ಎರಡನೇ ಮಗುವಿಗೆ ಹೆಸರು: ಕರೀನಾ-ಸೈಫ್ ಕೊಡ್ತಾರಂತೆ ಸರ್ಪ್ರೈಸ್
ಕರೀನಾ ಕಪೂರ್-ಸೈಫ್ ಅಲಿ ಖಾನ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮಗುವಿಗೆ ಹೆಸರಿಟ್ಟಾಗ ಎದ್ದಿದ್ದ ವಿವಾದದಿಂದ ಬುದ್ಧಿ ಕಲಿತಿರುವ ಈ ದಂಪತಿ ಈ ಬಾರಿ ಹೆಚ್ಚು ಯೋಚಿಸಿ ಹೆಸರಿಡುವ ನಿರ್ಣಯ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಕರೀನಾ ಕಪೂರ್, 'ನಾನು ಹಾಗೂ ಸೈಫ್ ಮಗುವಿನ ಹೆಸರಿಡುವ ಬಗ್ಗೆ ಈ ಬಾರಿ ಹೆಚ್ಚು ಯೋಚಿಸಿ, ಸಮಯ ತೆಗೆದುಕೊಂಡು, ಸರ್ಪ್ರೈಸ್ ನೀಡಲಿದ್ದೇವೆ' ಎಂದಿದ್ದಾರೆ.
'ಈಗಲೇ ಹೆಸರಿನ ಬಗ್ಗೆ ಯೋಚನೆ ಮಾಡಿಲ್ಲ, ಆದರೆ ಮಗು ಆದ ಮೇಲೆ ಸಮಯ ತೆಗೆದುಕೊಂಡು ನಿರ್ಧರಿಸಿ ಸರ್ಪೈಸ್ ನೀಡಲಿದ್ದೇವೆ' ಎಂದಿದ್ದಾರೆ. 'ಯಾವ ಹೆಸರಿಡಬೇಕು ಎಂದು ಪೋಲ್ ಮಾಡಿಬಿಡಿ, ಯಾವುದಕ್ಕೆ ಹೆಚ್ಚು ಮತ ಸಿಗುತ್ತದೆಯೋ ಆ ಹೆಸರಿಡಿ' ಎಂದು ಸಂದರ್ಶಕಿ ಕೊಟ್ಟ ಸಲಹೆಯನ್ನು ಸ್ವೀಕರಿಸಿದ ಕರೀನಾ, 'ಇದರ ಬಗ್ಗೆಯೂ ಯೋಚನೆ ಮಾಡುತ್ತೇನೆ' ಎಂದಿದ್ದಾರೆ.

ಸೈಫ್-ಕರೀನಾ ದಂಪತಿ ತಮ್ಮ ಮೊದಲ ಮಗುವಿಗೆ ತೈಮೂರ್ ಎಂದು ಹೆಸರಿಟ್ಟಿದ್ದಾರೆ. ಈ ಹೆಸರು ಭಾರಿ ವಿವಾದ ಎಬ್ಬಿಸಿತ್ತು. ತೈಮೂರ್, ಮಂಗೋಲಿಯಾ-ತುರ್ಕಿಸ್ತಾನದ ರಾಜನ ಹೆಸರು. ವಿಸ್ತರಣಾವಾದಿ, ಯುದ್ಧಪಿಪಾಸುವಾಗಿದ್ದ ಆತ ಹಲವರನ್ನು ಕೊಂದಿದ್ದ. ಅಂಥಹಾ ಹಿಂಸಾಪ್ರವೃತ್ತಿಯ ರಾಜನ ಹೆಸರು ಇಟ್ಟಿದ್ದಕ್ಕೆ ಸೈಫ್-ಕರೀನಾ ವಿಪರೀತ ಟ್ರೋಲ್ ಆಗಿದ್ದರು.
ತೈಮೂರ್ ಎಂದು ಹೆಸರಿಟ್ಟಿದ್ದಕ್ಕೆ ಭಾರಿ ವಿರೋಧ ವ್ಯಕ್ತವಾದ ನಂತರ, ಹೆಸರನ್ನು ಬದಲಾಯಿಸಲು ನಿರ್ಧರಿಸಿದ್ದರಂತೆ ಸೈಫ್ ಅಲಿ ಖಾನ್. ಆದರೆ ಕರೀನಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ತೈಮೂರ್ ಪದದ ಅರ್ಥ ಕಬ್ಬಿಣ ಎಂದು. ಮಗನ ಹೆಸರು ತೈಮೂರ್ ಎಂದೇ ಇರಲಿ ಎಂದು ಹಠ ಹಿಡಿದಿದ್ದರಂತೆ ಕರೀನಾ.
'ನನ್ನ ಮಗನನ್ನು ಐರನ್ ಮ್ಯಾನ್‌ನಂತೆ ತಯಾರು ಮಾಡುತ್ತೇನೆ ಎಂದು ನಾನು ಸೈಫ್ ಗೆ ಹೇಳಿದ್ದೆ, ನಾನೀಗ ಅದೇ ಕಾರ್ಯದಲ್ಲಿದ್ದೇನೆ' ಎಂದಿದ್ದಾರೆ ಕರೀನಾ ಕಪೂರ್.


Click it and Unblock the Notifications