾಂಗೀರ್ ಅಲಿ ಖಾನ್ ಎಂದು ಹೆಸರಿಡಲಾಗಿದೆ ಎನ್ನುವ ವಿಚಾರ ಬಯಲಾಗುತ್ತಿದಂತೆ ಕೆಲವರು ವಿರೋಧಿಸಿದ್ದಾರೆ. ಜಹಾಂಗೀರ್, ಖಿಲ್ಜಿ, ಔರಂಗಜೇಬ್ ಮಾಡ್ಕೊಳ್ಳಿ ಎಂದು ಖಂಡಿಸಿದ್ದಾರೆ. ಇನ್ನು ಕೆಲವರು ತಮ್ಮ ಮಕ್ಕಳಿಗೆ ಏನು ಹೆಸರಿಡಬೇಕು ಎನ್ನುವುದ ಅವರಿಗೆ ಬಿಟ್ಟಿದ್ದು, ಅವರಿಗೆ ಆ ಸ್ವಾತಂತ್ರ್ಯ ಇದೆ ಎಂದು ಬೆಂಬಲಕ್ಕೆ ನಿಂತಿದ್ದಾರೆ.

  ತಂದೆಯ ಹೆಸರಿಡಬೇಕು ಎನ್ನುವ ಆಸೆ

  ತಂದೆಯ ಹೆಸರಿಡಬೇಕು ಎನ್ನುವ ಆಸೆ

  ಜಹಾಂಗೀರ್ ಅಥವಾ ಮನ್ಸೂರ್ ಎಂಬ ಹೆಸರುಗಳು ಕರೀನಾ ಮತ್ತು ಸೈಫ್ ಎದುರು ಆಯ್ಕೆಯಾಗಿತ್ತು. ಅದರಲ್ಲಿ ಜಹಾಂಗೀರ್ ಎಂಬ ಹೆಸರು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ, ಮನ್ಸೂರ್ ಎನ್ನುವುದು ಸೈಫ್ ಅಲಿ ಖಾನ್ ತಂದೆ, ಖ್ಯಾತ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿಯ ಹೆಸರಾಗಿತ್ತು. ಇನ್ನು ಫೆಬ್ರವರಿ 22 ರಂದು ಮುಂಬೈನ ಬ್ರಿಡ್ಜ್ ಕ್ಯಾಂಡಿ ಹಾಸ್ಪಿಟಲ್‌ನಲ್ಲಿ ಕರೀನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಎರಡನೇ ಮಗುವನ್ನು ಸ್ವಾಗತಿಸಿ ಸುಮಾರು ಆರು ತಿಂಗಳು ಕಳೆದಿದೆ.

  ತೈಮೂರ್ ಹೆಸರಿಟ್ಟಾಗ ಟೀಕೆ

  ತೈಮೂರ್ ಹೆಸರಿಟ್ಟಾಗ ಟೀಕೆ

  ಈ ಹಿಂದೆ ಮೊದಲ ಮಗನಿಗೆ ತೈಮೂರ್ ಅಲಿ ಖಾನ್ ಎಂದು ಹೆಸರಿಟ್ಟಾಗ ವಿವಾದಕ್ಕೆ ಕಾರಣವಾಗಿತ್ತು. ನೆಟ್ಟಿಗರು ಕರೀನಾ ಮತ್ತು ಸೈಫ್ ದಂಪತಿಯ ವಿರುದ್ಧ ಕಿಡಿಕಾರಿದ್ದರು. ತೈಮೂರ್ ಓರ್ವ ಸರ್ವಾಧಿಕಾರಿ, ಭಾರತದ ಮೇಲೆ ದಾಳಿ ನಡೆಸಿ, ದೆಹಲಿಯಲ್ಲಿ ನೂರಾರು ಮಂದಿಯನ್ನು ಹತ್ಯೆ ಮಾಡಿದ್ದ' ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಅಂತಹ ವ್ಯಕ್ತಿಯ ಹೆಸರನ್ನು ಮಗನಿಗೆ ಇಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಹಾಗಾಗಿ, ಈ ಹೆಸರು ಕೈಬಿಡುವಂತೆ ಒತ್ತಾಯಿಸಿದ್ದರು. ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ ಕರೀನಾ-ಸೈಫ್ ದಂಪತಿ.

  ಮತ್ತೆ ವಿವಾದ ಆಗಬಹುದು ಎಂಬ ಲೆಕ್ಕಾಚಾರ

  ಮತ್ತೆ ವಿವಾದ ಆಗಬಹುದು ಎಂಬ ಲೆಕ್ಕಾಚಾರ

  ತೈಮೂರ್ ಹೆಸರಿಟ್ಟಾಗ ಎದುರಾದ ಟೀಕೆಯ ಪರಿಣಾಮ ಕಪೂರ್ ದಂಪತಿಗೆ ತಿಳಿದಿದೆ. ಹಾಗಾಗಿ, ಎರಡನೇ ಮಗನಿಗೆ ಹೆಸರಿಡುವ ವಿಚಾರದಲ್ಲಿ ಬಹಳ ಎಚ್ಚರಿಕೆ ಹೆಜ್ಜೆ ಇಡಲಾಗುತ್ತಿದೆ. ಸಾಕಷ್ಟು ಸಮಯ ತೆಗೆದುಕೊಳ್ಳಲಾಗುತ್ತದೆ. ಸದ್ಯಕ್ಕೆ ಜಹಾಂಗೀರ್ ಅಲಿ ಖಾನ್ ಎನ್ನುವ ಹೆಸರು ಬಹಿರಂಗವಾಗಿದೆ. ಅಧಿಕೃತವಾಗಿ ಘೋಷಣೆಯಾಗಬೇಕಿದೆ.

  ಸೈಫ್ ದಂಪತಿಯ ಸಿನಿಮಾಗಳು

  ಸೈಫ್ ದಂಪತಿಯ ಸಿನಿಮಾಗಳು

  ಸಿನಿಮಾ ವಿಚಾರಕ್ಕೆ ಬಂದ್ರೆ ಕರೀನಾ ಕಪೂರ್ ಲಾಲ್ ಸಿಂಗ್ ಚಡ್ಡಾದಲ್ಲಿ ನಟಿಸಿದ್ದಾರೆ. ಆ ಕಡೆ ಸೈಫ್ ಅಲಿ ಖಾನ್ ಅಭಿನಯದ ಭೂತ್ ಪೊಲೀಸ್, ಬಂಟಿ ಔರ್ ಬಬ್ಲಿ 2 ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದೆ. ಜೊತೆಗೆ ಪ್ರಭಾಸ್ ಜೊತೆಗಿನ ಆದಿಪುರುಶ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Bollywood Actress Kareena Kapoor Khan and Saif Ali Khan's Second Son may have been named Jehangir Ali Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X