For Quick Alerts
  ALLOW NOTIFICATIONS  
  For Daily Alerts

  ''ಬೀಚ್‌ನದ್ದೇ ನೆನಪು'' ಎಂದು ಬಿಕಿನಿ ಚಿತ್ರ ಹಂಚಿಕೊಂಡ ಕರೀನಾ ಕಪೂರ್‌

  |

  ಕೊರೊನಾ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಕುಟುಂಬದೊಂದಿಗೆ ಉಳಿದಿರುವ ಬಾಲಿವುಡ್ ನಟಿ ಕರೀನಾ ಕಪೂರ್‌ ಗೆ ಬೀಚ್‌ನದ್ದೇ ನೆನಪಂತೆ!

  ಹೌದು, ಲಾಕ್‌ಡೌನ್ ನಿಂದಾಗಿ ಮನೆಯಲ್ಲೇ ಕುಳಿತು ಕರೀನಾ ಕಪೂರ್‌ ಗೆ ಬೋರ್ ಹೊಡೆದಿದೆ ಎನಿಸುತ್ತದೆ. ಬೀಚ್‌ ಬದಿ ಬಿಕಿನಿಯಲ್ಲಿ ಕುಳಿತಿರುವ ಚಿತ್ರ ಹಂಚಿಕೊಂಡಿರುವ ಕರೀನಾ ಕಪೂರ್ ನನಗೆ ಬೀಚ್‌ ನದ್ದೇ ನೆನಪು ಎಂದು ಬರೆದುಕೊಂಡಿದ್ದಾರೆ.

  ಪತಿ ಸೈಫ್ ಅಲಿ ಖಾನ್, ಮಗ ತೈಮೂರ್ ಜೊತೆಗೆ ಬೀಚ್‌ ನಲ್ಲಿ ಕೆಂಪು ಬಿಕಿನಿ ಧರಿಸಿ ಕುಳಿತಿರುವ ಚಿತ್ರವನ್ನು ಕರೀನಾ ಕಪೂರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ ಲೋಡ್ ಮಾಡಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ

  ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ

  ಲಾಕ್‌ಡೌನ್ ಆರಂಭವಾದಾಗಿನಿಂದಲೂ ಕರೀನಾ ಕಪೂರ್ ಇನ್‌ಸ್ಟಾಗ್ರಾಂ ನಲ್ಲಿ ಹಿಂದಿಗಿಂತಲೂ ಹೆಚ್ಚು ಆಕ್ಟಿವ್ ಆಗಿಬಿಟ್ಟಿದ್ದಾರೆ. ಪತಿಯ, ಮಗನ ಚಿತ್ರಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ.

  ಇನ್‌ಸ್ಟಾಗ್ರಾಂ ನಲ್ಲಿ ಮುಳುಗಿರುವ ಕರೀನಾ

  ಇನ್‌ಸ್ಟಾಗ್ರಾಂ ನಲ್ಲಿ ಮುಳುಗಿರುವ ಕರೀನಾ

  ಪುಸ್ತಕಗಳನ್ನು ಓದುವ ಹವ್ಯಾಸ ಇರುವ ಸೈಫ್ ಅಲಿ ಖಾನ್, ಪುಸ್ತಕಗಳಲ್ಲಿ ಮುಳುಗಿ ಹೋಗಿದ್ದಾರಂತೆ. ಇನ್ನು ಕರೀನಾ ಇನ್‌ಸ್ಟಾಗ್ರಾಂ ನಲ್ಲಿ, ಹೀಗೆಂದು ಅವರೇ ಪೋಸ್ಟ್ ಒಂದನ್ನು ಹಾಕಿದ್ದರು. ಸೈಫ್ ಪುಸ್ತಕ ಓದುತ್ತಿರುವ, ತಾವು ಮೊಬೈಲ್ ಹಿಡಿದಿರುವ ಚಿತ್ರ ಹಂಚಿಕೊಂಡಿದ್ದರು.

  ತೈಮೂರ್‌ ಗೆ ಹೊಸ ವಿಷಯಗಳನ್ನು ಕಲಿಸುತ್ತಿದ್ದಾರೆ

  ತೈಮೂರ್‌ ಗೆ ಹೊಸ ವಿಷಯಗಳನ್ನು ಕಲಿಸುತ್ತಿದ್ದಾರೆ

  ಲಾಕ್‌ಡೌನ್ ಸಮಯದಲ್ಲಿ ಮಗ ತೈಮೂರ್‌ ಗೆ ಹೊಸ ವಿಷಯಗಳನ್ನು ಕಲಿಸಿಕೊಡುತ್ತಿರುವುದಾಗಿಯೂ ಕರೀನಾ ಹೇಳಿದ್ದರು. ಸೈಫ್ ಮತ್ತು ತೈಮೂರ್ ಗಿಡಗಳನ್ನು ಕುಂಡಕ್ಕೆ ಹಾಕುವು ಚಿತ್ರಗಳನ್ನು ಕರೀನಾ ಹಂಚಿಕೊಂಡಿದ್ದರು.

  ಹಲವು ಸಿನಿಮಾಗಳು ಬಿಡುಗಡೆಗೆ ತಯಾರಿವೆ

  ಹಲವು ಸಿನಿಮಾಗಳು ಬಿಡುಗಡೆಗೆ ತಯಾರಿವೆ

  ಗುಡ್ ನ್ಯೂಸ್ ಸಿನಿಮಾದ ಗೆಲುವಿನ ಖುಷಿಯಲ್ಲಿರುವ ಕರೀನಾ ಕಪೂರ್, ಅಮಿರ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಲಾಲ್‌ ಸಿಂಗ್ ಚಡ್ಡಾ, ವೀರೇ ದಿ ವೆಡ್ಡಿಂಗ್ 2 ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಕರಣ್ ನಿರ್ದೇಶನದ ಥಕ್ತ್ ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದ್ದು ಬಿಡುಗಡೆಗೆ ತಯಾರಾಗಿದೆ.

  English summary
  Actress Kareena Kapoor shares bikini picture in Instagram. She said i am dreaming of beaches.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X