23 ವರ್ಷದ ಕನ್ನಡದ ಖ್ಯಾತ ನಾಯಕಿಗೆ ಮನಸೋತ 34 ವರ್ಷದ ಬಾಲಿವುಡ್ ಸೂಪರ್ ಸ್ಟಾರ್ ? ವಿಡಿಯೋ ವೈರಲ್..!

ಈ ಬಣ್ಣದ ಲೋಕನೇ ಹಾಗೇ. ಇಲ್ಲಿ ದಿನಕ್ಕೊಂದು ಸುದ್ದಿ ಸತ್ಯ ಆದರೆ, ಮಿಕ್ಕ ತೊಂಬತ್ತೊಂಬತ್ತು ಸುದ್ದಿ ಸುಳ್ಳಾಗುತ್ತಾವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಶ್ರೀಲೀಲಾ ಕುರಿತು ಮತ್ತೊಂದು ವಿಚಾರ ಸದ್ಯ ಸದ್ದು ಮಾಡುತ್ತಿದೆ.

ಹೌದು, ಅಸಲಿಗೆ.. ರಶ್ಮಿಕಾ ಅವರಂತೆಯೇ ಸ್ಯಾಂಡಲ್‌ವುಡ್‌ನಿಂದ ಕಾಣೆಯಾದ ಶ್ರೀಲೀಲಾ, ಸದ್ಯ ಪಕ್ಕದ ಆಂಧ್ರದಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುತ್ತಿದ್ದಾರೆ.

Kartik Aaryan and Sreeleela Spark Dating Rumours Here s What Netizens Are Saying

ಇಂಥಾ ಶ್ರೀಲೀಲಾ ಸದ್ಯ ಬಲಗಾಲಿಟ್ಟು ಬಾಲಿವುಡ್ ಪ್ರವೇಶಿಸಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಸುದ್ದಿ ಸದ್ಯಕ್ಕೆ ಎಲ್ಲೆಡೆ ಗುಲ್ಲಾಗಿದೆ. ಇದಕ್ಕೆ ಕಾರಣ ವೈರಲ್ ಆದ ಅದೊಂದು ವಿಡಿಯೋ.

ಹೌದು, ಅಸಲಿಗೆ ಬಹುತೇಕರು ಚಿತ್ರೀಕರಣದ ಸಮಯದಲ್ಲಿ ಮಾತ್ರ ಎದುರು ಬದುರಾಗುತ್ತಾರೆ. ನಗು ನಗುತ್ತಾ ನಿರ್ದೇಶಕರು ಹೇಳಿದ ಸನ್ನಿವೇಶಗಳಲ್ಲಿ ಭಾಗವಹಿಸಿ ಆ ನಂತರ ತಮ್ಮ ತಮ್ಮ ಕ್ಯಾರಾವ್ಯಾನ್‌ ಗೆ ತೆರಳಿ ಬಿಡುತ್ತಾರೆ. ಆದರೆ, ಶ್ರೀಲೀಲಾ ಇದಕ್ಕೆ ತದ್ವಿರುದ್ದ. ಕೇವಲ ಚಿತ್ರೀಕರಣದಲ್ಲಿ ಭಾಗಿಯಾಗುವುದಲ್ಲದೇ ಕಾರ್ತಿಕ್ ಆರ್ಯನ್ ಮನೆಗೆ ತೆರಳಿದ್ದಾರೆ. ಕಾರ್ತಿಕ್ ಆರ್ಯನ್ ಮನೆ ಮಂದಿಯ ಜೊತೆ ಕುಣಿದಿದ್ದಾರೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿ ಹಾಡಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಸಹೋದರಿ ಮಾಡಿದ ಸಾಧನೆಗೆ ಕಾರ್ತಿಕ್ ಆರ್ಯನ್ ಮನೆಯಲ್ಲಿ ಹಮ್ಮಿಕೊಂಡಿದ್ದ ಪಾರ್ಟಿಯಲ್ಲಿ ಶ್ರೀಲೀಲಾ ಭಾಗಿಯಾಗಿದ್ದಾರೆ. ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಚಿತ್ರದ ಚಿತ್ರೀಕರಣ ಮಾಡುತ್ತಾ ಮಾಡುತ್ತಾ ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ನಿಜಕ್ಕೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಪುಕಾರು ಕೂಡ ಹಬ್ಬಿದೆ.

ಆದರೆ ಇದೇ ವೇಳೆ ಈ ವದಂತಿಯನ್ನು ಕೆಲವರು ತಳ್ಳಿ ಹಾಕುತ್ತಿದ್ದಾರೆ. ಸುಖಾ ಸುಮ್ಮನೆ ಸಂಬಂಧಗಳನ್ನು ಕಲ್ಪಿಸಬೇಡಿ ಎನ್ನುತ್ತಿದ್ದಾರೆ. ಯಾಕೆಂದರೆ ಕಾರ್ತಿಕ್ ಆರ್ಯನ್‌ಗೆ ಇದೆಲ್ಲ ಹೊಸದಲ್ಲ. ಈ ಹಿಂದೆ ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ ಜೊತೆ ಥಳುಕು ಹಾಕಿಕೊಂಡಿತ್ತು. ಆದರೆ ಹೀಗೆ ಹಬ್ಬಿದ ಸುದ್ದಿ ಕೇವಲ ಅಂತೆ-ಕಂತೆಗೆ ಮಾತ್ರ ಸೀಮಿತವಾಯ್ತು. ಎಲ್ಲದಕ್ಕಿಂತ ಹೆಚ್ಚಾಗಿ ಶ್ರೀಲೀಲಾ ಕೇವಲ ನಾಯಕಿ ಮಾತ್ರ ಅಲ್ಲ. ಆಕ್ಟಿಂಗ್ ಜೊತೆಯಲ್ಲಿ ಶ್ರೀಲೀಲಾ ಎಂಬಿಬಿಎಸ್ ವ್ಯಾಸಂಗವನ್ನು ಕೂಡ ಮಾಡುತ್ತಿದ್ದಾರೆ.

Kartik Aaryan and Sreeleela Spark Dating Rumours Here s What Netizens Are Saying

ವಿಶೇಷ ಅಂದರೆ ಕಾರ್ತಿಕ್ ಆರ್ಯನ್ ಸಹೋದರಿ ಕೃತಿಕಾ ಕೂಡ ಶ್ರೀಲೀಲಾ ಓದುತ್ತಿರುವ ಕಾಲೇಜಿನ ವಿದ್ಯಾರ್ಥಿನಿಯೇ. ಹೀಗಾಗಿ ಕಾರ್ತಿಕ್ ಆರ್ಯನ್ ಸಹೋದರಿ ಶ್ರೀಲೀಲಾಗೆ ಮೊದಲಿಂದ ಪರಿಚಯ. ಹೀಗಾಗಿಯೇ ಶ್ರೀಲೀಲಾ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ವಾದವನ್ನು ಹಲವರು ಮಾಡುತ್ತಿದ್ದಾರೆ. ಕಾರ್ತಿಕ್ ಆರ್ಯನ್ ಅವರ ಪ್ರಚಾರ ಮಾಡುವ ಹೊಣೆ ಹೊತ್ತಿರುವ ಪಿಆರ್‌ಗಳು ಇನ್ನಾದರೂ ಬುದ್ದಿ ಕಲಿಯಿರಿ ಸಾಕು ಎನ್ನುತ್ತಿದ್ದಾರೆ. ಎಷ್ಟು ಅಂತ ಹೀಗೆ ಎಲ್ಲ ನಾಯಕಿಯರ ಜೊತೆ ಕಾರ್ತಿಕ್ ಹೆಸರು ಥಳುಕು ಹಾಕಿ ಪ್ರಚಾರ ಪಡೆಯುತ್ತಿರಾ ಎನ್ನುತ್ತಿದ್ದಾರೆ.

ಸದ್ಯ ಕಾರ್ತಿಕ್ ಆರ್ಯನ್ ಮನೆಯಲ್ಲಿ ಶ್ರೀಲೀಲಾ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನುಳಿದಂತೆ ಸದ್ಯ ಟಾಲಿವುಡ್‌ನಿಂದ ಬಾಲಿವುಡ್‌ಗೆ ಶಿಫ್ಟ್ ಆಗಿರುವ ಶ್ರೀಲೀಲಾ, ಕಾರ್ತಿಕ್ ಆರ್ಯನ್ ಜೊತೆ ಮಾತ್ರವಲ್ಲ ಇಬ್ರಾಹಿಂ ಅಲಿ ಖಾನ್ ಜೊತೆ ಕೂಡ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಈ ಚಿತ್ರದ ಘೋ‍ಷಣೆ ಸದ್ಯದಲ್ಲಿ ಆಗಲಿದೆ.

More from Filmibeat

Read more about: sreeleela kartik aaryan love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X