18ರ ಹರೆಯದ ಯುವತಿ ಜೊತೆ ಗೋವಾದಲ್ಲಿ 35 ವರ್ಷದ ಕಾರ್ತಿಕ್ ಆರ್ಯನ್ ಮೋಜು-ಮಸ್ತಿ ? ವಿವಾದಕ್ಕೆ ಹೆದರಿ ಮಾಡಿದ್ದೇನು ?
ಬಾಲಿವುಡ್ ನ ಚಾಕೊಲೇಟ್ ಬಾಯ್ ಕಾರ್ತಿಕ್ ಆರ್ಯನ್ ಸದಾ ಸುದ್ದಿಯಲ್ಲಿ ಇರುತ್ತಾರೆ. ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಅವರು ತಮ್ಮ ವೈಯಕ್ತಿಕ ಜೀವನದಿಂದಲೇ ಸುದ್ದಿಯಾಗುವುದು ಹೆಚ್ಚು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಾರ್ತಿಕ್ ಆರ್ಯನ್ ಅವರ ಹೊಸ ವಿಚಾರವೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಭಿಮಾನಿಗಳು ಈ ನಟನ ಪ್ರತಿ ನಡೆಯನ್ನೂ ಗಮನಿಸುತ್ತಿರುತ್ತಾರೆ. ಅದರಲ್ಲೂ ಅವರ ರಜೆ ದಿನಗಳ ಫೋಟೋಗಳು ಅಂತರಜಾಲದಲ್ಲಿ ಸಖತ್ ವೈರಲ್ ಆಗುತ್ತಿವೆ.
ಆದರೆ ಈ ಬಾರಿ ವಿಷಯ ಕೇವಲ ಫೋಟೋಗಳಿಗೆ ಸೀಮಿತವಾಗಿಲ್ಲ. ಇದರ ಹಿಂದೆ ಒಂದು ನಿಗೂಢ ಕಥೆ ಅಡಗಿದೆ ಎನ್ನುವ ಅನುಮಾನ ಎಲ್ಲರಲ್ಲೂ ಮೂಡಿದೆ. ಯುವತಿಯರ ಪಾಲಿನ ಕ್ರಶ್ ಆಗಿರುವ ಕಾರ್ತಿಕ್, ಈಗ ಗೋವಾದಲ್ಲಿ ಸಮಯ ಕಳೆಯುತ್ತಿದ್ದಾರೆ. ಅವರು ಒಬ್ಬರೇ ಅಲ್ಲಿಗೆ ಹೋಗಿದ್ದಾರಾ ಅಥವಾ ಅವರ ಜೊತೆ ಯಾರಾದರೂ ಇದ್ದಾರಾ? ಈ ಪ್ರಶ್ನೆ ಈಗ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೆ ಗಾಸಿಪ್ ಪ್ರಿಯರು ಕೂಡ ಇದರ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.

ಗೋವಾದಲ್ಲಿ ಕಾರ್ತಿಕ್ ಜೊತೆಗಿರುವ ಆ 'ಮಿಸ್ಟರಿ ಗರ್ಲ್' ಯಾರು?
ಕಾರ್ತಿಕ್ ಆರ್ಯನ್ ಇತ್ತೀಚೆಗೆ ಗೋವಾದ ರೆಸಾರ್ಟ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಅಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಆದರೆ ನೆಟ್ಟಿಗರ ಕಣ್ಣು ತಪ್ಪಿಸುವುದು ಅಷ್ಟು ಸುಲಭವಲ್ಲ. ಕಾರ್ತಿಕ್ ಫೋಟೋ ಹಾಕಿದ ಬೆನ್ನಲ್ಲೇ, ಅದೇ ಜಾಗದಲ್ಲಿ ಒಬ್ಬ ಯುವತಿ ಕೂಡ ಫೋಟೋ ಹಂಚಿಕೊಂಡಿದ್ದರು.
ಇಬ್ಬರ ಫೋಟೋಗಳ ಹಿನ್ನೆಲೆ ಒಂದೇ ಆಗಿತ್ತು. ಇದನ್ನು ಗಮನಿಸಿದ ನೆಟ್ಟಿಗರು ಇಬ್ಬರೂ ಒಟ್ಟಿಗೆ ರಜೆ ಕಳೆಯುತ್ತಿದ್ದಾರೆ ಎಂದು ಪತ್ತೆ ಹಚ್ಚಿದ್ದಾರೆ. ಈ ಯುವತಿ ಯಾರು ಎಂಬ ಹುಡುಕಾಟ ಈಗ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.
ಲಿಂಕ್ ಅಪ್ ವದಂತಿ ಮತ್ತು ಅನ್‌ಫಾಲೋ ಮಾಡಿದ ನಟ
ಈಗ ಅಸಲಿ ವಿಷಯ ಬಯಲಾಗಿದೆ. ಕಾರ್ತಿಕ್ ಆರ್ಯನ್ ಜೊತೆ ಕಾಣಿಸಿಕೊಂಡ ಆ ಯುವತಿಯ ಹೆಸರು ಕರೀನಾ ಕುಬಿಲ್ಯೂಟ್. ಇನ್ನು ಈ ಯುವತಿಗೆ ಕೇವಲ 18ರ ಹರೆಯ ಎಂದು ಮಾಧ್ಯಮಗಳು ವರದಿ ಮಾಡಿವೆ. ಅದೇ ಮತ್ತೊಂದು ಕಡೆ ಕಾರ್ತಿಕ್ ಆರ್ಯನ್‌ಗೆ ಈಗ 35 ವರ್ಷ. ಈ ಹಿನ್ನೆಲೆ ಫೋಟೊ ವೈರಲ್ ಆಗುತ್ತಿದ್ದಂತೆಯೇ ಕಾರ್ತಿಕ್ ಆರ್ಯನ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಲು ಶುರುವಾಗಿತ್ತು. ಇವರಿಬ್ಬರ ನಡುವೆ ಪ್ರೀತಿ ಶುರುವಾಗಿದೆ ಎಂಬ ವದಂತಿಗಳು ಹರಿದಾಡತೊಡಗಿದವು.
ಹೀಗೆ ಸುತ್ತುವರೆದ ವಿವಾದ ಮತ್ತು ಸುತ್ತ ಮುತ್ತ ವ್ಯಕ್ತವಾದ ಅಭಿಪ್ರಾಯಕ್ಕೆ ಹೆದರಿದ ಕಾರ್ತಿಕ್ ಆರ್ಯನ್ ಕೂಡಲೇ ಕರೀನಾ ಕುಬಿಲ್ಯೂಟ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಅನ್‌ಫಾಲೋ ಮಾಡಿದ್ದಾರೆ. ಲಿಂಕ್ ಅಪ್ ಸುದ್ದಿಗಳು ವೈರಲ್ ಆಗುತ್ತಿದ್ದಂತೆ ಕಾರ್ತಿಕ್ ಈ ರೀತಿ ಮಾಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ವದಂತಿಗಳಿಂದ ದೂರ ಇರಲು ಕಾರ್ತಿಕ್ ಹೀಗೆ ಮಾಡಿದರಾ ಅಥವಾ ಇಬ್ಬರ ನಡುವೆ ಏನಾದರೂ ಮನಸ್ತಾಪ ಉಂಟಾಗಿದೆಯಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಇದು ಕೇವಲ ಪ್ರಚಾರ ತಂತ್ರವೇ?
ಬಾಲಿವುಡ್ ನಲ್ಲಿ ಸಿನಿಮಾಗಳು ಬಿಡುಗಡೆ ಆಗುವ ಮುನ್ನ ಇಂತಹ ಗಾಸಿಪ್ಗಳು ಹರಡುವುದು ಸಾಮಾನ್ಯ. ಕಾರ್ತಿಕ್ ಆರ್ಯನ್ ಸದ್ಯ ದೊಡ್ಡ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಹೀಗಿರುವಾಗ ಇಂತಹ ಸುದ್ದಿಗಳು ಅವರ ಸಿನಿಮಾಗೆ ಪಬ್ಲಿಸಿಟಿ ನೀಡಲು ಬಳಸಲಾಗುತ್ತಿದೆಯೇ ಎಂಬ ಅನುಮಾನವೂ ಇದೆ.
ಆದರೆ ಕಾರ್ತಿಕ್ ಆರ್ಯನ್ ಅವರ ಇತಿಹಾಸ ನೋಡಿದರೆ ಅವರು ಈ ಹಿಂದೆಯೂ ಹಲವು ನಟಿಯರ ಜೊತೆ ಹೆಸರು ಕೇಳಿಬಂದಿತ್ತು. ಸಾರಾ ಅಲಿ ಖಾನ್ ಮತ್ತು ಅನನ್ಯ ಪಾಂಡೆ ಅವರ ಜೊತೆಗಿನ ಇವರ ಸ್ನೇಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗ ಈ ಹೊಸ ಯುವತಿಯ ಎಂಟ್ರಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಅಭಿಮಾನಿಗಳ ವಲಯದಲ್ಲಿ ಏನಿದೆ ಚರ್ಚೆ?
ಕಾರ್ತಿಕ್ ಆರ್ಯನ್ ಅವರ ಈ ನಡೆಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕಾರ್ತಿಕ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಾ? ಅನ್‌ಫಾಲೋ ಮಾಡಿದ್ದಕ್ಕೆ ಏನೋ ಕಾರಣ ಇರಲೇಬೇಕು. ಕಾರ್ತಿಕ್ ಅವರು ತಮ್ಮ ಖಾಸಗಿ ಜೀವನವನ್ನು ಗೌಪ್ಯವಾಗಿ ಇಡಲು ಬಯಸುತ್ತಾರೆ ಎಂದು ಅವರ ಫ್ಯಾನ್ಸ್ ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಕಾರ್ತಿಕ್ ಆರ್ಯನ್ ಅವರ ಈ ಗೋವಾ ಟ್ರಿಪ್ ಮತ್ತು ಅನ್‌ಫಾಲೋ ಮಾಡಿರುವ ವಿಷಯ ಸದ್ಯಕ್ಕೆ ಬಾಲಿವುಡ್ ನ ಹಾಟ್ ಟಾಪಿಕ್ ಆಗಿದೆ. ಈ ಬಗ್ಗೆ ಕಾರ್ತಿಕ್ ಅವರೇ ಸ್ಪಷ್ಟನೆ ನೀಡುವವರೆಗೂ ಈ ಗುಸುಗುಸು ನಿಲ್ಲುವ ಲಕ್ಷಣ ಕಾಣುತ್ತಿಲ್ಲ.


Click it and Unblock the Notifications











