ಬಾಲಿವುಡ್‌ನ ಹಮಾರೆ ಬಾರಾಹ್‌ಗೆ ಕರ್ನಾಟಕದಲ್ಲಿ ಸಂಕಷ್ಟ ; ಅನ್ನು ಕಪೂರ್ ಸಿನಿಮಾ ನಿಷೇಧಿಸಿದ ರಾಜ್ಯ ಸರ್ಕಾರ..!

ಚಿತ್ರಪ್ರಪಂಚದಲ್ಲಿ ಮೊನ್ನೆಯಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿರುವ ಸಿನಿಮಾ ''ಹಮಾರೆ ಬಾರಾಹ್''. ಬಾಲಿವುಡ್‌ನ ಜನಪ್ರಿಯ ಕಲಾವಿದ ಅಣ್ಣು ಕಪೂರ್ ಈ ಚಿತ್ರದ ಪ್ರಮುಖ ಕೇಂದ್ರ ಬಿಂದು. ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ಬಿಂಬಿಸುವ ಪ್ರಯತ್ನವನ್ನ ಈ ಚಿತ್ರದ ಮೂಲಕ ಮಾಡಲಾಗಿದೆ ಎಂಬ ಆರೋಪವನ್ನ ಮಾಡಲಾಗಿದೆ. ಇಂದು ಬಿಡುಗಡೆಯಾಗಬೇಕಿದ್ದ ಚಿತ್ರವನ್ನ ಬಾಂಬೆ ಹೈಕೋರ್ಟ್ ಕೂಡ ಜೂನ್ 14 ರವರೆಗೆ ತಡೆಹಿಡಿದಿದೆ.

ಸದ್ಯದ ತಾಜಾ ಸಮಾಚಾರ ಏನೆಂದರೆ ದೇಶವ್ಯಾಪಿ ನಿಷೇಧದ ಭೀತಿಯನ್ನ ಎದುರಿಸುತ್ತಿರುವ ''ಹಮಾರೆ ಬಾರಾಹ್'' ಚಿತ್ರವನ್ನ ಎರಡು ವಾರಗಳ ಕಾಲ ಕರ್ನಾಟಕದಲ್ಲಿಯೂ ಕೂಡ ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸಾಮಾಜಿಕ ಜಾಲತಾಣ.. ಚಿತ್ರಮಂದಿರ.. ಖಾಸಗಿ ವಾಹಿನಿಗಳಲ್ಲಿ ಎಲ್ಲಿಯೂ ಕೂಡ ಚಿತ್ರದ ಟ್ರೇಲರ್ ಪ್ರಸಾರ ಮಾಡದಂತೆ ನಿರ್ಬಂಧವನ್ನ ರಾಜ್ಯ ಸರ್ಕಾರ ಹೇರಿದೆ.

karnataka-bans-hamare-baarah-release-for-2-weeks-due-to-communal-tension-concerns

ಇನ್ನೂ ರಾಜ್ಯ ಸರಕಾರದ ಈ ಆದೇಶವನ್ನು ಯಾರಾದರೂ ಉಲ್ಲಂಘಿಸಿದ್ದು ಕಂಡುಬಂದಲ್ಲಿ,ಕಾನೂನು ರೀತ್ಯಾ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಕೂಡ ಎಚ್ಚರಿಕೆಯನ್ನ ನೀಡಿದ್ದಾರೆ.

ಅಂದ್ಹಾಗೇ ''ಹಮಾರೆ ಬಾರಾಹ್'' ಟ್ರೇಲರ್‌ನಲ್ಲಿ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಹ ಅಂಶಗಳಿವೆ, ಹೀಗಾಗಿ ಈ ಚಿತ್ರದ ಬಿಡುಗಡೆಗೆ ಅವಕಾಶವನ್ನ ನೀಡದಂತೆ ಮುಸ್ಲಿಂ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಮನವಿಯನ್ನ ಮಾಡಿಕೊಂಡಿದ್ದವು. ವಿವಿಧ ಸಂಘಟನೆಗಳ ಈ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಕರ್ನಾಟಕ ಸಿನಿಮಾಗಳ ನಿಯಂತ್ರಣ ಕಾಯಿದೆ, 1964 ರ ಸೆಕ್ಷನ್ 15(1) ಮತ್ತು 15(5) ಅಡಿಯಲ್ಲಿ 'ʻಹಮಾರೆ ಬಾರಾಹ್ʼ' ಚಿತ್ರದ ಬಿಡುಗಡೆ ಮತ್ತು ಪ್ರಸಾರವನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

karnataka-bans-hamare-baarah-release-for-2-weeks-due-to-communal-tension-concerns

ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಮುಸ್ಲಿಂ ಸಂಘಗಳಿಂದ ಸ್ವೀಕೃತವಾಗಿರುವ ಮನವಿಗಳಲ್ಲಿ ಇತ್ತೀಚೆಗೆ ಖಾಸಗಿ ವಾಹಿನಿಯೊಂದು ʻಹಮಾರೆ ಬಾರಾಹ್ʼ ಎಂಬ ಚಲನಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು, ಇದರಲ್ಲಿ ಮುಸ್ಲಿಂ ಧರ್ಮದ ಬಗ್ಗೆ ಪ್ರಚೋದನಾತ್ಮಕ ಮತ್ತು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ. ಆದ್ದರಿಂದ ಇಂತಹ ಚಿತ್ರಗಳಿಗೆ ಅನುಮತಿ ನೀಡಿದರೆ ಧರ್ಮ ಮತ್ತು ಜಾತಿಗಳ ಮಧ್ಯೆ ದ್ವೇಷ ಹುಟ್ಟಿಸುತ್ತದೆ. ದೇಶದಲ್ಲಿ ಒಂದು ಧರ್ಮವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ, ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಿ, ದೇಶದಲ್ಲಿ ಅಶಾಂತಿ ಉಂಟು ಮಾಡುವುದು, ಮುಸ್ಲಿಂ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಷಡ್ಯಂತ್ರವಾಗಿದೆ ಎಂದು ಸರ್ಕಾರ ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದೆ.

ಚಲನಚಿತ್ರಗಳು ಸಮಾಜದಲ್ಲಿ ಮಾರ್ಗದರ್ಶನವಾಗಬೇಕು, ಅದನ್ನು ಬಿಟ್ಟು ಧರ್ಮಗಳ ಮಧ್ಯೆ ದ್ವೇಷ ಭಾವನೆ ಹುಟ್ಟಿಸುವುದಲ್ಲ. ಅದರಂತೆ, ಜೂನ್‌ 7 ರಂದು ಬಿಡುಗಡೆಯಾಗಲಿರುವ ʻಹಮಾರೆ ಬಾರಾಹ್ʼ ಎಂಬ ವಿವಾದಾತ್ಮಕ ಸಿನಿಮಾವನ್ನು ಬಿಡುಗಡೆ ಮಾಡದಂತೆ ನಿಷೇಧ ಹೇರಬೇಕು ಎಂದು ಕೋರಲಾಗಿದೆ ಎಂದು ತಿಳಿಸಿರುವ ರಾಜ್ಯ ಸರ್ಕಾರ, ಈ ಚಲನಚಿತ್ರದ ಟ್ರೈಲರ್ ಪರಿಶೀಲಿಸಲಾಗಿ ʻ'ಹಮಾರೆ ಬಾರಾಹ್ʼ' ಚಲನಚಿತ್ರದಲ್ಲಿ ಪವಿತ್ರ ಗ್ರಂಥ ಕುರಾನ್ ಶರೀಫರಲ್ಲಿ ಇರುವ ಸೂರೆ ಎ ಬಕರ ದ ಸಾಲಿನಲ್ಲಿನ ಉಪದೇಶಗಳು ಹಾಗೂ ಸಂದೇಶಗಳ ಕುರಿತಂತೆ ನಿರ್ಮಾಪಕ ಹಾಗೂ ನಿರ್ದೇಶಕರು ತಪ್ಪು ಅಪಾರ್ಥ ಸೃಷ್ಟಿಸಿ, ಪ್ರಚೋದನಾತ್ಮಕ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿ, ಕೆಲವು ಧರ್ಮದ ಜನರುಗಳನ್ನು ಕೆರಳಿಸುವ, ದ್ವೇಷ ಭಾವನೆ ಪ್ರಚೋದಿಸುವ ಮತ್ತು ಒಂದು ಸಮಾಜವನ್ನು ಅವಹೇಳನಕಾರಿಯಾಗಿ ಬಿಂಬಿಸುವ ಪ್ರಯತ್ನದಂತೆ ಕಾಣುತ್ತದೆ. ಒಂದು ಸಮಾಜವನ್ನು ಧರ್ಮದ ಆಧಾರದಲ್ಲಿ ವಿಶ್ಲೇಷಣೆ ಮಾಡುವುದು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಸಂಭವವಿದೆ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸಿದೆ.

More from Filmibeat

English summary
Karnataka Government has decided to halt the release of 'Hamare Baarah' for a duration of two weeks, citing concerns about potential communal tension
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X