For Quick Alerts
  ALLOW NOTIFICATIONS  
  For Daily Alerts

  ಅಮ್ಮಂದಿರ ದಿನಾಚರಣೆಗೆ 2ನೇ ಮಗನ ಫೋಟೋ ರಿವೀಲ್ ಮಾಡಿ ಕರೀನಾ ಹೇಳಿದ್ದೇನು?

  |

  ಬಾಲಿವುಡ್ ನಟಿ ಕರೀನಾ ಕಪೂರ್ ಸದ್ಯ ಎರಡು ಮುದ್ದಾದ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಜೋಡಿ ಎರಡನೇ ಮಗುವನ್ನು ಸ್ವಾಗತಿಸಿ ತಿಂಗಳುಗಳಾಗಿದೆ. ಆದರೆ ಇನ್ನೂ ಮಗುವಿನ ಫೋಟೋವನ್ನು ರಿವೀಲ್ ಮಾಡಿಲ್ಲ. ಕರೀನಾ ಕಪೂರ್ ಎರಡನೇ ಮಗ ಹೇಗಿದ್ದಾನೆ, ಹೆಸರೇನು ಇಟ್ಟಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

  ಆದರೆ ಸೈಫ್ ದಂಪತಿ ಎರಡನೇ ಮಗುವಿನ ಫೋಟೋವನ್ನು ಎಲ್ಲಿಯೂ ಶೇರ್ ಮಾಡಿಲ್ಲ. ಆದರೆ ಇವತ್ತು ಕರೀನಾ ಕಪೂರ್ ಅಮ್ಮಂದಿರ ದಿನಾಚರಣೆ ವಿಶೇಷವಾಗಿ ಎರಡನೇ ಮಗನ ಫೋಟೋವನ್ನು ಹಂಚಿಕೊಂಡಿದ್ದಾರೆ. ಮೊದಲ ಮಗ ತೈಮೂರ್ ಅಲಿ ಖಾನ್ ತನ್ನ ಪುಟ್ಟ ಕಾಲಿನ ಮೇಲೆ ತಮ್ಮನನ್ನು ಕೂರಿಸಿಕೊಂಡಿರುವ ಕಪ್ಪು-ಬಿಳುಪಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

  ಕರೀನಾ ಕಪೂರ್ ಧರಿಸಿರುವ ಈ ಮಾಸ್ಕ್‌ ಬೆಲೆ ಕೇಳಿದರೆ ಹುಬ್ಬೇರುವುದು ಖಂಡಿತ!ಕರೀನಾ ಕಪೂರ್ ಧರಿಸಿರುವ ಈ ಮಾಸ್ಕ್‌ ಬೆಲೆ ಕೇಳಿದರೆ ಹುಬ್ಬೇರುವುದು ಖಂಡಿತ!

  ಕರೀನಾ ಕಪೂರ್ ಫೋಟೋ ಶೇರ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಪುಟ್ಟ ಮಗುವಿನ ಫೋಟೋ ಸೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಕರೀನಾ ಎರಡನೇ ಪುತ್ರ ಟ್ರೆಂಡಿಂಗ್ ನಲ್ಲಿದ್ದಾನೆ. ಕರೀನಾ ಎರಡನೇ ಪುತ್ರ ಹೇಗಿದ್ದಾನೆ ಎಂದು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳು ಇಂದು ತೈಮೂರ್ ತಮ್ಮನನ್ನು ಕಣ್ತುಂಬಿಕೊಂಡಿದ್ದಾನೆ.

  ಕರೀನಾ ಕಪೂರ್ ಫೋಟೋ ಶೇರ್ ಮಾಡಿ, 'ಈ ಇಬ್ಬರೂ ನನಗೆ ಭರವಸೆ ನೀಡುತ್ತಾರೆ. ಉತ್ತಮ ನಾಳೆಗಾಗಿ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಎಲ್ಲರಿಗೂ ಅಮ್ಮಂದಿರ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದ್ದಾರೆ. ಕರೀನಾ ಸದ್ಯ ಇಬ್ಬರು ಮುದ್ದಾದ ಮಕ್ಕಳ ಜೊತೆ ಲಾಕ್ ಡೌನ್ ಕಳೆಯುತ್ತಿದ್ದಾರೆ.

  ಕನ್ನಡ ಚಿತ್ರರಂಗಕ್ಕೆ ಬಹಿರಂಗ ಪತ್ರ ಬರೆದ ಮಾಲಾಶ್ರೀ | Filmibeat Kannada

  ಎರಡನೇ ಮಗುವಿಗೆ ಜನ್ಮ ನೀಡಿ ತಿಂಗಳಲ್ಲೇ ಕರೀನಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇಷ್ಟು ಬೇಗ ಕೆಲಸಕ್ಕೆ ಹಾಜರಾಗುವ ಅವಶ್ಯಕತೆ ಏನಿತ್ತು ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು. ಆದರೆ ಕರೀನಾ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ಕೆಲಸದಲ್ಲಿ ನಿರತರಾಗಿದ್ದರು. ಇತ್ತೀಚಿಗಷ್ಟೆ ಕರೀನಾ ಕಪೂರ್ ತಂದೆ ರಣಧೀರ್ ಕಪೂರ್ ಮೊಮ್ಮಗನ ಫೋಟೋ ಹಂಚಿಕೊಂಡು ತಕ್ಷಣ ಡಿಲೀಟ್ ಮಾಡಿದ್ದರು. ಇದೀಗ ಸ್ವತಃ ಕರೀನಾ ಎರಡನೇ ಪುತ್ರನ ಫೋಟೋ ಶೇರ್ ಮಾಡುವ ಮೂಲಕ ಮಗನ ದರ್ಶನ ಮಾಡಿದ್ದಾರೆ.

  English summary
  Bollywood Actress Kareena Kapoor shares her second son photo on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X