twitter
    For Quick Alerts
    ALLOW NOTIFICATIONS  
    For Daily Alerts

    ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಟ್ವೀಟ್: ರಾಜ್ಯ ಹೈಕೋರ್ಟ್‌ನಲ್ಲಿ ಕಂಗನಾ ನಿರಾಳ

    |

    ರೈತರನ್ನು ಭಯೋತ್ಪಾದಕರು ಎಂದು ಕರೆದಿದ್ದ ನಟಿ ಕಂಗನಾ ರನೌತ್ ವಿರುದ್ಧ ದೇಶದ ಹಲವೆಡೆ ಪ್ರಕರಣಗಳು ದಾಖಲಾಗಿದ್ದವು. ರಾಜ್ಯದಲ್ಲಿಯೂ ಸಹ ದಾಖಲಾಗಿತ್ತು. ಆದರೆ ಈಗ ಇದೇ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಕಂಗನಾ ಪರವಾಗಿ ಆದೇಶ ನೀಡಿದೆ.

    ಹೊಸ ರೈತ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿರೋಧಿಸಿ ಟ್ವೀಟ್ ಮಾಡಿದ್ದ ಕಂಗನಾ, ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದರು. ಈ ಟ್ವೀಟ್‌ಗೆ ಭಾರಿ ವಿರೋಧ ವ್ಯಕ್ತವಾಗಿತ್ತು.

    ರೈತರನ್ನು ಭಯೋತ್ಪಾದಕರೆಂದ ಕಂಗನಾ ವಿರುದ್ಧ ಬೆಳಗಾವಿಯಲ್ಲಿ ದೂರುರೈತರನ್ನು ಭಯೋತ್ಪಾದಕರೆಂದ ಕಂಗನಾ ವಿರುದ್ಧ ಬೆಳಗಾವಿಯಲ್ಲಿ ದೂರು

    ತುಮಕೂರು ಜೆಎಂಎಫ್‌ಸಿಯಲ್ಲಿ ವಕೀಲರೊಬ್ಬರು ಕಂಗನಾ ವಿರುದ್ಧ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು, ಕಂಗನಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲಿಸರಿಗೆ ಸೂಚನೆ ನೀಡಿತ್ತು.

     Karnataka High Court Squash Magistrate Order To File FIR Against Kangana Ranaut

    ಆದರೆ ಈಗ ಕಂಗನಾ ವಿರುದ್ಧ ಎಫ್‌ಐಆರ್ ದಾಖಲು ಮಾಡುವುದಕ್ಕೆ ತಡೆ ನೀಡಿರುವ ಕರ್ನಾಟಕ ಹೈಕೋರ್ಟ್, ಅರ್ಜಿಯನ್ನು ಪುನರ್‌ ವಿಚಾರಣೆ ಮಾಡುವಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಸೂಚಿಸಿದೆ.

    ''ಆದೇಶ ನೀಡಿರುವ ಮ್ಯಾಜಿಸ್ಟ್ರೇಟರು, ಅಪರಾಧ ಎಸಗಿರುವುದನ್ನು ಧೃಡೀಕರಿಸುವ ಯಾವ ಅಂಶವೂ ದೂರಿನಲ್ಲಿ ಇಲ್ಲ ಎಂಬುದನ್ನು ಪರಿಗಣಿಸಿಲ್ಲ. ಅರ್ಜಿದಾರರು ದೂರಿನಲ್ಲಿ ಸಲ್ಲಿಸಿರುವ ವಿಷಯಗಳು ಅಪರಾಧ ಎಂದು ಪರಿಗಣಿಸಲ್ಪಡಬಲ್ಲುದೇ ಎಂಬುದನ್ನು ಮತ್ತೊಮ್ಮೆ ಪುನರ್‌ ವಿಮರ್ಶಿಸಬೇಕಾಗಿದೆ'' ಎಂದು ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಎಚ್‌.ಪಿ.ಸಂದೇಶ್ ಹೇಳಿದ್ದಾರೆ.

    ಪ್ರತಿಭಟನಾಕಾರರನ್ನು ಗೇಲಿ ಮಾಡಿದ ಕಂಗನಾಗೆ ಚಳಿ ಬಿಡಿಸಿದ ನಟ ದಿಲ್ಜೀತ್ಪ್ರತಿಭಟನಾಕಾರರನ್ನು ಗೇಲಿ ಮಾಡಿದ ಕಂಗನಾಗೆ ಚಳಿ ಬಿಡಿಸಿದ ನಟ ದಿಲ್ಜೀತ್

    Recommended Video

    ಅಳುವುದೇ ಇಲ್ಲ ಎನ್ನುತ್ತಿದ್ದ ಕಂಗನಾ ಭಾವುಕರಾಗಿ ಕಣ್ಣೀರು ಹಾಕಿದ್ಯಾಕೆ? | Filmibeat Kannada

    ತುಮಕೂರು ಜೆಎಂಎಫ್‌ಸಿಯಲ್ಲಿ ರಮೇಶ್ ನಾಯಕ್ ಎಂಬ ವಕೀಲರು 'ಕಂಗನಾ ಅವರು ತಮ್ಮ ಟ್ವೀಟ್‌ನಿಂದ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ ಮಾಡುತ್ತಿದ್ದಾರೆ. ರೈತರನ್ನು ಭಯೋತ್ಪಾದಕರು ಎಂದು ಕರೆದಿದ್ದಾರೆ' ಎಂದು ದೂರು ದಾಖಲಿಸಿದ್ದರು. ಕಂಗನಾ ಪರವಾಗಿ ವಾದ ಮಾಡಿದ ರಿಜ್ವಾನ್ ಸಿದ್ಧಿಖಿ ಅವರು ವಾದ ಮಂಡಿಸಿದ್ದರು.

    English summary
    Karnataka High court aquash Magistrate court order to file FIR against Kangana Ranaut.
    Thursday, March 25, 2021, 17:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X