»   » ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ಬಣ್ಣಹಚ್ಚಿದೆ

ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ಬಣ್ಣಹಚ್ಚಿದೆ

Posted By:
Subscribe to Filmibeat Kannada
"ಸಿನೆಮಾಗಳೇ ನನಗೆ ಜೀವನವಲ್ಲ...ಅದಕ್ಕೂ ಮೀರಿದ್ದು ಬೇರೆ ಇದೆ. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ಬಣ್ಣಹಚ್ಚಿಕೊಳ್ಳಬೇಕಾಯಿತು" ಎನ್ನುತ್ತಿದ್ದಾರೆ ಕರೀಷ್ಮಾ ಕಪೂರ್. ಒಂಭತ್ತು ವರ್ಷಗಳ ಸುದೀರ್ಘ ಸಮಯದ ಬಳಿಕ 'ಡೇಂಜರಸ್ ಇಷ್ಕ್' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಈ ಮೂಲಕ ಕರಿಷ್ಮಾ ಕಪೂರ್ ಬೆಳ್ಳಿತೆರೆಯ ಮೇಲೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ವಿಕ್ರಮ್ ಭಟ್ ನಿರ್ದೇಶಿಸುತ್ತಿರುವ ಈ 3D ಚಿತ್ರದಲ್ಲಿ ಸೂಪರ್ ಮಾಡೆಲ್ ಪಾತ್ರವನ್ನು ಕರೀಷ್ಮಾ ಪೋಷಿಸಿದ್ದಾರೆ.

ಮೇ 11ರಂದು ಬಿಡಗಡೆಯಾಗಲಿರುವ ಚಿತ್ರದ ಬಗ್ಗೆ ಕರೀಷ್ಮಾ ಮಾತನಾಡುತ್ತಾ, "ಈ ಚಿತ್ರದಲ್ಲಿ ನಾವು ಕಾಣಿಸುವುದಿಲ್ಲ. ನಮ್ಮ ಪಾತ್ರಗಳೇ ಪ್ರೇಕ್ಷಕರನ್ನು ಕಾಡುತ್ತವೆ ಎಂದಿರುವುದು ಚಿತ್ರದ ಬಗೆಗಿನ ಆಸಕ್ತಿಯನ್ನು ಮತ್ತಷ್ಟು ಕೆರಳಿಸಿದೆ. ಚಿತ್ರದ ನಾಯಕ ನಟ ರಜನೀಷ್ ದುಗ್ಗಲ್. (ಏಜೆನ್ಸೀಸ್)

English summary
Actress Karisma Kapoor is making her comeback with a supernatural flick ‘Dangerous Ishq’. The film is produced by Vikram Bhatt and Karishma is playing the main lead rather the film revolves around her utterly, as it is a woman-centric movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada