ದುಬಾರಿ ಮೊತ್ತಕ್ಕೆ ತನ್ನ ಮನೆ ಮಾರಿದ ಕರಿಶ್ಮಾ ಕಪೂರ್

90 ರ ದಶಕದ ಟಾಪ್ ನಟಿ ಕರಿಶ್ಮಾ ಕಪೂರ್ 2003 ರಲ್ಲಿ ವಿವಾಹವಾದ ಬಳಿಕ ಚಿತ್ರರಂಗದಿಂದ ತುಸು ದೂರವೇ ಉಳಿದರು. ಆದರೆ ಅವರ ವಿವಾಹ ಜೀವನ ಅಷ್ಟೇನೂ ಚೆನ್ನಾಗಿ ಸಾಗಲಿಲ್ಲ. 2016 ರಲ್ಲಿ ಪತಿಯೊಂದಿಗೆ ವಿಚ್ಛೇಧನ ಪಡೆದು ಒಂಟಿಯಾಗಿದ್ದಾರೆ ಕರಿಶ್ಮಾ.

ಶ್ರೀಮಂತ ಕಪೂರ್ ಕುಟುಂಬದ ಈ ನಟಿ ಈಗ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ. ಹೌದು ನಟಿ ಕರಿಶ್ಮಾ ಕಪೂರ್ ಮುಂಬೈನಲ್ಲಿದ್ದ ತಮ್ಮ ಮನೆಯನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ.

1610 ಚದರ ಅಡಿಯ ಫ್ಲ್ಯಾಟ್‌ ಅನ್ನು ಮುಂಬೈನ ಖಾರ್ ವೆಸ್ಟ್‌ನಲ್ಲಿ ಹೊಂದಿದ್ದರು ಕರಿಶ್ಮಾ. 10 ನೇ ಮಹಡಿಯಲ್ಲಿದ್ದ ಈ ಫ್ಲ್ಯಾಟ್ ಹಾಗೂ ಎರಡು ಪಾರ್ಕಿಂಗ್ ಸ್ಪೇಸ್‌ ಜೊತೆಗೆ ಮಾರಾಟ ಮಾಡಿದ್ದಾರೆ ಕರಿಶ್ಮಾ ಕಪೂರ್.

Karishma Kapoor Sold Her House In Mumbai

ಡಿಸೆಂಬರ್ ನಲ್ಲಿಯೇ ಕರಿಶ್ಮಾ ತಮ್ಮ ಫ್ಲ್ಯಾಟ್ ಅನ್ನು ಅಭಾ ದಮಾನಿ ಎಂಬುವರಿಗೆ ಬರೋಬ್ಬರಿ 10.11 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಈ ಮಾರಾಟಕ್ಕೆ ಸ್ಟ್ಯಾಂಪ್ ಡ್ಯೂಟಿಯಾಗಿ 22 ಲಕ್ಷ ಕಟ್ಟಿದ್ದಾರಂತೆ ಕರಿಶ್ಮಾ.

ಕರಿಶ್ಮಾ ತಮ್ಮ ಫ್ಲ್ಯಾಟ್ ಅನ್ನು ಕಡಿಮೆ ಮೊತ್ತಕ್ಕೆ ಮಾರಿದ್ದಾರೆ ರಿಯಲ್ ಎಸ್ಟೇಟ್ ಉದ್ಯಮಿ ರಿತೇಶ್ ಮೆಹ್ತಾ. ಕರಿಶ್ಮಾ ಫ್ಲ್ಯಾಟ್ ಇದ್ದ ಸ್ಥಳದಲ್ಲಿ ಒಂದು ಚದರ ಅಡಿಗೆ 65000 ದಿಂದ 100000 ಲಕ್ಷ ಬೆಲೆ ಇದೆ ಎಂದಿದ್ದಾರೆ ಅವರು.

Recommended Video

BMC ನೋಟೀಸ್ ಗೆ ತಕ್ಕ ಉತ್ತರ ನೀಡ್ತಾರಾ Sonu Sood | Filmibeat Kannada

ಎರಡು ವರ್ಷಗಳ ಹಿಂದೆ ಬಾಂದ್ರಾ ನಲ್ಲಿದ್ದ ತಮ್ಮ ಮನೆಯನ್ನು 7 ಕೋಟಿಗೂ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದ್ದರು ಕರಿಶ್ಮಾ ಕಪೂರ್. ನಟಿಯರಾದ ಜಾಹ್ನವಿ ಕಪೂರ್, ಆಲಿಯಾ ಭಟ್ ನಟ ಹೃತಿಕ್ ರೋಷನ್ ಸಹ ಇತ್ತೀಚೆಗೆ ಮುಂಬೈನಲ್ಲಿ ದೊಡ್ಡ ದೊಡ್ಡ ಮನೆಗಳನ್ನು ಕೊಂಡುಕೊಂಡಿದ್ದಾರೆ.

More from Filmibeat

English summary
Actress Karishma Kapoor sold her house for 10.11 crore which was in Mumbai Khar Road.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X