ಕಾರ್ತಿಕ್ ಆರ್ಯನ್ ಸಂಭಾವನೆ ದುಪ್ಪಟ್ಟು: ಬಾಲಿವುಡ್‌ಗೆ ವರವಾದ ನಟ!
ಒಂದು ಸಿನಿಮಾ ಹಿಟ್ ಲಿಸ್ಟ್ ಸೇರಿದ ಕೂಡಲೇ ಸಿನಿಮಾ ತರೆಯರು ತಮ್ಮ ಸಂಭಾವನೆಯನ್ನು ಹೆಚ್ಚು ಮಾಡಿಕೊಳ್ಳುತ್ತಾರೆ. ಅದರಲ್ಲೂ ನಟ, ನಟಿಯರು ಸಂಭಾವನೆಯನ್ನು ಹೆಚ್ಚಿಸಿಕೊಳ್ಳುವುದರ ಮೂಲಕವೇ ಸುದ್ದಿ ಆಗುತ್ತಾರೆ. ಈಗ ಈ ಸಾಲಿಗೆ ನಟ ಕಾರ್ತಿಕ್ ಆರ್ಯನ್ ಸೇರಿಕೊಂಡಿದ್ದಾರೆ.
ಕಾರ್ತಿಕ್ ಆರ್ಯನ್ ಅಭಿನಯ 'ಭೂಲ್ ಭುಲಯ್ಯ 2 ' ಸಿನಿಮಾ ಹಿಟ್ ಲಿಸ್ಟ್ ಸೇರಿದೆ. ಅದರಲ್ಲೂ ಈ ಸಿನಿಮಾ ಇತ್ತೀಚೆಗೆ ತೆರೆಕಂಡ ಬಾಲಿವುಡ್ ಸಿನಿಮಾಗಳಲ್ಲಿ ನಂಬರ್ 1 ಆಗಿದೆ. ಸಾಲು ಸಾಲು ಬಾಲಿವುಡ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋಲುಂಡ ಬಳಿಕ 'ಭೂಲ್ ಭುಲಯ್ಯ 2 ' ಗೆದ್ದು ಬೀಗಿದೆ.
ಇನ್ನು ಕಾರ್ತಿಕ್ ಆರ್ಯನ್ ಮುಂದಿನ ಬಾಲಿವುಡ್ ಸ್ಟಾರ್ ಎನ್ನುವ ಇರುವಾಗಲೇ, ಬಾಲಿವುಡ್‌ನಲ್ಲಿ ಕಾರ್ತಿಕ್ ಸಂಭಾವನೆಯ ಬಗ್ಗೆ ಚರ್ಚೆ ಶುರುವಾಗಿದೆ. ಕಾರ್ತಿಕ್ ತಮ್ಮ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರಂತೆ.

₹ 92.10 ಕೋಟಿ ಗಳಿಸಿದ 'ಭೂಲ್ ಭುಲಯ್ಯ 2'!
'ಭೂಲ್ ಭುಲಯ್ಯ 2' ಬಂಪರ್ ಹಿಟ್ ಆಗಿದೆ. ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾಣಿ ಮತ್ತು ಟಬು ಅಭಿನಯದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದು ಬೀಗಿದೆ. ಮೊದಲ ವಾರದಲ್ಲಿ ₹ 92.10 ಕೋಟಿ ಗಳಿಸಿದೆ ಎಂದು ವರದಿ ಆಗಿದೆ. ಸೋಲುಗಳಿಂದ ಬೇಸತ್ತಿದ್ದ ಬಾಲಿವುಡ್ ಚಿತ್ರರಂಗ ಈ ಚಿತ್ರದಿಂದ ಮತ್ತೆ ಟ್ರ್ಯಾಕ್‌ಗೆ ಬಂದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕಾರ್ತಿಕ್‌ಗೆ ಹೆಚ್ಚಿದ ಬೇಡಿಕೆ!
ನಟ ಕಾರ್ತಿಕ್ ಆರ್ಯನ್‌ಗೆ 'ಭೂಲ್ ಭೂಲಯ್ಯ 2' ಯಶಸ್ಸಿನ ಬಳಿಕ ಬೇಡಿಕೆ ಹೆಚ್ಚಾಗಿದೆಯಂತೆ. ಅದಾಗಲೇ ಬಾಲಿವುಡ್ ನಿರ್ದೇಶಕ, ನಿರ್ಮಾಪಕರು ಕಾರ್ತಿಕ್ ಹಿಂದೆ ಬಿದ್ದು ಬಿಟ್ಟಿದ್ದಾರಂತೆ. ಸಾಲು-ಸಾಲು ಸಿನಿಮಾಗಳ ಕಥೆಯನ್ನು ಕಾರ್ತಿಕ್ ಓಕೆ ಮಾಡುತ್ತಿದ್ದಾರಂತೆ. ಇದರ ಜೊತೆಗೆ ಕಾರ್ತಿಕ್ ಆರ್ಯನ್ ತಮ್ಮ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

20ರಿಂದ 40 ಕೋಟಿಗೆ ಕಾರ್ತಿಕ್ ಸಂಭಾವನೆ ಹೆಚ್ಚಳ!
ನಟ ಕಾರ್ತಿಕ್ ಆರ್ಯನ್ 'ಭೂಲ್ ಭುಲಯ್ಯ 2' ಸಿನಿಮಾಗೂ ಮೊದಲು 15 ರಿಂದ 20 ಕೋಟಿ ತನಕ ಸಂಭಾವನೆ ಪಡೆದುಕೊಳ್ಳುತ್ತಾ ಇದ್ದರು. ಈಗ 'ಭೂಲ್ ಭುಲಯ್ಯ 2' ಸಿನಿಮಾದ ಯಶಸ್ಸಿನ ಬಳಿಕ ಕಾರ್ತಿಕ್ ಆರ್ಯನ್ ಸಂಭಾವನೆ ದುಪ್ಪಟ್ಟು ಆಗಿದೆ. ಸದ್ಯ ಕಾರ್ತಿಕ್ ತಮ್ಮ ಸಂಭಾವನೆಯನ್ನು 35 ರಿಂದ 40 ಕೋಟಿಗೆ ಹೆಚ್ಚಿಸಿಕೊಂಡಿದ್ದಾರಂತೆ. ಇನ್ನೊಂದು ಸಿನಿಮಾ ಹಿಟ್ ಕೊಟ್ಟರೆ ಕಾರ್ತಿಕ್ ಆರ್ಯನ್ ಸಂಭಾವನೆ 80 ಕೋಟಿ ಮುಟ್ಟುವುದರಲ್ಲಿ ಅನುಮಾನ ಇಲ್ಲ ಎನ್ನಲಾಗುತ್ತಾ ಇದೆ.

ಬಾಲಿವುಡ್‌ಗೆ ಸೂಪರ್ ಸ್ಟಾರ್ ಆದ ಕಾರ್ತಿಕ್!
ಇನ್ನು ಬಾಲಿವುಡ್ ಸಿನಿಮಾಗಳು ಸೌತ್ ಸಿನಿಮಾಗಳ ಅಬ್ಬರದ ಮುಂದೆ ಮಂಕಾದಾಗ ಹಿಟ್ ಆದ ಸಿನಿಮಾ ಇದು. ಅನೇಕ ಸಿನಿಮಾಗಳು 30 ಕೋಟಿಗಿಂತ ಕಡಿಮೆ ಗಳಿಕೆ ಕಂಡು ಚಿತ್ರಮಂದಿರದಿಂದ ಎತ್ತಂಗಡಿ ಆಗುತ್ತಿದ್ದ ಸಮಯದಲ್ಲಿ, ಕಾರ್ತಿಕ್ ಆರ್ಯನ್ ಸಿನಿಮಾ 'ಭೂಲ್ ಭೂಲಯ್ಯ 2' ಒಂದು ವಾರದಲ್ಲಿ 90 ಕೋಟಿಗೂ ಅಧಿಕ ಗಳಿಕೆ ಕಂಡು ದಾಖಲೆ ಬರೆದಿದೆ.


Click it and Unblock the Notifications











