ಮಾಜಿ ಪತಿಯ ಕರಾಳ ಮುಖ ಬಿಚ್ಚಿಟ್ಟ ನಟಿ ಕರಿಷ್ಮಾ ಕಪೂರ್!

ನಟಿ ಕರಿಷ್ಮಾ ಕಪೂರ್‌ ಬಾಲಿವುಡ್‌ ಚಿತ್ರರಂಗದ ಸ್ಟಾರ್‌ ನಟಿಯಲ್ಲಿ ಒಬ್ಬರು. ಹಲವು ವರ್ಷಗಳ ಕಾಲ ಕರಿಷ್ಮಾ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ ಆಗಿದ್ದರು. 'ಪ್ರೇಮ್‌ ಖೈದಿ' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕರಿಷ್ಮಾ ನಾಯಕಿ ಆಗಿ ಎಂಟ್ರಿ ಕೊಟ್ಟರು. ಕೂಲಿ ನಂ1, ದಿಲ್‌ ತೋ ಪಾಗಲ್‌ ಹೈ, ರಾಜಾ ಹಿಂದೂಸ್ಥಾನಿ, ಬೀವಿ ನಂ.1, ಹೀರೋ ನಂ1 ಸೇರಿದಂತೆ ಹಲವು ಸೂಪರ್‌ ಹಿಟ್‌ ಸಿನಿಮಾಗಳನ್ನು ಕೊಟ್ಟ ಖ್ಯಾತಿ ಕರಿಷ್ಮಾ ಅವರಿಗೆ ಇದೆ. ಆದರೆ ಸಿನಿಮಾ ಜೀವನದಷ್ಟು ಕಲರ್‌ಫುಲ್‌ ಆಗಿ ಇರಲಿಲ್ಲ ಅವರ ಮದುವೆ ಜೀವನ.

ಕರಿಷ್ಮಾ ತಮ್ಮ ಮದುವೆ ಜೀವನ ನರಕದಂತೆ ಇತ್ತು ಎಂದು ಈಗಾಗಲೇ ಕೆಲವು ಸಂದರ್ಶನಗಳಲ್ಲಿ ಹಂಚಿಕೊಂಡಿದ್ದಾರೆ. ಈಗ ಆಕೆಯ ಮಾಜಿ ಪತಿ ಸಂಜಯ್‌ ಕಪೂರ್‌ ಆಕೆಯನ್ನು ಹೇಗೆ ನಡೆಸಿಕೊಳ್ಳುತ್ತಿದ್ದ ಎನ್ನುವುದನ್ನು ಹೇಳಿಕೊಂಡಿದ್ದಾರೆ. ಈ ಮೂಲಕ ಪತಿಯ ಮತ್ತೊಂದು ಕರಾಳ ಮುಖವನ್ನ ಬಿಚ್ಚಿಟ್ಟಿದ್ದಾರೆ.

ನಟಿ ಕರಿಷ್ಮಾಳನ್ನು ಹರಾಜು ಹಾಕಲು ಮುಂದಾಗಿದ್ದ ಪತಿ!

ಕರಿಷ್ಮಾ ಕಪೂರ್ ತಮ್ಮ ಸಿನಿ ಕೆರಿಯರ್‌ನ ಉತ್ತುಂಗದಲ್ಲಿ ಇದ್ದಾಗಲೇ ಮದುವೆ ಆದರು. 2003ರಲ್ಲಿ ಉದ್ಯಮಿ ಸಂಜಯ್‌ ಕಪೂರ್‌ ಜೊತೆಗೆ ಕರಿಷ್ಮಾ ಸಪ್ತಪದಿ ತುಳಿದರು. ಆದರೆ ಮದುವೆ ಜೀವನ ತಾನು ಅಂದುಕೊಂಡ ಹಾಗೆ ಇರಲಿಲ್ಲ. ನಂತರ 2016ರಲ್ಲಿ ಕರಿಷ್ಮಾ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಈಗ ತಮ್ಮ ಮದುವೆ ಜೀವನದ ಕರಾಳ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಕರಿಷ್ಮಾ ಕಪೂರ್‌ ಪತಿ ಆಕೆಯನ್ನು ಹರಾಜು ಹಾಕಲು ಮುಂದಾಗಿದ್ದರಂತೆ. ಹನಿಮೂನ್‌ ನಲ್ಲಿ ಇದ್ದಾಗಲೆ ಕರಿಷ್ಮಾ ಅವರನ್ನು ಆಕೆಯ ಪತಿ ಸಂಜಯ್ ಕಪೂರ್ ಹರಾಜು ಮಾಡಲು ಯತ್ನಿಸಿದ್ದರಂತೆ.

Karisma Kapoor EX-Husband Tried To Selling Her To His Friend

ಗೆಳೆಯರೊಂದಿಗೆ ದೈಹಿಕ ಸಂಬಂಧಕ್ಕೆ ಒತ್ತಾಯ ಮಾಡುತ್ತಿದ್ದ ಪತಿ!

ಇನ್ನೂ ಕರಿಷ್ಮಾ ಪತಿ ಎಷ್ಟರ ಮಟ್ಟಿಗೆ ಆಕೆಗೆ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಮಾಡುತ್ತಿದ್ದರು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಮದುವೆ ಆದ ದಿನದಿಂದಲೇ ಪತಿ ಆಕೆಗೆ ಹಿಂಸೆ ನೀಡಲು ಆರಂಭಿಸಿದ್ದರಂತೆ. ಅಲ್ಲದೆ ಹನಿಮೂನ್‌ನಲ್ಲಿ ಇದ್ದ ಸಮಯದಲ್ಲೇ ತನ್ನ ಸ್ನೇಹಿತನ ಜೊತೆಗೆ ದೈಹಿಕ ಸಂಬಂಧಕ್ಕೆ ಒತ್ತಾಯ ಮಾಡಿದ್ದನಂತೆ. ಇದನ್ನು ಕರಿಷ್ಮಾ ನಿರಾಕರಿಸಿದ ಕಾರಣ ಕರಿಷ್ಮಾ ಮೇಲೆ ದೈಹಿಕ ಹಲ್ಲೆ ಮಾಡಿದ್ದನಂತೆ. ತನ್ನ ಸ್ನೇಹಿತ ಒಬ್ಬನಿಗೆ ಕರಿಷ್ಮಾ ಕಪೂರ್‌ ಅವರನ್ನು ಮಾರಲು ಕೂಡ ಮುಂದಾಗಿದ್ದರಂತೆ.

2014ರಲ್ಲಿ ಪತಿಯಿಂದ ವಿಚ್ಛೇದನಕ್ಕೆ ನಿರ್ಧಾರ

ಕೇವಲ ಪತಿಯಿಂದ ಮಾತ್ರವಲ್ಲ ಪತಿಯ ತಾಯಿಯಿಂದಲೂ ಸಹ ಕರಿಷ್ಮಾ ಹಿಂಸೆ ಅನುಭವಿಸಿದ್ದಾರಂತೆ. ಹಾಗಾಗಿ ಕರಿಷ್ಮಾ 2014ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ನಂತರ 2016ರಲ್ಲಿ ಪತಿ ಇಂದ ವಿಚ್ಛೇದನ ಪಡೆದು ದೂರಾಗಿದ್ದಾರೆ. 13 ವರ್ಷದ ಕಹಿ ದಾಂಪತ್ಯಕ್ಕೆ ಕರಿಷ್ಮಾ ಎಳ್ಳು ನೀರು ಬಿಟ್ಟರು. ಸದ್ಯ ಇಬ್ಬರು ಮಕ್ಕಳೊಂದಿಗೆ ಕರಿಷ್ಮಾ ಜೀವನ ನಡೆಸುತ್ತಿದ್ದಾರೆ. ಸಮೈರಾ ಕಪೂರ್ ಮತ್ತು ಕಿಯಾಣ್‌ ರಾಜ್‌ ಕಪೂರ್‌ ಇಬ್ಬರು ಮಕ್ಕಳು ಕರಿಷ್ಮಾ ಜೊತೆಗೆ ಇದ್ದಾರೆ.

ಹಲವು ಬಾರಿ ಕರಿಷ್ಮಾ ತಮ್ಮ ದಾಂಪತ್ಯ ಮುರಿದು ಬಿದ್ದಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಈಗ ಪತಿಯ ಕರಾಳ ಮುಖದ ಬಗ್ಗೆ ಹೇಳಿಕೊಂಡಿದ್ದಾರೆ. ಇದೇ ವಿಚಾರವಾಗಿ ಕರಿಷ್ಮಾ ಸುದ್ದಿ ಆಗಿದ್ದಾರೆ. ನೃತ್ಯ ಮತ್ತು ಅಭಿನಯದಲ್ಲಿ ಸೈ ಎನಿಸಿ ಕೊಂಡಿದ್ದ ಕರಿಷ್ಮಾ, ಕಪೂರ್‌ ಕುಟುಂಬದಿಂದ ಮೊದಲು ನಾಯಕಿ ಆಗಿ ಬಣ್ಣ ಹಚ್ಚಿದ ಬೆಡಗಿ. ಸದ್ಯ ಕರಿಷ್ಮಾ ಸಿನಿಮಾಗಳನ್ನ ಮಾಡುತ್ತಿಲ್ಲ.

More from Filmibeat

English summary
arisma Kapoor Now Reveals That Her EX-Husband Tried To Selling Her To His Friend On Honymoon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X