For Quick Alerts
  ALLOW NOTIFICATIONS  
  For Daily Alerts

  #JusticeForRhea ಟ್ರೆಂಡ್: ಸುಶಾಂತ್ ಪ್ರೇಯಸಿಯ ಪರ ನಿಂತ ಬಾಲಿವುಡ್ ಸ್ಟಾರ್ಸ್

  |

  ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಮಾದಕ ವಸ್ತು ನಿಯಂತ್ರಣ ಇಲಾಖೆ (NCB) ಬಂಧಿಸಿ ವಿಚಾರಣೆ ನಡೆಸುತ್ತಿದೆ. ರಿಯಾ ಅರೆಸ್ಟ್ ಆದ ಬಳಿಕ ಅನೇಕರು ರಿಯಾ ಬೆಂಬಲಕ್ಕೆ ನಿಂತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಿಯಾ ಪರ ಪೋಸ್ಟ್ ಹಾಕುವ ಮೂಲಕ JusticeForRhea ಎಂದು ಹ್ಯಾಶ್ ಟ್ಯಾಗ್ ಹಾಕಿ ಟ್ರೆಂಡ್ ಮಾಡಿದ್ದಾರೆ.

  Rhea Chakroborty ಬೆಂಬಲಕ್ಕೆ ನಿಂತು Bollywood | Oneindia Kannada

  ಡ್ರಗ್ಸ್ ಪ್ರಕರಣದಲ್ಲಿ ಮೂರನೇ ದಿನದ ವಿಚಾರಣೆ ವೇಳೆ NCB ರಿಯಾ ಅವರನ್ನು ಬಂಧಿಸಿದೆ. ವಿಚಾರಣೆಗೆ ಹಾಜರಾಗುವ ವೇಳೆ ರಿಯಾ ಧರಿಸಿದ್ದ ಟಿ ಶರ್ಟ್ ಎಲ್ಲರ ಗಮನ ಸೆಳೆಯುತ್ತಿದೆ. ಕಾರಣ ಟಿ ಶರ್ಟ್ ಮೇಲೆ ಬರೆದಿರುವ ಸಾಲುಗಳು. "ಗುಲಾಬಿ ಕೆಂಪಾಗಿರುತ್ತೆ, ನೇರಳೆ ನೀಲಿಯಾಗಿ ಇರುತ್ತೆ. ಹಾಗೆಯೇ ನಾನು ನೀನು ಸೇರಿಕೊಂಡು ಪುರುಷ ಪ್ರಧಾನ ವ್ಯವಸ್ಥೆಯನ್ನು ಪುಡಿ ಮಾಡೋಣ" ಎಂದು ಬರೆದಿರುವ ಟಿ ಶರ್ಟ್ ಧರಿಸುವ ಮೂಲಕ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಅರೆಸ್ಟ್ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಅರೆಸ್ಟ್

  ರಿಯಾ ಚಕ್ರವರ್ತಿ ಧರಿಸಿದ್ದ ಟಿ ಶರ್ಟ್ ಮೇಲಿರುವ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಾಲಿವುಡ್ ಸೆಲೆಬ್ರಿಟಿಗಳು ಈ ಸಾಲುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ರಿಯಾ ಚಕ್ರವರ್ತಿ ಬೆಂಬಲಕ್ಕೆ ನಿಂತಿದ್ದಾರೆ.

  ನಟಿ ವಿದ್ಯಾ ಬಾಲನ್, ಕರಿನಾ ಕಪೂರ್, ಸೋನಂ ಕಪೂರ್, ಅತಿಯಾ ಶೆಟ್ಟಿ, ಶ್ವೇತಾ ಬಚ್ಚನ್, ದಿಯಾ ಮಿರ್ಜಾ, ಫರಾನ್ ಅಖ್ತಾರ್, ಅಭಯ್ ಡಿಯೋಲ್, ಮಲೈಕಾ ಅರೋರಾ, ಅನುರಾಗ್ ಕಶ್ಯಪ್ ಸೇರಿದಂತೆ ಬಾಲಿವುಡ್ ನ ಬಹುತೇಕ ಮಂದಿ ರಿಯಾ ಬೆಂಬಲಕ್ಕೆ ಬಂದಿದ್ದಾರೆ.

  ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ವೇಳೆ ಡ್ರಗ್ಸ್ ಜಾಲದ ನಂಟು ಇರುವುದು ಬಹಿರಂಗವಾಗಿದೆ. ನಟಿ ರಿಯಾ ಚಕ್ರವರ್ತಿ ಸುಶಾಂತ್ ಗಾಗಿ ಡ್ರಗ್ಸ್ ಖರೀದಿಸುತ್ತಿದ್ದೆ ಎಂದು NCB ಮುಂದೆ ಒಪ್ಪಿಕೊಂಡಿದ್ದಾರೆ. ಈಗಾಗಲೇ ಈ ಸಂಬಂಧ NCB ರಿಯಾ ಸಹೋದರ ಮತ್ತು ಸುಶಾಂತ್ ಮನೆಯ ಮ್ಯಾನೇಜರ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  English summary
  Kareena Kapoor, Sonam Kapoor, Vidya Balan, Taapsee Pannu and other Bollywood celebrities support to Rhea Chakraborty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X