ಕರೀನಾಗೆ ಮಧುಚಂದ್ರ ಮಂಚದಲ್ಲಿ ರಸಹೀನ ರಾತ್ರಿ
ಕಾರಣ ಇಷ್ಟೇ. ಪ್ರೇಮಿಗಳ ದಿನದಂದು ಅವರು ತಮ್ಮ ಪತಿ ಸೈಫ್ ಆಲಿ ಖಾನ್ ಅವರೊಂದಿಗೆ ಇರಲ್ಲವಂತೆ. ಅಯ್ಯೋ ಪಾಪ. ಈ ಬಾರಿಯ ಪ್ರೇಮಿಗಳ ದಿನಕ್ಕೆ ಸೈಫ್ ನನಗಾಗಿ ಒಲವಿನ ಉಡುಗೊರೆಯೊಂದನ್ನು ಸಿದ್ಧಮಾಡಿಕೊಂಡಿದ್ದಾರೆ. ಆದರೆ ನಾನು ಮಾತ್ರ ಅವರೊಂದಿಗೆ ಆ ದಿನ ಎಂಜಾಯ್ ಮಾಡಕ್ಕೆ ಆಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪ್ರೇಮಿಗಳ ದಿನಾಚರಣೆಯಂದು ನಾನು ಸತ್ಯಾಗ್ರಹ ಚಿತ್ರದಲ್ಲಿ ಶೂಟಿಂಗ್ ನಲ್ಲಿರುತ್ತೇನೆ. ಹಾಗಾಗಿ ಅಂದು ಅವರೊಂದಿಗೆ ಬೆರೆಯಲು ಸಾಧ್ಯವಾಗುತ್ತಿಲ್ಲ. ರಾಜಕೀಯ ಥ್ರಿಲ್ಲರ್ ಕಥಾಹಂದರದ ಈ ಚಿತ್ರಕ್ಕೆ ಪ್ರಕಾಶ್ ಝಾ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಭೋಪಾಲ್ ನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ. ಈ ಬಾರಿಯ ಪ್ರೇಮಿಗಳ ದಿನವನ್ನು ನಾನು ಅಮಿತ್ ಜಿ, ಅಜಯ್ ದೇವಗನ್ ಹಾಗೂ ಪ್ರಕಾಶ್ ಝಾ ಜೊತೆ ಸೆಲೆಬ್ರೇಟ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ ಕರೀನಾ.
ಹಾಗಾಗಿ ತಮ್ಮ ಪಾಲಿಗೆ ಈ ಬಾರಿಯ ಪ್ರೇಮಿಗಳ ದಿನ ಅಷ್ಟೇನು ನಿರಾಶಾದಾಯಕವೇನಲ್ಲ ಎನ್ನುತ್ತಾರೆ ಕರೀನಾ. ಈ ಚಿತ್ರದ ಪಾತ್ರವರ್ಗದಲ್ಲಿ ಅಮಿತಾಬ್ ಬಚ್ಚನ್, ಅರ್ಜುನ್ ರಾಂಪಾಲ್, ಮನೋಜ್ ಬಾಜ್ ಪೇಯಿ ಮುಂತಾದವರು ಇದ್ದಾರೆ.


Click it and Unblock the Notifications












