twitter
    For Quick Alerts
    ALLOW NOTIFICATIONS  
    For Daily Alerts

    ಕರೀನಾಗೆ ಮಧುಚಂದ್ರ ಮಂಚದಲ್ಲಿ ರಸಹೀನ ರಾತ್ರಿ

    By ರವಿಕಿಶೋರ್
    |

    ಈ ಬಾರಿಯ ಪ್ರೇಮಿಗಳ ದಿನಾಚರಣೆಗೆ (ಫೆ.14) ಇಡೀ ಜಗತ್ತೇ ಪ್ರೇಮಲೋಕವಾಗಿ ಬದಲಾಗುತ್ತಿದೆ. ಪ್ರೇಮಿಗಳು ತಮ್ಮ ಪ್ರೇಮ ನಿವೇದನೆಗೆ ನಾನಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಬಾಲಿವುಡ್ ಬೇಬೋ ಕರೀನಾ ಕಪೂರ್ ಪಾಲಿಗೆ ಈ ಬಾರಿಯ ವ್ಯಾಲೆಂಟೇನ್ಸ್ ಡೇ ರಸಹೀನ ರಾತ್ರಿ.

    ಕಾರಣ ಇಷ್ಟೇ. ಪ್ರೇಮಿಗಳ ದಿನದಂದು ಅವರು ತಮ್ಮ ಪತಿ ಸೈಫ್ ಆಲಿ ಖಾನ್ ಅವರೊಂದಿಗೆ ಇರಲ್ಲವಂತೆ. ಅಯ್ಯೋ ಪಾಪ. ಈ ಬಾರಿಯ ಪ್ರೇಮಿಗಳ ದಿನಕ್ಕೆ ಸೈಫ್ ನನಗಾಗಿ ಒಲವಿನ ಉಡುಗೊರೆಯೊಂದನ್ನು ಸಿದ್ಧಮಾಡಿಕೊಂಡಿದ್ದಾರೆ. ಆದರೆ ನಾನು ಮಾತ್ರ ಅವರೊಂದಿಗೆ ಆ ದಿನ ಎಂಜಾಯ್ ಮಾಡಕ್ಕೆ ಆಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಪ್ರೇಮಿಗಳ ದಿನಾಚರಣೆಯಂದು ನಾನು ಸತ್ಯಾಗ್ರಹ ಚಿತ್ರದಲ್ಲಿ ಶೂಟಿಂಗ್ ನಲ್ಲಿರುತ್ತೇನೆ. ಹಾಗಾಗಿ ಅಂದು ಅವರೊಂದಿಗೆ ಬೆರೆಯಲು ಸಾಧ್ಯವಾಗುತ್ತಿಲ್ಲ. ರಾಜಕೀಯ ಥ್ರಿಲ್ಲರ್ ಕಥಾಹಂದರದ ಈ ಚಿತ್ರಕ್ಕೆ ಪ್ರಕಾಶ್ ಝಾ ಆಕ್ಷನ್ ಕಟ್ ಹೇಳುತ್ತಿದ್ದಾರೆ.

    ಭೋಪಾಲ್ ನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ. ಈ ಬಾರಿಯ ಪ್ರೇಮಿಗಳ ದಿನವನ್ನು ನಾನು ಅಮಿತ್ ಜಿ, ಅಜಯ್ ದೇವಗನ್ ಹಾಗೂ ಪ್ರಕಾಶ್ ಝಾ ಜೊತೆ ಸೆಲೆಬ್ರೇಟ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ ಕರೀನಾ.

    ಹಾಗಾಗಿ ತಮ್ಮ ಪಾಲಿಗೆ ಈ ಬಾರಿಯ ಪ್ರೇಮಿಗಳ ದಿನ ಅಷ್ಟೇನು ನಿರಾಶಾದಾಯಕವೇನಲ್ಲ ಎನ್ನುತ್ತಾರೆ ಕರೀನಾ. ಈ ಚಿತ್ರದ ಪಾತ್ರವರ್ಗದಲ್ಲಿ ಅಮಿತಾಬ್ ಬಚ್ಚನ್, ಅರ್ಜುನ್ ರಾಂಪಾಲ್, ಮನೋಜ್ ಬಾಜ್ ಪೇಯಿ ಮುಂತಾದವರು ಇದ್ದಾರೆ.

    English summary
    Actress Kareena Kapoor said that she will be away from hubby Saif Ali Khan this valentine's day as she will be shooting for a film in Bhopal on that day. This year my Valentine's Day will be with Amitji, Ajay Devgan and Prakash Jha. So it's not that bad, she added.
    Thursday, February 7, 2013, 13:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X