»   » 'ಪದ್ಮಾವತಿ' ವಿವಾದಕ್ಕೆ ಬಲಿಯಾಯ್ತು ಆಕಾಶ್ ಚಿತ್ರಮಂದಿರ.!

'ಪದ್ಮಾವತಿ' ವಿವಾದಕ್ಕೆ ಬಲಿಯಾಯ್ತು ಆಕಾಶ್ ಚಿತ್ರಮಂದಿರ.!

Posted By:
Subscribe to Filmibeat Kannada

ದೇಶಾದ್ಯಂತ 'ಪದ್ಮಾವತಿ' ಚಿತ್ರದ ವಿವಾದ ದಿನದಿಂದ ದಿನಕ್ಕೆ ವಿಕೋಪಕ್ಕೇರುತ್ತಿದೆ. ಬೆಂಗಳೂರಿನಲ್ಲಿ 'ಪದ್ಮಾವತಿ' ಚಿತ್ರದ ಬಿಡುಗಡೆ ವಿರೋಧಿಸಿ ರಜಪೂತರು ಪ್ರತಿಭಟನೆ ಮಾಡುತ್ತಿದ್ದರೇ, ರಾಜಸ್ತಾನದಲ್ಲಿ 'ಪದ್ಮಾವತಿ' ಟ್ರೈಲರ್ ಪ್ರಸಾರ ಮಾಡಿದ್ದಕ್ಕೆ ಚಿತ್ರಮಂದಿರವನ್ನೇ ದ್ವಂಸ ಮಾಡಿರುವ ಘಟನೆ ನಡೆದಿದೆ.

ನಿನ್ನೆ ರಾತ್ರಿ ರಾಜಸ್ತಾನದ ಕೋಟದಲ್ಲಿನ ಆಕಾಶ್ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಮಧ್ಯೆ 'ಪದ್ಮಾವತಿ' ಟ್ರೈಲರ್ ಪ್ರಸಾರ ಮಾಡಲಾಗಿತ್ತು. ಇದರಿಂದ ಕೋಪಿತಗೊಂಡು ಕರಣೆ ಸೇನೆ ಕಾರ್ಯಕರ್ತರು ಥಿಯೇಟರ್ ಮೇಲೆ ದಾಳಿ ಮಾಡಿ, ಗಾಜು, ಕುರ್ಚಿಗಳನ್ನ ಹೊಡೆದು ಹಾಕಿದ್ದಾರೆ. ಥಿಯೇಟರ್ ಮೇಲೆ ಕಲ್ಲು ತೂರಾಟ ಕೂಡ ಮಾಡಿದ್ದಾರೆ.

Karni Sena attacks theatre showing the Padmavati trailer

'ಪದ್ಮಾವತಿ' ಸಿನಿಮಾ ವಿರುದ್ದ ಬೆಂಗಳೂರಿನಲ್ಲಿ ಪ್ರತಿಭಟನೆ

ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಕರಣೆ ಸೇನೆಯ ಕಾರ್ಯಕರ್ತರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ದೀಪಿಕಾ ಪಡುಕೋಣೆ ರಾಣಿ 'ಪದ್ಮಾವತಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾಹೀದ್ ಕಪೂರ್ ಮತ್ತು ರಣ್ವೀರ್ ಸಿಂಗ್ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಥಿಯೇಟರ್ ಮೇಲೆ ಕರಣಿ ಸೇನೆ ಕಾರ್ಯಕರ್ತರು ದಾಳಿ ಮಾಡಿರುವ ವಿಡಿಯೋ ಇಲ್ಲಿದೆ ನೋಡಿ

English summary
Padmavati controversy: Karni Sena attacks theatre showing the movie's trailer over Deepika Padukone's remarks.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X