ಪಾಕಿಸ್ತಾನದ ಡಿಸೈನರ್ ಜೊತೆ ದುಬೈನಲ್ಲಿ ಕಾಣಿಸಿಕೊಂಡ ಕರೀನಾ ಕಪೂರ್ ; ದೇಶದ್ರೋಹಿ ಎಂದು ಆಕ್ರೋಶ..!
ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಪ್ರವಾಸಿಗರ ಹತ್ಯೆಗೈಯಲಾಗಿದೆ. ಪಾಕಿಸ್ತಾನದ ವಿರುದ್ಧ ಭಾರತ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ದೇಶದೆಲ್ಲೆಡೆ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು ಪಾಪಿ ಪಾಕಿಸ್ತಾನದ ಹೆಸರು ಕೇಳಿದರೆ ಸಾಕು ಅನೇಕರ ರಕ್ತ ಕುದಿಯುತ್ತಿದೆ. ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಘೋಷಿಸಬೇಕು ಎನ್ನುವ ಅಭಿಪ್ರಾಯ ಕೂಡ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಹೀಗಿರುವಾಗ ಶತ್ರು ರಾಷ್ಟ್ರದ ವ್ಯಕ್ತಿಯ ಜೊತೆ ಬಾಲಿವುಡ್‌ನ ಚೆಲುವೆ ಕರೀನಾ ಕಪೂರ್ ಖಾನ್ ಕಾಲ ಕಳೆದಿದ್ದಾರೆ. ನೆನಪಿಗಿರಲಿ ಎಂದು ಫೋಟೊ ಕೂಡ ತೆಗೆಸಿಕೊಂಡಿದ್ದಾರೆ. ಕರೀನಾ ಕಪೂರ್ ಅವರ ಈ ನಡೆ ಈಗ ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ಕರೀನಾ ಕಪೂರ್ ದುಬೈನಲ್ಲಿ ಪಾಕಿಸ್ತಾನದ ಡಿಸೈನರ್ ಫರಾಜ್ ಮನನ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕರೀನಾ ಕಪೂರ್ ತಮ್ಮ ಈ ಭೇಟಿಯ ಫೋಟೊವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲವಾದರೂ ಕರೀನಾ ಕಪೂರ್ ಅವರನ್ನು ಭೇಟಿಯಾದ ಖುಷಿಯಲ್ಲಿ ಫರಾಜ್ ಮನನ್ ಫೋಟೊವನ್ನು ಹಂಚಿಕೊಂಡಿದ್ದಾರೆ.
ಫರಾಜ್ ಮನನ್ ಫೋಟೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಕರೀನಾ ಕಪೂರ್ ಅವರನ್ನು ಅನೇಕರು ಸದ್ಯ ದೇಶದ್ರೋಹಿ ಎಂದು ಕರೆಯುತ್ತಿದ್ದಾರೆ. ಕರೀನಾ ಕಪೂರ್ ಅವರ ಚಿತ್ರಗಳನ್ನು ಬಾಯ್ಕಾಟ್ ಮಾಡಿ ಅವರ ಚಿತ್ರಗಳನ್ನು ನೋಡಬೇಡಿ ಎಂದು ಕರೆಯನ್ನು ಕೊಡುತ್ತಿದ್ದಾರೆ.
ಇನ್ನು, ಕಳೆದ ವರ್ಷ ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವೆ ಯುದ್ಧ ನಡೆದ ಸಮಯದಲ್ಲಿ ಕರೀನಾ ಕಪೂರ್ ಪ್ಯಾಲೆಸ್ತೇನ್‌ಗೆ ಬೆಂಬಲ ಸೂಚಿಸಿದ್ದರು. ಅಲ್ಲಿನ ಸ್ಥಿತಿಯನ್ನು ಕಂಡು ಮರುಗಿದ್ದರು.
ಈ ವಿಚಾರವನ್ನು ಈಗ ನೆನಪು ಮಾಡಿಕೊಳ್ಳುತ್ತಿರುವ ಅನೇಕರು ಕಳೆದ ವರ್ಷ ಕರೀನಾ ಕಪೂರ್ ಪ್ಯಾಲೆಸ್ತೇನ್‌ಗೆ ಬೆಂಬಲ ಸೂಚಿಸಿದ್ದರು ಆದರೆ ಈಗ ತಮ್ಮ ಸ್ವಂತ ದೇಶದ ಜೊತೆ ಅವರಿಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ರಾಷ್ಟ್ರಕ್ಕಾಗಿ ತ್ಯಾಗವನ್ನು ಕೇವಲ ಭಾರತದ ಸೈನ್ಯ ಮಾತ್ರ ಮಾಡಬೇಕಾ ? ಬಾಲಿವುಡ್‌ನ ಈ ಸೆಲೆಬ್ರಿಟಿಗಳಿಗೆ ತಮ್ಮ ಕರ್ತವ್ಯದ ಅರಿವು ಇಲ್ವಾ ? ಎಂದು ಕಿಡಿ ಕಾರುತ್ತಿದ್ದಾರೆ.
ಶತ್ರುಗಳ ಜೊತೆ ಕೂ ಜೋಡಿಸಲು ನಾವು ಇವರನ್ನು ಬೆಳೆಸಿದ್ದಾ, ಇದು ನಾಚಿಕೆಗೇಡಿನ ವರ್ತನೆ ಎಂದು ಒಬ್ಬರು ಹೇಳಿದರೆ, ಬಾಲಿವುಡ್ ಸ್ಟಾರ್‌ಗಳನ್ನೆಲ್ಲ ಬಾಯ್ಕಾಟ್ ಮಾಡಬೇಕೆಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. #BoycottBollywood ಹ್ಯಾಶ್ ಟ್ಯಾಗ್‌ನಡಿ ತಮ್ಮ ಆಕ್ರೋಶವನ್ನು ಅನೇಕರು ಹೊರ ಹಾಕುತ್ತಿದ್ದಾರೆ.
ಅಂದ್ಹಾಗೇ ಪಹಲ್ಗಾಮ್ ನಲ್ಲಿ ಅಮಾಯಕರ ಪ್ರಾಣವನ್ನು ಭಯೋತ್ಪಾದಕರು ಬಲಿ ಪಡೆದ ನಂತರ, ಕರೀನಾ ಕಪೂರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಉಗ್ರರ ವಿರುದ್ದ ಕಿಡಿ ಕಾರಿದ್ದರು. ಪಹಲ್ಗಾಮ್ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಹೃದಯ ಮಿಡಿಯುತ್ತಿದೆ, ಜೀವ ಕಳೆದುಕೊಂಡವರಿಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದರು.
ಇನ್ನುಳಿದಂತೆ ಸದ್ಯ ಕರೀನಾ ಕಪೂರ್ ದೈರಾ ಎಂಬ ಚಿತ್ರವನ್ನು ಮಾಡುತ್ತಿದ್ದಾರೆ. ಮಲಯಾಳಂನ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದಲ್ಲಿ ಕರೀನಾ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಖ್ಯಾತ ನಿರ್ದೇಶಕಿ ಮೇಘನಾ ಗುಲ್ಜಾರ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದ್ದು ಈ ವರ್ಷದ ಅಂತ್ಯಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.


Click it and Unblock the Notifications











