ಯುವ ನಟ ಕಾರ್ತಿಕ್ ಆರ್ಯನ್ ಈಗ 'ಕ್ಯಾಪ್ಟನ್ ಇಂಡಿಯಾ'
ಖ್ಯಾತ ನಿರ್ದೇಶಕ ಹನ್ಸಲ್ ಮೆಹ್ತಾ ಜೊತೆ ಯುವ ನಟ ಕಾರ್ತಿಕ್ ಆರ್ಯನ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಗಳು ಚರ್ಚೆಯಲ್ಲಿದ್ದವು. ಅಂತಿಮವಾಗಿ ಈ ಸುದ್ದಿ ಖಚಿತವಾಗಿದೆ. ಹನ್ಸಲ್ ಮತ್ತು ಆರ್ಯಕ್ ಕಾಂಬಿನೇಷನ್ ಸಿನಿಮಾ ಘೋಷಣೆಯಾಗಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಹ ರಿಲೀಸ್ ಆಗಿದೆ.
ಈ ಚಿತ್ರಕ್ಕೆ 'ಕ್ಯಾಪ್ಟನ್ ಇಂಡಿಯಾ' ಎಂದು ಹೆಸರಿಟ್ಟಿದ್ದು, ಚಿತ್ರದಲ್ಲಿ ಕಾರ್ತಿನ್ ಪೈಲಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಆರ್‌ಎಸ್‌ವಿಪಿ ಹಾಗೂ ಬವೇಜಾ ಸ್ಟುಡಿಯೋಸ್ ಜೊತೆಯಾಗಿ ನಿರ್ಮಿಸಲಿದೆ.
ಕಾರ್ತಿಕ್ ಆರ್ಯನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹೊಸ ಸಿನಿಮಾದ ಕುರಿತು ಪ್ರಕಟಿಸಿದ್ದು, 'ಕ್ಯಾಪ್ಟನ್ ಇಂಡಿಯಾ' ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡಿರುವ ಆರ್ಯನ್, ''ಕ್ಯಾಪ್ಟನ್ ಇಂಡಿಯಾ ಸ್ಪೂರ್ತಿದಾಯಕ ಹಾಗೂ ರೋಮಾಂಚನಕಾರಿ ಸಿನಿಮಾ ಆಗಿರಲಿದೆ. ದೇಶದ ಹೆಮ್ಮೆಯ ಚಿತ್ರವಾಗಲಿರುವ ಇದರಲ್ಲಿ ನಾನು ಭಾಗಿಯಾಗುತ್ತಿರುವ ಖುಷಿ ಕೊಟ್ಟಿದೆ'' ಎಂದಿದ್ದಾರೆ.

ಅಂದ್ಹಾಗೆ, ಇದು ಬಯೋಪಿಕ್ ಸಿನಿಮಾ ಅಲ್ಲ. ನೈಜ ಘಟನೆಗಳಿಂದ ಪ್ರೇರಿತವಾಗಿದೆ ಮಾಡಲಾಗುತ್ತಿದೆ. ಯುದ್ಧದಿಂದ ವೇಳೆ ಹಾನಿಗೊಳಗಾದಾಗ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸುವ ಪೈಲಟ್ ಪಾತ್ರದ ಸುತ್ತ ಕಥೆ ಹಣೆಯಲಾಗಿದೆ.
ಕಾರ್ತಿಕ್ ಆರ್ಯನ್ ಮುಂದಿನ ಸಿನಿಮಾಗಳು
'ಕ್ಯಾಪ್ಟನ್ ಇಂಡಿಯಾ' ಸಿನಿಮಾ ಬಿಟ್ಟು ಮತ್ತಷ್ಟು ಪ್ರಾಜೆಕ್ಟ್‌ಗಳಲ್ಲಿ ಕಾರ್ತಿಕ್ ನಟಿಸುತ್ತಿದ್ದಾರೆ. ಧಮಾಕ, ಭೂಲ್ ಭೂಲಿಯಾ 2 ಚಿತ್ರದಲ್ಲೂ ಕಾರ್ತಿನ್ ಅಭಿನಯಿಸಿದ್ದಾರೆ. ತೆಲುಗಿನ ಹಿಟ್ ಚಿತ್ರದ ಅಲಾ ವೈಕುಂಠಪುರಂಲೋ ಹಿಂದಿ ಅವತರಣಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಮೀರ್ ವಿದ್ವಾನ್ ಜೊತೆ ಸಿನಿಮಾವೊಂದು ಮಾಡುತ್ತಿದ್ದಾರೆ.
ಹನ್ಸಲ್ ಮೆಹ್ತಾ ಕುರಿತು
ಹಿಂದಿ ಚಿತ್ರರಂಗ ಹಿರಿಯ ಹಾಗೂ ಸಕ್ಸಸ್ ಫುಲ್ ನಿರ್ದೇಶಕ ಹನ್ಸಲ್ ಮೆಹ್ತಾ. ಇತ್ತೀಚಿಗೆ 'ಸ್ಕ್ಯಾಮ್ 1992' ಚಿತ್ರ ನಿರ್ದೇಶಿಸಿದ ಹೆಚ್ಚು ಸುದ್ದಿಯಲ್ಲಿದ್ದರು. ಸದ್ಯ 'ಸ್ಕ್ಯಾಮ್ 2003' ಸಿನಿಮಾ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತಿ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಸಿನಿಮಾ ಮಾಡಿದ್ದು ಇದೇ ಹನ್ಸಲ್ ಮೆಹ್ತಾ. 2013ರಲ್ಲಿ ತೆರೆಕಂಡ 'ಶಾಹೀದ್' ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.


Click it and Unblock the Notifications











