twitter
    For Quick Alerts
    ALLOW NOTIFICATIONS  
    For Daily Alerts

    ಕರ್ನಾಟಕ ಸರ್ಕಾರದಿಂದ ಸ್ಯಾಂಡಲ್‌ವುಡ್‌ಗೆ ಶೀಘ್ರದಲ್ಲೇ ಸಿಹಿ ಸುದ್ದಿ

    |

    ಕೊರೊನಾ ವೈರಸ್‌ ಬಿಕ್ಕಟ್ಟಿನಿಂದ ಚಿತ್ರರಂಗ ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸುತ್ತಿದೆ. ಮೊದಲ ಸಲ ಲಾಕ್‌ಡೌನ್ ಆದ ವೇಳೆ ದೇಶದ ಹಲವು ಕಡೆ ಚಿತ್ರಮಂದಿರಗಳು ಬಂದ್ ಆಗಿದ್ದವು. ಆರೇಳು ತಿಂಗಳು ಸಂಪೂರ್ಣವಾಗಿ ಥಿಯೇಟರ್‌ಗಳು ಮುಚ್ಚಲ್ಪಟ್ಟಿದ್ದವು. ಆಮೇಲೆ ನಿಧಾನವಾಗಿ ಚಿತ್ರಮಂದಿರ ತೆರೆದರೂ ಮತ್ತೆ ಎರಡನೇ ಅಲೆಯ ಭೀತಿಯಿಂದ ಮತ್ತೆ ಮುಚ್ಚಬೇಕಾಯಿತು. ಏಪ್ರಿಲ್ ತಿಂಗಳಲ್ಲಿ ಎರಡನೇ ಲಾಕ್‌ಡೌನ್‌ ಕಾರಣದಿಂದ ಥಿಯೇಟರ್‌ಗಳು ಪ್ರದರ್ಶನ ನಿಲ್ಲಿಸಿದವು. ತದನಂತರ ಜುಲೈ 19 ರಿಂದ ಶೇಕಡಾ 50 ರಷ್ಟು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

    ಕರ್ನಾಟಕದಲ್ಲಿ 50 ಪರ್ಸೆಂಟ್ ಅನುಮತಿ ಇದೆ. ಮಹಾರಾಷ್ಟ್ರದಲ್ಲಿ ಥಿಯೇಟರ್‌ಗಳೇ ತೆರೆದಿಲ್ಲ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲೂ 50 ಪರ್ಸೆಂಟ್ ಅವಕಾಶ ಇದೆ. ಈಗ ಕೊರೊನಾ ಕೇಸ್‌ಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಹಾಗಾಗಿ, ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಅನುಮತಿಯೊಂದಿಗೆ ಕಾರ್ಯನಿರ್ವಹಿಸಲು ಚಿತ್ರರಂಗ ಬೇಡಿಕೆಯಿಟ್ಟಿದೆ.

    ಗಾಯದ ಮೇಲೆ ಬರೆ ಎಳೆದಂತಾಯಿತು ಚಿತ್ರಮಂದಿರ ಮಾಲೀಕರ ಕಥೆಗಾಯದ ಮೇಲೆ ಬರೆ ಎಳೆದಂತಾಯಿತು ಚಿತ್ರಮಂದಿರ ಮಾಲೀಕರ ಕಥೆ

    ಕಳೆದ ಎರಡೂವರೆ ತಿಂಗಳ ಪರಿಸ್ಥಿತಿ ಹಾಗೂ ತಜ್ಞರ ಜೊತೆಗಿನ ಚರ್ಚೆ ನಂತರವೂ ಕರ್ನಾಟಕ ಸರ್ಕಾರ 100 ಪರ್ಸೆಂಟ್ ಅನುಮತಿ ಕೊಡಲು ಒಪ್ಪಿರಲಿಲ್ಲ. ಈಗ ಚಿತ್ರಮಂದಿರಗಳ ವಿಚಾರದಲ್ಲಿ ಸರ್ಕಾರ ಪಾಸಿಟಿವ್ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ ಎನ್ನುವ ಅಂಶ ಹೊರಬಿದ್ದಿದೆ.

    100% ಅನುಮತಿಗೆ ಸರ್ಕಾರ ಚಿಂತನೆ

    100% ಅನುಮತಿಗೆ ಸರ್ಕಾರ ಚಿಂತನೆ

    ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡಿರುವ ಹಿನ್ನೆಲೆ ಮತ್ತಷ್ಟು ವಿನಾಯಿತಿ ನೀಡಲು ಸರ್ಕಾರ ಚಿಂತಿಸಿದ್ದು, ಈ ನಿಟ್ಟಿನಲ್ಲಿ ಚಿತ್ರಮಂದಿರಗಳಿಗೂ 100 ಪರ್ಸೆಂಟ್ ಅವಕಾಶ ಕೊಡುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್ ಆರಂಭದಲ್ಲಿ ಹೊಸದಾಗಿ ಆದೇಶ ಜಾರಿ ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

    ಹಲವು ಬಾರಿ ಮನವಿ

    ಹಲವು ಬಾರಿ ಮನವಿ

    ಚಿತ್ರಮಂದಿರಕ್ಕೆ 100 ಪರ್ಸೆಂಟ್ ಅನುಮತಿ ಕೊಡಿ ಎಂದು ಹಲವು ತಿಂಗಳಿನಿಂದ ಸ್ಯಾಂಡಲ್‌ವುಡ್ ಇಂಡಸ್ಟ್ರಿ ಕಡೆಯಿಂದ ಅನೇಕರು ಸಿಎಂಗೆ ಮನವಿ ಮಾಡುತ್ತಲೇ ಇದ್ದಾರೆ. ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬಳಿಯೂ ಶಿವರಾಜ್ ಕುಮಾರ್, ಸುದೀಪ್, ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗವೂ ಮನವಿ ಮಾಡಿದೆ. ಶೀಘ್ರದಲ್ಲೇ ಅನುಮತಿ ಕೊಡಲು ಪ್ರಯತ್ನಿಸುತ್ತೇವೆ ಎಂಬ ಭರವಸೆ ಮಾತ್ರ ಸಿಕ್ಕಿದೆ.

    ನೈಟ್ ಶೋ, ವೀಕೆಂಡ್ ಶೋ ಇಲ್ಲ

    ನೈಟ್ ಶೋ, ವೀಕೆಂಡ್ ಶೋ ಇಲ್ಲ

    ಪೂರ್ಣ ಪ್ರಮಾಣದಲ್ಲಿ ಥಿಯೇಟರ್‌ಗಳಿಗೆ ಅನುಮತಿ ಸಿಗುವವರೆಗೂ ಸ್ಟಾರ್ ನಟರ ಚಿತ್ರಗಳು ರಿಲೀಸ್ ಮಾಡದಿರಲು ನಿರ್ಧರಿಸಿದೆ. ಹಲವು ನಿರೀಕ್ಷೆಯ ಚಿತ್ರಗಳು ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿವೆ. ಪ್ರಸ್ತುತ 50% ಮಾತ್ರ ಅನುಮತಿ ಇದ್ದರೂ ರಾಜ್ಯದ ಹಲವು ಕಡೆ ನೈಟ್ ಶೋ ಇರುವುದಿಲ್ಲ. ವೀಕೆಂಡ್ ಪ್ರದರ್ಶನಕ್ಕೂ ಕಡಿವಾಣ ಹಾಕಲಾಗಿದೆ. ಇದೆಲ್ಲ ಕಾರಣದಿಂದ ಸ್ಟಾರ್ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ.

    ಸ್ಟಾರ್ ನಟರ ಚಿತ್ರಗಳ ಬರಬೇಕಿದೆ

    ಸ್ಟಾರ್ ನಟರ ಚಿತ್ರಗಳ ಬರಬೇಕಿದೆ

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಸಿನಿಮಾ ಈಗಾಗಲೇ ಹಲವು ಬಾರಿ ರಿಲೀಸ್ ದಿನಾಂಕ ಘೋಷಿಸಿಕೊಂಡು, ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಿಕೊಂಡಿದೆ. ಸೆಪ್ಟೆಂಬರ್ 10 ರಂದು ರಿಲೀಸ್ ಆಗಬೇಕಿತ್ತು. ಈಗ ಹೊಸ ದಿನಾಂಕ ಪ್ರಕಟಿಸಿಲ್ಲ. ಥಿಯೇಟರ್‌ಗಳಲ್ಲಿ 100% ಅನುಮತಿ ಸಿಕ್ಕ ಕೂಡಲೇ ಮೊದಲು ಬರುವುದು ನಾವೇ ಎಂದು ದುನಿಯಾ ವಿಜಯ್ ಹೇಳುತ್ತಲೇ ಇದ್ದಾರೆ. ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಸಲಗ ಚಿತ್ರವೂ ಬಹಳ ದಿನದಿಂದ ಮುಂದಕ್ಕೆ ಹೋಗುತ್ತಲೇ ಇದೆ. ಇನ್ನು ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರವೂ ಬಿಡುಗಡೆಯಾಗಬೇಕಿದೆ. ಈ ಸಿನಿಮಾದ ರಿಲೀಸ್ ದಿನಾಂಕದ ಮೇಲೆ ವಿಕ್ರಾಂತ್ ರೋಣ ಚಿತ್ರದ ಬಿಡುಗಡೆ ನಿಂತಿದೆ.

    English summary
    Karnataka Govt Likely To Give Permission To Open Theatres With 100% Occupancy soon.
    Tuesday, September 21, 2021, 13:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X