For Quick Alerts
  ALLOW NOTIFICATIONS  
  For Daily Alerts

  ಕರೀನಾ ಕಪೂರ್ ಧರಿಸಿರುವ ಈ ಮಾಸ್ಕ್‌ ಬೆಲೆ ಕೇಳಿದರೆ ಹುಬ್ಬೇರುವುದು ಖಂಡಿತ!

  |

  ಕೊರೊನಾ ಬಂದಾಗಿನಿಂದಲೂ ಮಾಸ್ಕ್‌ ಬಳಕೆ ಕಡ್ಡಾಯ. ಎನ್‌ 95 ಹಾಗೂ ಅದಕ್ಕಿಂತಲೂ ಉತ್ತಮ ಗುಣಮಟ್ಟದ ಮಾಸ್ಕ್ ಬಳಕೆ ಒಳ್ಳೆಯದು ಅದಿಲ್ಲದಿದ್ದರೆ ಸಾಮಾನ್ಯ ಸರ್ಜಿಕಲ್ ಮಾಸ್ಕ್ ಅಥವಾ ಮನೆಯಲ್ಲಿಯೇ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಸಹ ನಡೆದೀತು.

  ಕಾಲು ಲಕ್ಷದ ಮಾಸ್ಕ್ ಹಾಕಿರೋ ಸೆಲ್ಫೀ ಫೋಟೋ ಶೇರ್ ಮಾಡಿದ ನಟಿ ಕರೀನಾ ಕಪೂರ್ | Filmibeat Kannada

  ಆದರೆ ಕೆಲವರಿಗೆ ಎಲ್ಲದರಲ್ಲೂ ತಮ್ಮ ಶ್ರೀಮಂತಿಕೆ ಪ್ರದರ್ಶನ ಮಾಡುವ ಹಪಹಪಿ. ಅಂಥಹವರಲ್ಲಿ ಒಬ್ಬರು ಬಾಲಿವುಡ್‌ನ ಬೆಬೊ ಕರೀನಾ ಕಪೂರ್. ಭಾರಿ ದುಬಾರಿ ಮಾಸ್ಕ್ ಖರೀದಿಸಿ, ಧರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ ಕಪೂರ್ ಖಾಂದಾನ್‌ನ ಈ ನಟಿ.

  ಮಾಸ್ಕ್ ಧರಿಸಿರುವ ಸೆಲ್ಫಿಯೊಂದನ್ನು ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಕರೀನಾ. ಚಿತ್ರದಲ್ಲಿ ಕರೀನಾ ಕಪೂರ್ ಧರಿಸಿರುವ ಮಾಸ್ಕ್‌ನ ಬೆಲೆ 26,000 ರೂಪಾಯಿ! ವಿಶ್ವದ ದುಬಾರಿ ಬ್ರ್ಯಾಂಡ್‌ಗಳಲ್ಲಿ ಒಂದಾದ ಲೂಯಿ ವಿಟೊನ್‌ನ ಈ ಮಾಸ್ಕ್‌ನ ಬೆಲೆ ಕಾಲು ಲಕ್ಷಕ್ಕಿಂತಲೂ ಒಂದು ಸಾವಿರ ಹೆಚ್ಚು. ಈ ಮಾಸ್ಕ್‌ ಅನ್ನು ದುಬಾರಿ ಬಟ್ಟೆಯಿಂದ ಮಾಡಲಾಗಿದೆಯಂತೆ. ಮಾಸ್ಕ್‌ ಅನ್ನು ಇಟ್ಟುಕೊಳ್ಳಲೆಂದು ಪ್ರತ್ಯೇಕ ಕೈಚೀಲವೂ ಇದೆಯಂತೆ. ಮಾಸ್ಕ್‌ ಮೇಲೆ ಎಲ್‌ವಿ ಎಂದು ಲೂಯಿ ವಿಟೊನ್‌ನ ಲೋಗೋ ಎಂಬ್ರಾಯ್ಡರಿ ಮಾಡಲಾಗಿದೆ.

  ಈ ಮಾಸ್ಕ್ ಕೇವಲ ಕರೀನಾ ಬಳಿ ಮಾತ್ರವೇ ಇಲ್ಲ. ಇದೇ ಬ್ರ್ಯಾಂಡ್‌ನ ಮಾಸ್ಕ್ ಅನ್ನು ನಟಿ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್ ಇನ್ನೂ ಕೆಲವರು ಬಳಸುತ್ತಾರೆ. ಮಾಸ್ಕ್‌ ಎಂಬುದು ಜೀವರಕ್ಷಕ ಎಂದು ಸರ್ಕಾರ ಗಂಟಲು ಹರಿದುಕೊಳ್ಳುತ್ತಿದ್ದರೆ ಮಾಸ್ಕ್ ಅನ್ನು ಸ್ಟೇಟಸ್ ಸಿಂಬಲ್ ಆಗಿ ಬದಲಾಯಿಸಿದ್ದಾರೆ ಕೆಲವು ಹಣವಂತ ಮಂದಿ. ಕೊರೊನಾರ ಆರಂಭದ ದಿನಗಳಲ್ಲಿ ಕೆಲವು ಪುಣ್ಯಾತ್ಮರು ಚಿನ್ನದ ಮಾಸ್ಕ್ ಧರಿಸಿ ಸಹ ಸುದ್ದಿಯಾಗಿದ್ದರು.

  English summary
  Bollywood actress Kareena Kapoor wearing Louis Vuitton brand mask worth Rs 26000 in India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X