»   » ಸೈಫ್-ಕರೀನಾ ಮಗ 'ತೈಮೂರ್' ಭವಿಷ್ಯದಲ್ಲಿ ಏನಾಗಬೇಕಂತೆ ಗೊತ್ತಾ?

ಸೈಫ್-ಕರೀನಾ ಮಗ 'ತೈಮೂರ್' ಭವಿಷ್ಯದಲ್ಲಿ ಏನಾಗಬೇಕಂತೆ ಗೊತ್ತಾ?

Posted By:
Subscribe to Filmibeat Kannada

ಬಾಲಿವುಡ್ ಸ್ಟಾರ್ ದಂಪತಿ ಸೈಪ್ ಅಲಿಖಾನ್ ಹಾಗೂ ಕರೀನಾ ಕಪೂರ್ ಖಾನ್ ದಂಪತಿಗೆ ಗಂಡು ಮಗು ಜನಿಸಿದ್ದು, ಆ ಮಗುವಿಗೆ 'ತೈಮೂರ್ ಅಲಿಖಾನ್ ಪಟೌಡಿ' ಎಂದು ಹೆಸರಿಟ್ಟಿದ್ದು ಗೊತ್ತೇ ಇದೆ.[ಸೈಫ್ ಅಲಿ ಖಾನ್-ಕರೀನಾ ದಂಪತಿಗೆ ಗಂಡು ಮಗು]

'ತೈಮೂರ್' ಎಂಬ ಹೆಸರು ಇಡುತ್ತಿದ್ದಂತೆ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. ಯಾಕಂದ್ರೆ, ತಮ್ಮ ಮಗುವಿಗೆ ಭಾರತದ ಮೇಲೆ ದಂಡೆತ್ತಿ ಬಂದಿದ್ದ ದಾಳಿಕೋರ 'ತೈಮೂರ್'ನ ಹೆಸರು ಇಡಲಾಗಿದೆ ಎಂಬ ಕಾರಣಕ್ಕೆ. ಈ ವಿವಾದ ತಣ್ಣಗಾಗುವಷ್ಟರಲ್ಲಿ ತಮ್ಮ ಮಗ ಭವಿಷ್ಯದಲ್ಲಿ ಏನಾಗಬೇಕೆಂಬ ಆಸೆಯನ್ನ ಕರೀನಾ ಕಪೂರ್ ವ್ಯಕ್ತಪಡಿಸಿದ್ದಾರೆ.[ಸೈಫ್-ಕರೀನಾ ಮಗನಿಗೆ 'ತೈಮೂರ್' ಎಂದು ಹೆಸರು: ಭುಗಿಲೆದ್ದ ವಿವಾದ]

Kareena wants Taimur to be a cricketer

ಹೌದು, ಸೈಫ್-ಕರೀನಾ ಜೋಡಿಗೆ 'ತೈಮೂರ್'ನನ್ನು ತಾತಾ ಮನ್ಸೂರ್ ಅಲಿ ಖಾನ್ ಪಟೌಡಿಯಂತೆ ಶ್ರೇಷ್ಟ ಕ್ರಿಕೆಟರ್ ಮಾಡುವ ಆಸೆಯಿದೆಯಂತೆ.[ಫೋಟೋ ನೋಡಿ: ಮಗು ತೈಮುರ್ ಜೊತೆ 'ಅಮ್ಮ' ಕರೀನಾ]

Kareena wants Taimur to be a cricketer

ಈ ಬಗ್ಗೆ ಕರೀನಾ ತನ್ನ ತಂದೆ ರಣ್'ದೀರ್ ಕಪೂರ್ ಬಳಿ ತೈಮೂರ್'ನನ್ನು ಆತನ ತಾತನಂತೆ ಶ್ರೇಷ್ಟ ಕ್ರಿಕೆಟ್ ಆಟಗಾರರನ್ನಾಗಿ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದೆ. ಹೀಗಾಗಿ ಮುಂದೊಂದು ದಿನ 'ತೈಮೂರ್ ಅಲಿ ಖಾನ್' ಬ್ಲೂ ಜೆರ್ಸಿ ತೊಟ್ಟು ಭಾರತದ ಕ್ರಿಕೆಟ್ ತಂಡದ ಪರ ಅಖಾಡಕ್ಕಿಳಿದರೂ ಅಚ್ಚರಿಯಿಲ್ಲ.

English summary
Kareena Kapoor Khan apparently wants her son Taimur Ali Khan Pataudi to become a cricket just like Mansoor Ali Khan Pataudi, Taimur's paternal grandfather.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada