ಬೆಂಗಳೂರಿನ ಬೀದಿಯಲ್ಲಿ ಬಾಲಿವುಡ್ ನ ಸ್ಟಾರ್ ; ಕಾರ್ತಿಕ್ ಆರ್ಯನ್ ಕನ್ನಡದಲ್ಲಿ ಹೇಳಿದ್ದೇನು..?
ಒಂದು ತಿಂಗ್ಳಿನಲ್ಲಿಯೇ 4-5 ಕೋಟಿ ವ್ಯಾಪಾರ-ವಹಿವಾಟವನ್ನ ಮಾಡುವ ಕೆಫೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೆಫೆ ಅಂದ್ರೆ ಅದು ದಿ ರಾಮೇಶ್ವರಂ ಕೆಫೆ. ಕೇವಲ ಎರಡೇ ಎರಡು ವರ್ಷದಲ್ಲಿ ಸಿಲಿಕಾನ್ ಸಿಟಿಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ರಾಮೇಶ್ವರಂ ಕೆಫೆ ಗೆ ಬಾಲಿವುಡ್ ನ ಸ್ಟಾರ್ ನಟ ಕಾರ್ತಿಕ್ ಆರ್ಯನ್ ವಿಸಿಟ್ ಮಾಡಿದ್ದಾರೆ. ಟೀ ಸೇವಿಸಿ, ಮಸಾಲೆ ದೋಸೆ ತಿಂದು ಬಾಯಿ ಚಪ್ಪರಿಸಿದ್ದಾರೆ.
ಹೌದು, ಅಸಲಿಗೆ ಭೂಲ್ ಭುಲಯ್ಯ 2 ಚಿತ್ರದ ಮೂಲಕ ಜನಮನ್ನಣೆ ಗಳಿಸಿದ ಕಾರ್ತಿಕ್ ಆರ್ಯನ್, ಬೆಂಗಳೂರಿಗೆ ಬಂದಿದ್ದರು. ಮಹಿಳಾ ಪ್ರೀಮಿಯರ್ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಭೂಲ್ ಭುಲೈಯಾ 2 ಮತ್ತು ಪತಿ ಪತ್ನಿ ಔರ್ ಸಿನನಿಮಾ ಹಾಡಿಗೆ ಹೆಜ್ಜೆಯನ್ನೂ ಹಾಕಿದರು.

ಮಹಿಳಾ ಪ್ರೀಮಿಯರ್ ಉದ್ಘಾಟನಾ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿ ಸುಸ್ತಾಗಿದ್ದ ಕಾರ್ತಿಕ್ ಆರ್ಯನ್ , ಕೆಲ ಹೊತ್ತು ವಿಶ್ರಾಂತಿ ಪಡೆದು ಆ ನಂತರ ಸೀದಾ ಹೋಗಿದ್ದು ದಿ ರಾಮೇಶ್ವರಂ ಕೆಫೆಗೆ. ಸ್ನೇಹಿತರ ಜೊತೆ ದಿ ರಾಮೇಶ್ವರಂ ಕೆಫೆಗೆ ತೆರಳಿದ ಕಾರ್ತಿಕ್ ಆರ್ಯನ್ ಮಸಾಲೆ ದೋಸೆ ಜೊತೆ ಐದು ಫಿಲ್ಟರ್ ಕಾಫಿ ಆರ್ಡರ್ ಮಾಡಿದ್ದಾರೆ. ಅದು ಕನ್ನಡದಲ್ಲಿ ಅನ್ನುವುದು ವಿಶೇಷ. ಸದ್ಯಕ್ಕೆ ಕಾರ್ತಿಕ್ ಅವರ ಈ ಐದು ಫಿಲ್ಟರ್ ಕಾಫಿ ವಿಡಿಯೋ ಕನ್ನಡಿಗರ ಹೃದಯ ಗೆಲ್ತಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಇಷ್ಟೇ ಅಲ್ಲ ಆ ನಂತರ ಕಾರ್ತಿಕ್ ಆರ್ಯನ್ ನಾಗಾರ್ಜುನ ಹೊಟೇಲಿಗೆ ತೆರಳಿದ್ದಾರೆ. ರುಚಿಕರವಾದ ಬಾಲೆ ಎಲೆ ಊಟಕ್ಕೆ ಅಲ್ಲಿ ಮನಸನ್ನೂ ಸೋತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ಅನುಭವವನ್ನೂ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಈ ರುಚಿಕರವಾದ ಮತ್ತು ಐಕಾನಿಕ್ ತಿನಿಸುಗಳಿಗೆ ಭೇಟಿ ನೀಡಿದ ನಂತರ ನಾನು ಫುಡ್ ಬ್ಲಾಗರ್ ಆಗಲು ಯೋಚಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಸದ್ಯಕ್ಕೆ ಬೆಂಗಳೂರು ಹಾಗೂ ಬೆಂಗಳೂರಿನ ಫುಡ್ ಜೊತೆ ಕಾರ್ತಿಕ್ ಆರ್ಯನ್ ಅವರ ಈ ಪ್ರೇಮಕಥಾ ಎಲ್ಲರ ಗಮನವನ್ನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಪ್ರೀತಿ ಕೂಡ ಕಾರ್ತಿಕ್ ಆರ್ಯನ್ ಗೆ ಸಿಕ್ತಿದೆ
ಕಾರ್ತಿಕ್ ಕೈಯಲ್ಲಿವೆ ಅನೇಕ ಸಿನಿಮಾ
ಕಬೀರ್ ಖಾನ್ ನಿರ್ದೇಶನದ ಚಂದು ಚಾಂಪಿಯನ್ ಚಿತ್ರದ ಬಿಡುಗಡೆಯನ್ನ ಕಾರ್ತಿಕ್ ಆರ್ಯನ್ ಎದುರು ನೋಡ್ತಿದ್ದಾರೆ. ನೈಜ ಕಥೆಯನ್ನಾಧರಿಸಿದ ಈ ಚಿತ್ರದಲ್ಲಿ ಕಾರ್ತಿಕ್ ಕ್ರೀಡಾಪಟುವಿನ ಪಾತ್ರ ನಿರ್ವಹಿಸಿದ್ದಾರೆ. ಇದಲ್ಲದೆ, ಹಾರರ್ ಕಾಮಿಡಿ ಚಿತ್ರ ಭೂಲ್ ಭುಲೈಯಾ 3 ಕೂಡ ಪೈಪ್‌ಲೈನ್‌ನಲ್ಲಿ ಇದೆ. ಆಶಿಕಿ 3 ನಲ್ಲಿಯೂ ಕಾರ್ತಿಕ್ ಆರ್ಯನ್ ಕಾಣಿಸಿಕೊಳ್ಳಲಿದ್ದಾರೆ


Click it and Unblock the Notifications











