For Quick Alerts
  ALLOW NOTIFICATIONS  
  For Daily Alerts

  IPLನಲ್ಲಿ ಅವಕಾಶ ಇದ್ಯಾ?: ಬ್ಯಾಟ್ ಹಿಡಿದು ಫೀಲ್ಡ್ ಗೆ ಇಳಿದ ನಟಿ ಕರೀನಾ ಪುತ್ರ

  |

  ಬಾಲಿವುಡ್ ನಟಿ ಕರೀನಾ ಕಪೂರ್ ತನ್ನ ಮುದ್ದು ಮಗನ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ತೈಮೂರ್ ಮಕ್ಕಳ ಜೊತೆ ಸೇರಿ ಕ್ರಿಕೆಟ್ ಆಡುತ್ತಿದ್ದಾರೆ. ಫೋಟೋ ಕರೀನಾ ಶೇರ್ ಮಾಡಿ ಐಪಿಎಲ್ ನಲ್ಲಿ ಸ್ಥಾನವಿದೆಯೇ? ಎಂದು ಕೇಳಿದ್ದಾರೆ.

  ಕರೀನಾ ಕಪೂರ್ ಮುದ್ದಿನ ಪುತ್ರ ತೈಮೂರ್ ಅಲಿ ಖಾನ್ ಫೋಟೋ ಶೇರ್ ಮಾಡುತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತೆ. ಸಾಮಾಜಿಕ ಜಾಲತಾಣದಲ್ಲಿ ತೈಮೂರ್ ಅಲಿ ಖಾನ್ ಫೋಟೋಗಳು ಆಗಾಗ ಸದ್ದು ಮಾಡುತ್ತಿರುತ್ತೆ. ಇದೀಗ ಫೀಲ್ಡ್ ಗಿಳಿದು ಬ್ಯಾಟ್ ಬೀಸುತ್ತಿರುವ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬರುತ್ತಿದೆ.

  ಎರಡನೇ ಮಗು ನಿರೀಕ್ಷೆಯಲ್ಲಿ ಕರೀನಾ ಕಪೂರ್-ಸೈಫ್ ದಂಪತಿ!

  ತೈಮೂರ್ ಅಲಿ ಖಾನ್ ಭವಿಷ್ಯದ ಬಗ್ಗೆ ಕರೀನಾ ಕಪೂರ್ ಈ ಹಿಂದೆ ಮಾತನಾಡುತ್ತ ತನ್ನ ಅಜ್ಜನ ಹಾಗೆ ಕ್ರಿಕೆಟ್ ಸ್ಟಾರ್ ಆಗಬೇಕೆನ್ನುವ ಆಸೆ ಇದೆ ಎಂದಿದ್ದರು. ರಿಯಾಲಿಟಿ ಶೋ ಒಂದರಲ್ಲಿ ಮಾತನಾಡಿದ್ದ ಕರೀನಾ ಮನ್ಸೂರ್ ಅಲಿ ಖಾನ್ ಹಾಗೆ ತೈಮೂರ್ ಕ್ರಿಕೆಟಿಗನಾಗಬೇಕು ಎನ್ನುವ ಬಯಕೆ ಇದೆ ಎಂದಿದ್ದರು.

  ಇದೀಗ ಚಿಕ್ಕ ವಯಸ್ಸಿನಲ್ಲೇ ಬ್ಯಾಟ್ ಬೀಸುವ ಮೂಲಕ ಅಮ್ಮನ ಆಸೆಯನ್ನು ಈಗಾಗಲೇ ಈಡೇರಿಸುತ್ತಿದ್ದಾರೆ ತೈಮೂರ್. ಮುದ್ದಿನ ಮಗ ಕ್ರಿಕೆಟ್ ಆಡುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಕರೀನಾ 'ಐಪಿಎಲ್ ನಲ್ಲಿ ಯಾವುದಾದರೂ ಸ್ಥಾನವಿದೆಯಾ? ನಾನು ಕೂಡ ಆಡಬಲ್ಲೆ' ಎಂದು ಬರೆದುಕೊಂಡಿದ್ದಾರೆ.

  ಸೀತಾ ವಲ್ಲಭ ಧಾರಾವಾಹಿ ಸುಪ್ರಿತಾಗೆ ಒಲಿದು ಬಂದ ಅದೃಷ್ಟ | Filmibeat Kannada

  ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿ ಪುತ್ರ ತೈಮೂರ್ ಜೊತೆ ಪಟೌಡಿಯಲ್ಲಿದ್ದಾರೆ. ಕರೀನಾ ಎರಡನೇ ಬಾರಿ ಗರ್ಭಿಣಿಯಾಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕರೀನಾ, ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಕರೀನಾ ಭಾಗದ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ.

  English summary
  Actress Kareena Kapoor shares new photo of her son Taimur ali khan playing cricket. She says Any place in IPL.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X