ಟ್ರೋಲ್‌ಗೆ ಸಿಲುಕಿದ ಕತ್ರಿನಾ ಮಾಜಿ ಪ್ರೇಮಿಯ ಸಹೋದರಿ: ಕರೀನಾ ಮದುವೆಗೆ ವಿಶ್ ಮಾಡಿದ್ದೇ ತಪ್ಪಾ?

ಬಾಲಿವುಡ್‌ನಲ್ಲಿ ಸದ್ಯ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಮದುವೆ ಬಗ್ಗೆಯೆ ಹೆಚ್ಚಾಗಿ ಸುದ್ದಿ ಹರಿದಾಡುತ್ತಿದೆ. ಗುಟ್ಟಾಗಿ ಮದುವೆ ಆದ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಕೊನೆಗೂ ಮದುವೆ ಬಳಿಕ ತಮ್ಮ ಫೋಟೊಗಳನ್ನು ಹಂಚಿಕೊಳ್ಳುವುದರ ಮೂಲಕ ಮದುವೆ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ. ಹೀಗೆ ಕತ್ರಿನಾ ಪೋಸ್ಟ್‌ಗೆ ನಟಿ ಕರೀನಾ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. ನವ ನೋಡಿಗೆ ಶುಭಕೋರಿದ್ದಾರೆ. ಆದರೆ ವಿಶ್ ಮಾಡುತ್ತಲೇ ಕರೀನಾ ಕಪೂರ್ ಸಿಕ್ಕಾಪಟ್ಟೆ ಟ್ರೋಲ್ ಆಗಿ ಬಿಟ್ಟಿದ್ದಾರೆ.

ಈ ಜೋಡಿ ಮದುವೆ ವಿಚಾರವನ್ನು ಹಂಚಿಕೊಳ್ಳುತ್ತಲೇ ಬಾಲಿವುಡ್‌ ಸಿನಿಮಾ ಮಂದಿಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅಂತೆಯೇ ಬಾಲಿವುಡ್‌ನ ಹಲವು ಸಿನಿಮಾ ಸ್ಟಾರ್‌ಗಳು ಈ ಜೋಡಿಗೆ ಶುಭ ಕೋರಿದ್ದಾರೆ.

ಹೀಗೆ ಕತ್ರಿನಾ ಪೋಸ್ಟ್‌ಗೆ ನಟಿ ಕರೀನಾ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. ನವ ನೋಡಿಗೆ ಶುಭಕೋರಿದ್ದಾರೆ. ಆದರೆ ವಿಶ್ ಮಾಡುತ್ತಲೇ ಕರೀನಾ ಕಪೂರ್ ಸಿಕ್ಕಾ ಪಟ್ಟೆ ಟ್ರೋಲ್ ಆಗಿ ಬಿಟ್ಟಿದ್ದಾರೆ. ಅದು ಯಾಕೆ ಎನ್ನುವ ವಿಚಾರ ಇಲ್ಲಿದೆ. ಮುಂದೆ ಓದಿ...

ಮದುವೆ ಬಳಿಕ ಕತ್ರಿನಾಳನ್ನು ಫಾಲೋ ಮಾಡ್ತಿರೊ ಕರೀನಾ!

ಮದುವೆ ಬಳಿಕ ಕತ್ರಿನಾಳನ್ನು ಫಾಲೋ ಮಾಡ್ತಿರೊ ಕರೀನಾ!

ಎಲ್ಲರಂತೆಯೇ ನಟಿ ಕರೀನಾ ಕಪೂರ್ ಕೂಡ ಕತ್ರಿನಾ ಮತ್ತು ವಿಕ್ಕಿ ದಂಪತಿಗೆ ಸಾಮಾಜಿಕ ಜಾಲತಾಣದ ಮೂಲಕ ಶುಭಕೋರಿದ್ದಾರೆ. ಆದರೆ ಕರೀನಾ ಮಾತ್ರ ಟ್ರೋಲ್‌ಗೆ ತುತ್ತಾಗಿದ್ದಾರೆ. ಕಾರಣ ಕತ್ರಿನಾ ವಿಕ್ಕಿ ಕೌಶಲ್ ಕೈ ಹಿಡಿದ ಬಳಿಕ ಕರೀನಾ ಆಕೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡ್ತಿದ್ದಾರೆ ಎನ್ನಲಾಗಿದೆ.

ಕಮೆಂಟ್‌ನಲ್ಲಿ ಕರೀನಾ ಕಾಲೆಳೆದ ಕತ್ರಿನಾ ಅಭಿಮಾನಿ!

ಇನ್ನು ಕತ್ರಿನಾ ಪೋಸ್ಟ್‌ಗೆ ನಟಿ ಕರೀನಾ ಕಪೂರ್‌ ಶುಭ ಕೋರಿದ್ದಾರೆ "ಯು ಡಿಡ್ ಇಟ್ ಗಾಡ್ ಬ್ಲೆಸ್ ಯು ಬೊತ್" ಅಂತ ಇಂಗ್ಲೀಸ್‌ನಲ್ಲಿ ಕರೀನಾ ಕಮೆಂಟ್ ಮಾಡಿದ್ದಾರೆ. ಕರೀನಾಳ ಕಮೆಂಟ್‌ಗೆ ಪ್ರತಿಕ್ರಿಯೆ ನೀಡಿದ ಅಭಿಮಾನಿ ಒಬ್ಬರು 'ಕರೀನಾ ಕತ್ರಿನಾ ಅವರನ್ನು ಫಾಲೋ ಮಾಡಲು ಅವರ ಮದುವೆ ಆಗಬೇಕಾಯ್ತು, ಕೊನೆಗೂ ಕರೀನಾ ಕತ್ರಿನಾ ಅವರನ್ನು ಫಾಲೋ ಮಾಡ್ತಿದ್ದಾರೆ' ಅಂತ ಬರೆದುಕೊಂಡು ಫೊಟೋವನ್ನು ಅಪ್ಲೋಡ್ ಮಾಡಿದ್ದಾರೆ.

ರಣ್ಬೀರ್- ಕತ್ರಿನಾ ಬ್ರೇಕಪ್ ಬಳಿಕಾ ಕೋಲ್ಡ್ ವಾರ್!

ರಣ್ಬೀರ್- ಕತ್ರಿನಾ ಬ್ರೇಕಪ್ ಬಳಿಕಾ ಕೋಲ್ಡ್ ವಾರ್!

ಅಷ್ಟಕ್ಕೂ ಕತ್ರಿನಾ ಮತ್ತು ಕರೀನಾ ಕಪೂರ್ ನಡುವೆ ವೈಮನಸ್ಸು ಇತ್ತ ಎಂದರೆ? ಹೌದು ಎನ್ನುತ್ತವೆ ಬಾಲಿವುಡ್‌ ಮೂಲಗಳು. ಇದಕ್ಕೆ ಕಾರಣ ರಣ್ಬೀರ್ ಮತ್ತು ಕತ್ರಿನಾ ಪ್ರೀತಿ ಮುರಿದು ಬಿದ್ದದ್ದು. ಆರು ವರ್ಷಗಳ ಹಿಂದೆ ಕತ್ರಿನಾ ಮತ್ತು ರಣ್ಬೀರ್ ಲವ್ವಿ-ಡವ್ವಿ ಬಾಲಿವುಡ್‌ನಲ್ಲಿ ಜೋರಾಗಿತ್ತು. ಆದರೆ ಆರು ವರ್ಷಗಳ ಹಿಂದೆಯೇ ಈ ಜೋಡಿಯ ಲವ್‌ ಬ್ರೇಕಪ್‌ ಆಗಿದೆ. ಆಗಿನಿಂದ ರಣ್ಬೀರ್ ಸಹೋದರಿ ಕರೀನಾ ಮತ್ತು ಕತ್ರಿನಾ ನಡುವೆ ಒಂದು ರೀತಿಯ ಕೋಲ್ಡ್ ವಾರ್ ಇತ್ತು. ಹಾಗಾಗಿ ಕರೀನಾ ಕತ್ರಿನಾಳಿಂದ ಅಂತರ ಕಾಯ್ದು ಕೊಂಡಿದ್ದರು. ಈಗ ಮನಸ್ಸು ಬದಲಾಯಿಸಿ ಕತ್ರಿನಾ ಮದುವೆ ಬಳಿಕ ಆಕೆಯನ್ನು ಫಾಲೋ ಮಾಡುತ್ತಿದ್ದು, ನವ ಜೋಡಿಗೆ ಶುಭ ಕೋರಿದ್ದಾರೆ.

ನವ ಬಾಳಿಗೆ ಕಾಲಿಟ್ಟ ಕತ್ರಿನಾ-ವಿಕ್ಕಿ!

ನವ ಬಾಳಿಗೆ ಕಾಲಿಟ್ಟ ಕತ್ರಿನಾ-ವಿಕ್ಕಿ!

ಇನ್ನು ಯಾವುದೇ ಸುಳಿವು ಬಿಟ್ಟು ಕೊಡದೇ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಸದ್ಯ ರಾಜಸ್ಥಾನದ ಕೋಟೆಯಲ್ಲಿ ಈ ಜೋಡಿ ಅದ್ದೂರಿಯಾಗಿ ಮದುವೆ ಆಗಿದೆ. ಮದುವೆಯ ಬಳಿಕ ಫೊಟೋ ಹಂಚಿಕೊಂಡು ಎಲ್ಲರಿಗೂ ಧನ್ಯವಾದ ತಿಳಿಸಿದೆ ಈ ಜೋಡಿ. ಪೋಸ್ಟ್ ಹಾಕುತ್ತಲೇ ಈ ಜೋಡಿಗೆ ಶುಭಾಷಯದ ಮಹಾಪೂರವೇ ಹರಿದು ಬರ್ತಿದೆ. ಈ ನಡುವೆ ಕರೀನಾ ಕಪೂರ್ ಮಾತ್ರ ಟ್ರೋಲ್‌ಗೆ ಸಿಲುಕಿದ್ದಾರೆ.

More from Filmibeat

English summary
Kareena kapoor Trolled For Following Katrina In social Media After Marriege,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X