ಮಾಜಿ ಪ್ರಿಯಕರನ ಹೆಸರು ಕೇಳಿ ತಬ್ಬಿಬ್ಬಾದ ಕರೀನಾ ಕಪೂರ್ ಖಾನ್, ಹೇಗಿತ್ತು ರಿಯ್ಯಾಕ್ಷನ್..?
ಇನ್ನೇನು ಮದುವೆಯಾಗಿಯೇ ಬಿಡುವಂತೆ ಚಿತ್ರರಂಗದಲ್ಲಿ ಅನೇಕರು ಓಡಾಡುತ್ತಾರೆ. ಊರುಕೇರಿಯೆಲ್ಲ ಸುತ್ತಾಡುತ್ತಾರೆ. ಆ ನಂತರ ಕಾರಣವನ್ನು ಹೇಳದೇ ದೂರವಾಗುತ್ತಾರೆ. ಎದುರು ಬದುರಾದರೂ ಪರಿಚಯವೇ ಇಲ್ಲವೆಂಬಂತೆ ಹಾದು ಹೋಗುತ್ತಾರೆ. ಇದಕ್ಕೆ ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಉದಾಹರಣೆ.
ಹೌದು, ಒಂದು ಕಾಲದಲ್ಲಿ ಪ್ರೇಮದ ಅಮಲನ್ನೇರಿಸಿಕೊಂಡಿದ್ದವರು ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್. ಫಿದಾ.. ಚುಪ್ ಚುಪ್ಕೇ.. ಮಿಲೆಂಗೆ ಮಿಲೆಂಗೆ.. 36 ಚೈನಾ ಟೌನ್.. ಹೀಗೆ ಒಂದಾದ ಮೇಲೊಂದು ಜೊತೆಯಾಗಿ ಚಿತ್ರಗಳನ್ನು ಮಾಡಿದ್ದ ಇಬ್ಬರಿಗೆ ಜಬ್ ವಿ ಮೆಟ್ ಚಿತ್ರ ಅಪಾರ ಹೆಸರನ್ನು ತಂದು ಕೊಡ್ತು. ಆದರೆ.. ಆ ನಂತರ ಸಂಬಂಧ ಮಾತ್ರ ಮುರಿದು ಬಿತ್ತು. ಆ ನಂತರ ಸೈಫ್ ಅಲಿ ಖಾನ್ ಅವರನ್ನು ಕರೀನಾ ಕಪೂರ್ ಮದುವೆಯಾದರು. ಮೀರಾ ರಜಪೂತ್ ಜೊತೆ ಶಾಹಿದ್ ಕಪೂರ್ ಸಪ್ತಪದಿಯನ್ನು ತುಳಿದರು. ಸದ್ಯಕ್ಕೆ ಇಬ್ಬರು ತಮ್ಮ ತಮ್ಮ ಬದುಕಿನಲ್ಲಿ ನೆಮ್ಮದಿಯಾಗಿದ್ದಾರೆ. ತುಂಬಾ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದಾರೆ. ಹೀಗಿರುವಾಗ ತಮ್ಮ ಮಾಜಿ ಪ್ರಿಯಕರ ಶಾಹಿದ್ ಹೆಸರು ಕೇಳಿ ಕರೀನಾ ಕಪೂರ್ ಖಾನ್ ಗೊಂದಲಕ್ಕೀಡು ಮಾಡಿದ, ತಬ್ಬಿಬ್ಬಾಗಿಸಿದ ಪ್ರಸಂಗವೊಂದು ನಡೆದಿದೆ.

ಹೌದು, ಅಸಲಿಗೆ ಏಕ್ತಾ ಕಪೂರ್ ಜೊತೆ ಸೇರಿ ಕರೀನಾ ಕಪೂರ್ ಖಾನ್ ಚಿತ್ರವೊಂದನ್ನು ನಿರ್ಮಾಣ ಮಾಡಿದ್ಧಾರೆ. ಆ ಚಿತ್ರದ ಹೆಸರು 'ದಿ ಬಕ್ಕಿಂಗ್ ಹ್ಯಾಮ್ ಮರ್ಡರ್ಸ್. 1992 ಸ್ಕ್ಯಾಮ್, ದಿ ತೆಲಗಿ ಸ್ಟೋರಿ ಅಂತಹ ವೆಬ್ ಸರಣಿಯ ರೂವಾರಿ ಹನ್ಸಲ್ ಮೆಹ್ತಾ ನಿರ್ದೇಶನದಲ್ಲಿ ಇನ್ನೇನು ಈ ಸೆಪ್ಟೆಂಬರ್ 13ರಂದು ತೆರೆಗೆ ಬರಲಿದೆ.
ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ಶುರು ಮಾಡಿರುವ ತಂಡ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಇದೇ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರೊಬ್ಬರು ನಿರ್ದೇಶಕ ಹನ್ಸಲ್ ಮೆಹ್ತಾ ಅವರ ನಿರ್ದೇಶನದಲ್ಲಿ ಹಿಂದೆ ಬಂದಿದ್ದ ಶಾಹಿದ್ ಚಿತ್ರವನ್ನು ನೆನಪು ಮಾಡಿಕೊಂಡು ಆ ಚಿತ್ರಕ್ಕೆ ಸಂಬಂಧಿಸಿದ ಪ್ರಶ್ನೆಯೊಂದನ್ನು ಕೇಳಿದ್ದಾರೆ. ನೀವು ಶಾಹಿದ್‌ನಂತಹ ಚಿತ್ರವನ್ನು ಮಾಡಿದವರು. ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದವರು. ಈ ಚಿತ್ರದ ಟ್ರೇಲರ್ ನೋಡ್ತಿದ್ದರೆ, ಆ ಚಿತ್ರದಲ್ಲಿರುವಂತಹ ಸೂಕ್ಷ್ಮ ವಿಚಾರಗಳು ಇಲ್ಲಿವೆ ಅನಸುತ್ತೆ. ಹೀಗಾಗಿ ಈ ಚಿತ್ರ ಮಾಡುವಾಗ ನಿಮಗೆ ಎದುರಾದ ಸವಾಲುಗಳೇನು ಎಂದು ಕೇಳಿದ್ದಾರೆ.
ಈ ಪ್ರಶ್ನೆಯನ್ನು ಪತ್ರಕರ್ತರು ಆ ಕಡೆ ಕೇಳುತ್ತಿದ್ದರೆ, ಈ ಕಡೆ ಶಾಹಿದ್ ಹೆಸರು ಕೇಳಿ ಕರೀನಾ ಕಪೂರ್ ಗಲಿಬಿಲಿಗೊಂಡಿದ್ದಾರೆ. ಕರೀನಾ ಮುಖಭಾವ ನೋಡುತ್ತಿದ್ದರೆ ಶಾಹಿದ್ ಕಪೂರ್ ಜೊತೆ ಹನ್ಸಲ್ ಮೆಹ್ತಾ ಸಿನಿಮಾ ಮಾಡಿದ್ದು ಯಾವಾಗ ಎನ್ನುವ ಆಲೋಚನೆ ಮಾಡುವಂತೆ ಕಾಣುತ್ತೆ.
ಆ ನಂತರ ಮಾತನಾಡುತ್ತಿರುವುದು ಶಾಹಿದ್ ಕಪೂರ್ ಕುರಿತು ಅಲ್ಲ ಶಾಹಿದ್ ಚಿತ್ರದ ಬಗ್ಗೆ ಎಂದು ಕರೀನಾ ಕಪೂರ್ ಅವರಿಗೆ ಮನವರಿಕೆಯಾದಂತೆ ಇದೆ. ಹೀಗಾಗಿ ಶಾಹಿದ್, ಶಾಹಿದ್ ಎಂದು ನಸು ನಕ್ಕಿದ್ದಾರೆ. ಕರೀನಾ ಅವರ ಈ ನಗು ಅಲ್ಲಿದ್ದವರು ಕೂಡ ಕಿರುಚಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತರ ತರಹದ ಅಭಿಮಾನಿಗಳು ವ್ಯಕ್ತವಾಗುತ್ತಿವೆ.


Click it and Unblock the Notifications











