For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ 'ಪೃಥ್ವಿರಾಜ್' ಸಿನಿಮಾಗೆ ಸಂಕಷ್ಟ; ಟೈಟಲ್ ಬದಲಾವಣೆಗೆ ಒತ್ತಾಯ

  |

  ಅಕ್ಷಯ್ ಕುಮಾರ್ ನಟನೆಯ ಬಹುನಿರೀಕ್ಷೆಯ ಪೃಥ್ವರಾಜ್ ಸಿನಿಮಾಗೆ ಸಂಕಷ್ಟ ಎದುರಾಗಿದೆ. ಚಿತ್ರದ ಟೈಟಲ್ ಬದಲಾವಣೆ ಮಾಡುವಂತೆ ಮಹಾರಾಷ್ಟ್ರ ಕರ್ಣಿ ಸೇನಾ ಒತ್ತಾಯ ಮಾಡಿದೆ. ಒಂದು ವೇಳೆ ಟೈಟಲ್ ಬದಲಾವಣೆ ಮಾಡದಿದ್ದರೆ ಪದ್ಮಾವತ್ ಸಿನಿಮಾಗೆ ಆದ ಗತಿಯೇ ಆಗಲಿದೆ ಎಂದು ಎಚ್ಚರಿಕೆ ನೀಡಿದೆ.

  ಕರ್ಣಿ ಸೇನಾ ಯೂತ್ ವಿಂಗ್ ಅಧ್ಯಕ್ಷ ಸುರ್ಜಿತ್ ಸಿಂಗ್ ರಾಥೋಡ್ ಒತ್ತಾಯಿಸಿದ್ದಾರೆ. ಪೃಥ್ವಿರಾಜ್ ಹೆಸರನ್ನು ಪೂರ್ಣ ಪೃಥ್ವಿರಾಜ್ ರಾಜ್ ಚೌಹಾಣ್ ಎಂದು ಇಟ್ಟುಕೊಳ್ಳಬೇಕು. ಕೇವಲ ಪೃಥ್ವಿರಾಜ್ ಎಂದು ಮಾತ್ರ ಏಕೆ ಇಡಬೇಕು ಎಂದು ಪ್ರಶ್ನೆ ಮಾಡಿದೆ. ಅವರ ಪೂರ್ಣ ಹೆಸರು ಇಟ್ಟು ಅವರಿಗೆ ಗೌರವ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ.

  ಅಕ್ಷಯ್ ಕುಮಾರ್ ರಾಮ್ ಸೇತು ಚಿತ್ರದಲ್ಲಿ ಇಬ್ಬರು ದಕ್ಷಿಣ ಕಲಾವಿದರು?ಅಕ್ಷಯ್ ಕುಮಾರ್ ರಾಮ್ ಸೇತು ಚಿತ್ರದಲ್ಲಿ ಇಬ್ಬರು ದಕ್ಷಿಣ ಕಲಾವಿದರು?

  ಒಂದು ಹೆಸರು ಬದಲಾಗದಿದ್ದರೆ ಇದರ ಪರಿಣಾಮ ಎದುರಿಸಲು ತಯಾರಾಗಿ, ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತ್ ಸಿನಿಮಾ ಎದುರಿಸಿದ ಪರಿಣಾಮಗಳನ್ನು ಎದುರಿಸಬೇಕಾಗುತ್ತೆ ಎಂದು ಸಿನಿಮಾ ನಿರ್ಮಾಪಕರಿಗೆ ಕರ್ಣಿ ಸೇನಾ ಅಧ್ಯಕ್ಷ ಸುರ್ಜಿತ್ ಸಿಂಗ್ ಎಚ್ಚರಿಕೆ ನೀಡಿದೆ.

  ಸಿನಿಮಾ ಬಿಡುಗಡೆಗೂ ಮೊದಲು ಕರ್ಣಿ ಸೇನಾ ಮೊದಲು ಸಿನಿಮಾ ವೀಕ್ಷಸಬೇಕೆಂದು ಬೇಡಿಕೆ ಇಟ್ಟಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಸಿನಿಮಾ ಬಿಡುಗಡೆ ಸಮಯದಲ್ಲಿ ಕರ್ಣಿ ಸೇನಾ ವಿಭಿನ್ನ ಕೃತ್ಯಗಳನ್ನು ಎಸಗಿತ್ತು. ಸಿನಿಮಾದ ಶೀರ್ಷಿಕೆ ಬದಲಾಯಿಸಬೇಕೆಂದು ಒತ್ತಾಯಿಸಿ ಸಿನಿಮಾ ಸೆಟ್ ಗೆ ಬೆಂಕಿ ಹಾಕಿದ್ದರು. ನಟಿ ದೀಪಿಕಾ ಪಡುಕೋಣೆಗೆ ಬೆದರಿಕೆ ಹಾಕಿದ್ದರು. ಸಿನಿಮಾ ಬಿಡುಗಡೆ ಮಾಡದಂತೆ ದೊಡ್ಡ ಮಟ್ಟದ ಹೋರಾಟ ಮಾಡಿದ್ದರು.

  ಇದೀಗ ಪೃಥ್ವಿರಾಜ್ ಚಿತ್ರಕ್ಕೂ ಅದೇ ಘಟನೆಗಳು ಮರುಕಳುಹಿಸಲಿವೆ ಎಂದು ಎಚ್ಚರಿಕೆ ನೀಡಿದೆ. ಅಕ್ಷಯ್ ಕುಮಾರ್ ಲಕ್ಷ್ಮೀ ಬಾಂಬ್ ಸಿನಿಮಾಗೂ ಸಂಕಷ್ಟ ಎದುರಾಗಿತ್ತು. ಟೈಟಲ್ ಬದವಲಾವಣೆಗೆ ಒತ್ತಾಯ ಮಾಡಲಾಗಿತ್ತು. ಬಳಿಕ ಶೀರ್ಷಿಕೆಯಲ್ಲಿದ್ದ ಬಾಂಬ್ ಹೆಸರನ್ನು ತೆಗೆದುಹಾಕಲಾಗಿತ್ತು.

  ಮಕ್ಕಳ ಜವಾಬ್ದಾರಿ ಏನು ಅನ್ನೋದನ್ನ ತೋರಿಸಿಕೊಟ್ರು Duniya Vijay | Filmibeat Kannada

  ಇದೀಗ ಪೃಥ್ವಿರಾಜ್ ಹೆಸರನ್ನು ಬದಲಾಯಿಸುತ್ತಾರಾ ಎಂದು ಕಾದುನೋಡಬೇಕು. ಅಂದಹಾಗೆ ಚಿತ್ರದಲ್ಲಿ ಅಕ್ಷಯ್ ಕುಮಾರ್ ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾನುಷಿ ಚಿಲ್ಲರ್ ನಾಯಕಿಯಾಗಿ ಮಿಂಚಿದ್ದಾರೆ. ಈ ಸಿನಿಮಾ ಮೂಲಕ ಮಾನುಷಿ ಮೊದಲ ಬಾರಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Karni sena demands title change for Akshay Kumar's Prithviraj movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X