For Quick Alerts
  ALLOW NOTIFICATIONS  
  For Daily Alerts

  ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ನಟಿ ಕಂಗನಾ ವಿರುದ್ಧ ಕರ್ನಾಟಕ ಕಿಸಾನ್ ಕಾಂಗ್ರೆಸ್ ದೂರು

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ವಿವಾದಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ. ವಿವಾದಾತ್ಮಕ ಹೇಳಿಕೆಗಳಿಂದ ಇತ್ತೀಚಿಗೆ ಕಂಗನಾ ವಿರುದ್ಧ ಸಾಕಷ್ಟು ದೂರುಗಳು ದಾಖಲಾಗಿದೆ. ಇದೀಗ ಬಾಲಿವುಡ್ ಕ್ವೀನ್ ನಟಿಯ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಕರ್ನಾಟಕ ಕಿಸಾನ್ ಕಾಂಗ್ರೆಸ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಗೆ ದೂರು ನೀಡಿದೆ.

  ಕಿಸಾನ್ ಕಾಂಗ್ರೆಸ್ ನ ಅಧ್ಯಕ್ಷ ಸಚಿನ್ ಮಿಗಾ ದೂರು ನೀಡಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ನಟಿ ಕಂಗನಾ ಕಂಗನಾ ನೆಗೆಟಿವ್ ಟ್ವೀಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಪ್ರತಿಭಟನಾಗಾರ್ತಿ ಮಹಿಂದರ್ ಕೌರ್ ಕುರಿತಂತೆ ಈಕೆ 100 ರೂಪಾಯಿಗೆ ಎಲ್ಲರಿಗೂ ಲಭ್ಯವಾಗುತ್ತಾಳೆ ಎಂದು ಹೇಳಿಕೆ ನೀಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಕಂಗನಾ ಹೇಳಿಕೆಯನ್ನು ಅನೇಕರು ಖಂಡಿಸಿದ್ದರು.

  ಕಂಗನಾ ಜೊತೆ ಜಗಳವಾಡಿ 4 ಲಕ್ಷ ಜನರನ್ನು ಸಂಪಾದಿಸಿದ ದಿಲ್ಜೀತ್!

  ಇದೀಗ ಕಿಸಾನ್ ಕಾಂಗ್ರೆಸ್ ದೂರಿನಲ್ಲಿ ಕಂಗನಾ ಮಹಿಳೆಯ ಮಾನ ಹಾನಿ ಮಾಡಿದ್ದಾರೆ. ಈ ಹಿಂದೆ ರೈತರನ್ನು ಭಯೋತ್ಪಾದಕರು ಎಂದು ನಿಂದಿಸಿದ್ದರು. ಪದೇ ಪದೇ ರೈತರ ವಿರುದ್ಧ ಅಸಂಬದ್ದ ಹೇಳಿಕೆ ನೀಡುತ್ತಿರುವ ಕಂಗನಾ ವಿರುದ್ದ ಸೂಕ್ತ ಕ್ರಮಕೈಗೊಳಬೇಕು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

  Sanjana ಗೆ ಅನುಮತಿ ಕೊಟ್ಟ ಹೈ ಕೋರ್ಟ್ | Filmibeat Kannada

  ಕಂಗನಾ ವಿರುದ್ಧ ಸೆಕ್ಷನ್ 509 ಹಾಗೂ 304ರ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮಿಗಾ ಆಗ್ರಹಿಸಿದ್ದಾರೆ.

  English summary
  Karnataka Kisan Congress files complaint against kangana ranaut.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X