ಭೂಲ್ ಭುಲಯ್ಯಗೆ ಮರಳಿದ ಅಸಲಿ ಮಂಜುಲಿಕಾ ; ಅಕ್ಷಯ್ ಕುಮಾರ್ ಕಥೆ ಏನು..?
ಬಾಲಿವುಡ್ ನ ಪ್ರತಿಭಾವಂತ ನಟಿ ವಿದ್ಯಾ ಬಾಲನ್. ಕೊಟ್ಟ ಪಾತ್ರಗಳನ್ನ ಶ್ರದ್ಧೆಯಿಂದ ನಿರ್ವಹಿಸಿ ಸೈ ಅನಿಸಿಕೊಳ್ಳುವ ವಿದ್ಯಾ, ಭೂಲ ಭುಲಯ್ಯ ಚಿತ್ರದಲ್ಲಿ ಮಂಜುಲಿಕಾ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಮನೋಜ್ಞ ಅಭಿನಯದಿಂದ ಸಿನಿ ಪ್ರೇಮಿಗಳ ಮನಸನ್ನ ಗೆದ್ದಿದ್ದರು.
ಆದರೆ, ಭೂಲ ಭುಲಯ್ಯ ಚಿತ್ರದ ಎರಡನೇ ಭಾಗದಲ್ಲಿ ವಿದ್ಯಾ ಬಾಲನ್, ಜಾಗ ಖಾಲಿ ಮಾಡಿದ್ದರು. ವಿದ್ಯಾ ಬಾಲನ್ ಜೊತೆ ಮೊದಲ ಭಾಗದಲ್ಲಿದ್ದ ಅಕ್ಷಯ್ ಕುಮಾರ್ ಕೂಡ ಭೂಲ ಭುಲಯ್ಯದಿಂದ ಹೊರ ಬಂದರು. ಇಬ್ಬರ ಜಾಗಕ್ಕೆ ಕಾರ್ತಿಕ್ ಆರ್ಯನ್ ಹಾಗೂ ಟಬು ಸೇರ್ಪಡೆಯಾಗಿದ್ದರು. ಕಿಯಾರಾ ಅಡ್ವಾಣಿ ಕೂಡ ಭೂಲ ಭೂಲಯ್ಯ 02ದಲ್ಲಿ ಕಾಣಿಸಿಕೊಂಡರು.

ಅಕ್ಷಯ್ ಕುಮಾರ್- ವಿದ್ಯಾ ಬಾಲನ್ ಇಲ್ಲದ ಭೂಲ ಭುಲಯ್ಯ 02, ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲು ಸಾಧ್ಯ ಇಲ್ಲ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ, ಭೂಲ ಭುಲಯ್ಯ 02 ನಿರೀಕ್ಷೆಗೂ ಮೀರಿದ ಯಶಸ್ಸನ್ನ ಗಳಿಸಿತ್ತು. ಈಗ ಭೂಲ ಭುಲಯ್ಯ 03 ಸರದಿ. ವಿಶೇಷ ಅಂದರೆ ಎರಡಲ್ಲಿ ಕಾಣೆಯಾಗಿದ್ದ ವಿದ್ಯಾ ಬಾಲನ್, ಮೂರನೇ ಭಾಗಕ್ಕೆ ಮರಳಿ ಬಂದಿದ್ದಾರೆ. ಮಂಜುಲಿಕಾ ಪಾತ್ರಕ್ಕೆ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ
ಭೂಲ ಭುಲಯ್ಯ 02 ಚಿತ್ರವನ್ನ ನಿರ್ದೇಶಿಸಿದ್ದ ಅನೀಸ್ ಬಾಜ್ಮಿ ಅವರೇ ಈ ಚಿತ್ರವನ್ನ ನಿರ್ದೇಶಿಸಲಿದ್ದಾರೆ. ಭೂಷಣ್ ಕುಮಾರ್ ಚಿತ್ರಕ್ಕೆ ಹಣ ಹೂಡಲಿದ್ದಾರೆ. ಮಿಕ್ಕಂತೆ ವಿದ್ಯಾ ಬಾಲನ್ ಅವರನ್ನ ಒಳಗೊಂಡ ಭೂಲ ಭುಲಯ್ಯ 03 ಈ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ.

ಭೂಲ ಭುಲಯ್ಯ 03ರಲ್ಲಿ ಇರುತ್ತಾರಾ ಅಕ್ಷಯ್ ಕುಮಾರ್..?
ಮಂಜುಲಿಕಾ ಪಾತ್ರಕ್ಕೆ ವಿದ್ಯಾ ಬಾಲನ್ ಮತ್ತೆ ಮರಳಿದ ಬೆನ್ನಲ್ಲಿಯೇ, ಅಕ್ಷಯ್ ಕುಮಾರ್ ಕೂಡ ಭೂಲ ಭುಲಯ್ಯ ಅಂಗಳಕ್ಕೆ ವಾಪಸು ಬರಲಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿ ಬಂದಿತ್ತು.
ಆದರೆ, ಈಗ ನಿರ್ದೇಶಕರು ಮೌನ ಮುರಿದು ಈ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಅಕ್ಷಯ್ ಚಿತ್ರದ ಭಾಗವಾಗುವುದಿಲ್ಲ ಎಂದು ಅನೀಸ್ ಖಚಿತಪಡಿಸಿದ್ದಾರೆ.


Click it and Unblock the Notifications










