For Quick Alerts
  ALLOW NOTIFICATIONS  
  For Daily Alerts

  ಹಿಂದಿಯ 'ಕಿರಿಕ್ ಪಾರ್ಟಿ'ಗೆ ಹೀರೋ ಇವರೇ.!

  By Bharath Kumar
  |
  ಹಿಂದಿ ಕಿರಿಕ್ ಪಾರ್ಟಿಯಲ್ಲಿ ಇವರೇ ಹೀರೋ ಅಂತೆ...!! | Filmibeat Kannada

  ಕನ್ನಡದ ಸೂಪರ್ ಹಿಟ್ ಸಿನಿಮಾ 'ಕಿರಿಕ್ ಪಾರ್ಟಿ' ಬಾಲಿವುಡ್ ನಲ್ಲಿ ರೀಮೇಕ್ ಆಗಲಿದೆ ಎಂಬ ಸುದ್ದಿ ಹಲವು ದಿನಗಳಿಂದ ಚರ್ಚೆಯಾಗುತ್ತಲೇ ಇದೆ. ಈ ಚಿತ್ರದಲ್ಲಿ ಬಾಲಿವುಡ್ ನ ಸ್ಟಾರ್ ನಟರೊಬ್ಬರು ಅಭಿನಯಿಸಲಿದ್ದಾರೆ ಎನ್ನಲಾಗಿತ್ತು. ಈಗ ಸ್ಟಾರ್ ನಟನಿಗೆ ಕೋಕ್ ಕೊಟ್ಟಿರುವ ಚಿತ್ರತಂಡ ಹೊಸ ನಾಯಕನಿಗೆ ಮಣೆ ಹಾಕಿದೆ.

  ಹೌದು, ಹಿಂದಿಯ 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಕಾರ್ತಿಕ್ ಆರ್ಯನ್ ನಾಯಕನಾಗಿ ಆಯ್ಕೆಯಾಗಿದ್ದಾರೆ. 'ಸೋನು ಕೆ ಟಿತು ಕೀ ಸ್ವೀಟಿ' ಚಿತ್ರದ ಮೂಲಕ ಖ್ಯಾತಿ ಪಡೆದ ಕಾರ್ತಿಕ್ ಆರ್ಯನ್ ಈ ರೊಮ್ಯಾಂಟಿಕ್ ಕಾಲೇಜ್ ಡ್ರಾಮಾಗೆ ಹೀರೋ ಆಗಿದ್ದಾರೆ.

  'ಕಿರಿಕ್ ಪಾರ್ಟಿ' ಹಿಂದಿ ರೀಮೇಕ್ ಗೆ ಸಿದ್ದಾರ್ಥ್ ಹೀರೋ ಕಣ್ರೀ.! 'ಕಿರಿಕ್ ಪಾರ್ಟಿ' ಹಿಂದಿ ರೀಮೇಕ್ ಗೆ ಸಿದ್ದಾರ್ಥ್ ಹೀರೋ ಕಣ್ರೀ.!

  ಈ ಹಿಂದೆ ಸಿದ್ಧಾರ್ಥ್ ಮಲ್ಹೋತ್ರ ಹಿಂದಿ ಕಿರಿಕ್ ಪಾರ್ಟಿಯಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದ್ರೆ, ಕೊನೆಯ ಕ್ಷಣದಲ್ಲಿ ಸಿದ್ಧಾರ್ಥ್ ಬದಲಿಗೆ ಕಾರ್ತಿಕ್ ರನ್ನ ಹೀರೋ ಆಗಿಸಿದ್ದಾರೆ.

  2016 ರಲ್ಲಿ ತೆರೆಕಂಡಿದ್ದ ಈ ಚಿತ್ರವನ್ನ ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದರು. ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗಡೆ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು. ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಹಣ ಗಳಿಸಿದ ಈ ಸಿನಿಮಾ 150ಕ್ಕೂ ಅಧಿಕ ದಿನ ಪ್ರದರ್ಶನ ಕಂಡಿತ್ತು.

  ಅಂದ್ಹಾಗೆ, ಹಿಂದಿಯಲ್ಲಿ ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಅಭಿಷೇಕ್ ಜೈನ್ ಆಕ್ಷನ್ ಕಟ್ ಹೇಳಲಿದ್ದು, ಧೀರಜ್ ವಾದ್ವನ್, ಅಜಯ್ ಕಪೂರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

  ಸೇಲ್ ಆಗೋಯ್ತು 'ಕಿರಿಕ್ ಪಾರ್ಟಿ' ಚಿತ್ರದ ಹಿಂದಿ ರೀಮೇಕ್ ರೈಟ್ಸ್ ಸೇಲ್ ಆಗೋಯ್ತು 'ಕಿರಿಕ್ ಪಾರ್ಟಿ' ಚಿತ್ರದ ಹಿಂದಿ ರೀಮೇಕ್ ರೈಟ್ಸ್

  ಈಗಾಗಲೇ ತೆಲುಗಿನಲ್ಲಿ 'ಕಿರಿಕ್ ಪಾರ್ಟಿ' ಹೆಸರಿನಲ್ಲೇ ಈ ಸಿನಿಮಾ ರಿಮೇಕ್ ಆಗಿ ಬಿಡುಗಡೆಯಾಗಿಯೂ ಆಗಿದೆ. ಈಗ ಹಿಂದಿ ನೆಟಿವಟಿಗೆ ತಕ್ಕಂತೆ ಹೊಸ ಮೇಕಿಂಗ್ ಮಾಡಲು ಮುಂದಾಗಿದೆ ಬಿಟೌನ್. ಸದ್ಯಕ್ಕೆ ನಾಯಕನನ್ನ ಆಯ್ಕೆ ಮಾಡಿರುವ ಚಿತ್ರತಂಡ ನಾಯಕಿಯನ್ನ ಗುಟ್ಟಾಗಿ ಉಳಿಸಿದೆ.

  English summary
  Kartik Aaryan in the Hindi remake of Kannada smash hit Kirik party. Directed by Abhishek Jain, Produced by Dheeraj Wadhwan, Ajay Kapoor and Vrithika Laykar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X