ಕಾರ್ತಿಕ್ ಆರ್ಯನ್ ಜೊತೆ ತಳುಕು ಹಾಕಿಕೊಂಡ ಬಾಲಿವುಡ್‌ 4 ಮಂದಿ ನಟಿಯರು ಇವರೇ!

By ಫಿಲ್ಮಿಬೀಟ್ ಡೆಸ್ಕ್

ಕಾರ್ತಿಕ್ ಆರ್ಯನ್ ಬಾಲಿವುಡ್‌ನ ಫೇವರಿಟ್ ಸ್ಟಾರ್. ಈ ವರ್ಷ ತೆರೆಕಂಡ ಸೂಪರ್‌ಸ್ಟಾರ್‌ಗಳ ಸಿನಿಮಾಗಳು ನೆಲಕ್ಕಚ್ಚಿದ್ದಾಗ ಕಾರ್ತಿಕ್ ಆರ್ಯನ್ ಸಿನಿಮಾ ಮಾತ್ರ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು.

2022ರಲ್ಲಿ ಬಾಲಿವುಡ್‌ನಲ್ಲಿ ಗೆದ್ದ ಕೆಲವೇ ಕೆಲವು ಸಿನಿಮಾಗಳಲ್ಲಿ ಕಾರ್ತಿಕ್ ಆರ್ಯನ್ ಸಿನಿಮಾ ಕೂಡ ಒಂದು ಅದುವೇ 'ಭೂಲ್ ಭುಲಯ್ಯ 2'. ಇದೇ ಸಿನಿಮಾ ಆರಂಭದ ದಿನಗಳಲ್ಲಿ ಬಾಲಿವುಡ್ ಮಂದಿಗೆ ಮರ್ಯಾದೆ ಉಳಿಸಿತ್ತು. ಅಲ್ಲದೆ ಕಾರ್ತಿಕ್ ಆರ್ಯನ್ ಅನ್ನು ಸ್ಟಾರ್ ಪಟ್ಟಕ್ಕೇರಿಸಿತ್ತು.

ಈ ಮಧ್ಯೆ ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಬಿಟ್ಟ ಸಿನಿಮಾಗಳಿಗೆ ಕಾರ್ತಿಕ್ ಆರ್ಯನ್ ಆಯ್ಕೆ ಮಾಡುತ್ತಿದ್ದಾರೆ. ಮುಂದಿನ ಅಕ್ಷಯ್ ಕುಮಾರ್ ಅಂತ ಬಾಲಿವುಡ್ ಮಂದಿ ಫಿಕ್ಸ್ ಆಗಿದೆ. ಈ ಮಧ್ಯೆ ಹಂತ ಹಂತವಾಗಿ ಬೆಳೆಯುತ್ತಿರುವ ಕಾರ್ತಿಕ್ ಆರ್ಯನ್ ಜೊತೆ ಬಾಲಿವುಡ್‌ನ ಹಲವು ನಟಿಯರ ಹೆಸರುಗಳು ಕೂಡ ತಳುಕು ಹಾಕೊಂಡಿತ್ತು. ಆ ನಾಯಕಿಯರ ಲಿಸ್ಟ್ ಇಲ್ಲಿದೆ.

ಶ್ರೀದೇವಿ ಜಾಹ್ನವಿ ಕಪೂರ್

ಶ್ರೀದೇವಿ ಜಾಹ್ನವಿ ಕಪೂರ್

ಬಾಲಿವುಡ್‌ನಲ್ಲಿ ಕಾರ್ತಿಕ್ ಆರ್ಯನ್ ಹಾಗೂ ಜಾಹ್ನವಿ ಕಪೂರ್ ಲವ್‌ ಸ್ಟೋರಿ ಬಗ್ಗೆ ಆಗಾಗ ಮಾತುಗಳು ಕೇಳಿಬರುತ್ತಲೇ ಇತ್ತು. ಈ ಬೆನ್ನಲ್ಲೇ ಇಬ್ಬರೂ ಜೋಡಿಯಾಗಿ ನಟಿಸಲು ರೆಡಿಯಾಗಿದ್ದರು.ಅದುವೇ 'ದೋಸ್ತಾನ 2'. ಆದರೆ, ಈ ಸಿನಿಮಾದಿಂದ ಕಾರ್ತಿಕ್ ಆರ್ಯನ್ ಹೊರನಡೆದಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು. 'ದೋಸ್ತಾನ 2' ಸಿನಿಮಾದಿಂದ ಹೊರಬರುತ್ತಿದ್ದಂತೆ ಕಾರ್ತಿಕ್ ಹಾಗೂ ಜಾಹ್ನವಿ ಕೂಡ ಬೇರೆ ಬೇರೆಯಾದರೂ ಎನ್ನುತ್ತಿವೆ ಬಾಲಿವುಡ್ ಮೂಲಗಳು.

ಅನನ್ಯಾ ಪಾಂಡೆ ಜೊತೆ ಲವ್

ಅನನ್ಯಾ ಪಾಂಡೆ ಜೊತೆ ಲವ್

ಕಾರ್ತಿಕ್ ಆರ್ಯನ್ ಹಾಗೂ ಅನನ್ಯಾ ಪಾಂಡೆ ಇಬ್ಬರೂ ಜೊತೆಯಾಗಿ ನಟಿಸಿದ್ದರು. ಆ ಸಿನಿಮಾ 'ಪತಿ ಪತ್ನಿ ಔರ್ ವೋ'. ಈ ಸಿನಿಮಾ ವೇಳೆ ಕಾರ್ತಿಕ್ ಹಾಗೂ ಅನನ್ಯಾ ಇಬ್ಬರೂ ಲವ್‌ನಲ್ಲಿ ಬಿದ್ದಿದ್ದಾರೆ ಅನ್ನೋ ಮಾತು ಗುಲ್ಲೆದ್ದಿತ್ತು. ಕೆಲವು ದಿನಗಳ ಹಿಂದೆ 'ಕಾಫಿ ವಿತ್ ಕರಣ್ ಶೋ'ನಲ್ಲಿ ಅನನ್ಯಾ ಪಾಂಡೆಗೆ ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ಮಾಡಿದ್ರಾ? ಅನ್ನೋ ಪ್ರಶ್ನೆ ಎದ್ದಿತ್ತು. ಆ ವೇಳೆ "ನಾವಿಬ್ಬರೂ ಉತ್ತರ ಸ್ನೇಹಿತರು" ಎಂದು ಹೇಳಿದ್ದರು. ತಕ್ಷಣವೇ " ನಡೆದು ಹೋಗಿದ್ದರ ಬಗ್ಗೆ ನಾನು ಹೆಚ್ಚು ಯೋಚಿಸುವುದಿಲ್ಲ." ಎಂದು ಹೇಳಿದ್ದರು.

ಕಾರ್ತಿಕ್-ಸಾರಾ ಅಲಿ ಖಾನ್ ಜೋಡಿ

ಕಾರ್ತಿಕ್-ಸಾರಾ ಅಲಿ ಖಾನ್ ಜೋಡಿ

ಕಾರ್ತಿಕ್ ಆರ್ಯನ್ ಹಾಗೂ ಸಾರಾ ಅಲಿ ಖಾನ್ ನಡುವೆಯೂ ಸಂಥಿಂಗ್ ನಡೆಯುತ್ತಿದೆ ಅನ್ನೋ ಸುದ್ದಿ ಹಬ್ಬಿತ್ತು. ನಿರ್ದೇಶಕ ಇಮ್ತಿಯಾಜ್ ಅಲಿ ಸಿನಿಮಾ 'ಲವ್ ಆಜ್‌ ಕಲ್' ಶೂಟಿಂಗ್ ವೇಳೆ ಕಾರ್ತಿಕ್ ಹಾಗೂ ಸಾರಾ ಅಲಿ ಖಾನ್ ನಡುವೆ ಪ್ರೀತಿ ಹುಟ್ಟಿತ್ತು ಅನ್ನೋ ಮಾತು ಕೇಳಿ ಬಂದಿತ್ತು. ಆದರೆ, ಸಿನಿಮಾ ಮುಗಿಯುತ್ತಿದ್ದಂತೆ ಈ ಜೋಡಿ ಮತ್ತೆ ಒಂದಾಗಿ ಕಾಣಿಸಿಕೊಳ್ಳಲೇ ಇಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಾರ್ತಿಕ್ ಆರ್ಯನ್ ತನ್ನ ಕ್ರಶ್ ಅನ್ನೋದನ್ನು ಸಾರಾ ಅಲಿಖಾನ್ ಹೇಳಿಕೊಂಡಿದ್ದರು.

ಪಂಚ್ನಾಮ ನಟಿ ಜೊತೆ ಪ್ಯಾರ್

ಪಂಚ್ನಾಮ ನಟಿ ಜೊತೆ ಪ್ಯಾರ್

ಕಾರ್ತಿಕ್ ಆರ್ಯನ್ ಜೊತೆ ಅತಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟಿ ನುಶ್ರತ್. 'ಪ್ಯಾರ್ ಕಾ ಪಂಚ್ನಾಮ', 'ಪ್ಯಾರ್ ಕಾ ಪಂಚ್ನಾಮ 2' ಹಾಗೂ 'ಸೋನು ಕೆ ಟಿಟು ಕಿ ಸ್ವೀಟಿ' ಈ ಸಿನಿಮಾಗಳಲ್ಲಿಯೂ ಕಾರ್ತಿಕ್‌ಗೆ ನುಶ್ರತ್ ಜೋಡಿಯಾಗಿದ್ದರು. ಹೀಗಾಗಿ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. " ನಾವಿಬ್ಬರೂ ಉತ್ತಮ ಸ್ನೇಹಿತರು. ತುಂಬಾ ದಿನಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ." ಎಂದು ಹೇಳಿದ್ದರು.

More from Filmibeat

English summary
Karthik Aryan Linked With Janhvi Kapoor, Sara Ali Khan, Ananya Panday, Nushrratt Bharuchcha, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X