'ಅಲಾ ವೈಕುಂಠಪುರಂಲೋ' ರಿಮೇಕ್‌ಗೆ ನಾಯಕ-ನಾಯಕಿ ಫಿಕ್ಸ್
ತೆಲುಗು ಹಾಗೂ ತಮಿಳಿನ ಹಿಟ್ ಚಿತ್ರಗಳನ್ನು ಹಿಂದಿಯಲ್ಲಿ ರಿಮೇಕ್ ಮಾಡುವ ಸಂಪ್ರದಾಯ ಬಾಲಿವುಡ್‌ನಲ್ಲಿ ಹೆಚ್ಚಿದೆ. ತಮಿಳಿನಲ್ಲಿ ವಿಜಯ್ ನಟನೆಯಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಮಾಸ್ಟರ್ ಚಿತ್ರವನ್ನು ಸಲ್ಮಾನ್ ಖಾನ್ ರಿಮೇಕ್ ಮಾಡುತ್ತಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿದೆ.
ಈ ಕಡೆ ತೆಲುಗಿನಲ್ಲಿ ರವಿತೇಜ ನಟಿಸಿರುವ ಇನ್ನು ಬಿಡುಗಡೆಯಾಗದ 'ಖಿಲಾಡಿ' ಚಿತ್ರದ ಹಿಂದಿ ರಿಮೇಕ್ ಹಕ್ಕನ್ನು ಸಲ್ಮಾನ್ ಖಾನ್ ಸಹೋದರ ಖರೀದಿ ಮಾಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಹೀಗೆ, ಸೌತ್ ಇಂಡಸ್ಟ್ರಿಯ ಹಿಟ್ ಸಿನಿಮಾಗಳು ಬಿಟೌನ್‌ಗೆ ರಿಮೇಕ್ ಆಗುತ್ತಿದೆ. ಈ ಮಧ್ಯೆ ಅಲ್ಲು ಅರ್ಜುನ್ ಸಿನಿಮಾವೊಂದು ಬಿಗ್ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದೆ. ಮುಂದೆ ಓದಿ...

ಅಲಾ ವೈಕುಂಠಪುರಂಲೋ ರಿಮೇಕ್?
ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ನಟನೆಯಲ್ಲಿ ಮೂಡಿಬಂದಿದ್ದ ಅಲಾ ವೈಕುಂಠಪುರಂಲೋ ಸಿನಿಮಾ ಸೌತ್ ಇಂಡಸ್ಟ್ರಿಯಲ್ಲಿ ಮೆಗಾ ಹಿಟ್ ಆಗಿತ್ತು. ಈ ಚಿತ್ರವನ್ನು ಬಾಲಿವುಡ್‌ಗೆ ತರಲು ನಿರ್ಮಾಪಕರು ಸಿದ್ದವಾಗಿದ್ದು, ಈಗಾಗಲೇ ಕಲಾವಿದರ ಆಯ್ಕೆ ಅಂತಿಮವಾಗಿದೆ ಎಂಬ ವಿಚಾರ ಹೊರಬಿದ್ದಿದೆ.

ಕಾರ್ತಿಕ್-ಕೃತಿ ನಟನೆ
ತೆಲುಗಿನಲ್ಲಿ ಅಲ್ಲು ಅರ್ಜುನ್ ನಿರ್ವಹಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ಕಾರ್ತಿಕ್ ಆರ್ಯನ್ ನಿಭಾಯಿಸಲಿದ್ದಾರೆ ಎಂಬ ಸಮಾಚಾರ ತಿಳಿದು ಬಂದಿದೆ. ಹಾಗೂ ಪೂಜಾ ಹೆಗ್ಡೆ ಪಾತ್ರದಲ್ಲಿ ಹಿಂದಿಯಲ್ಲಿ ಕೃತಿ ಸನೂನ್ ನಟಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ.

ರಿಮೇಕ್ ಹಕ್ಕಿಗಾಗಿ ಬೇಡಿಕೆ
ಅಲಾ ವೈಕುಂಠಪುರಂಲೋ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಬಿಸಿನೆಸ್ ಮಾಡಿತ್ತು. ದಾಖಲೆಗಳ ಪ್ರಕಾರ 260 ಕೋಟಿವರೆಗೂ ಗಳಿಕೆ ಕಂಡಿದೆ. ಇದರ ಜೊತೆಗೆ ಡಿಜಿಟಲ್ ಹಕ್ಕು, ಸ್ಯಾಟ್‌ಲೈಟ್ ಹಕ್ಕಿನಿಂದಲೂ ಒಳ್ಳೆಯ ಗಳಿಕೆ ಕಂಡಿದೆ. ಹಾಗಾಗಿ, ಹಿಂದಿಗೆ ರಿಮೇಕ್ ಮಾಡುವ ಉದ್ದೇಶದಿಂದ ಕೆಲವು ಸ್ಟಾರ್ ನಟರು ರಿಮೇಕ್ ಹಕ್ಕು ಖರೀಸಲು ಪ್ರಯತ್ನಿಸಿದರು. ಆದರೆ, ಗೀತಾ ಆರ್ಟ್ಸ್ ಕೊಟ್ಟಿಲ್ಲ.
Recommended Video

ಡೈರೆಕ್ಟರ್ ಯಾರು?
ತೆಲುಗಿನಲ್ಲಿ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸಿದ್ದರು. ಅಲ್ಲು ಅರ್ಜುನ್ ಜೊತೆ ಇದು ಹ್ಯಾಟ್ರಿಕ್ ಗೆಲುವು ಆಗಿತ್ತು. ತೆಲುಗಿನಲ್ಲಿ ನಿರ್ಮಿಸಿದ್ದ ಗೀತಾ ಆರ್ಟ್ಸ್ ಸಂಸ್ಥೆ ಹಿಂದಿಯ ಖ್ಯಾತ ಸಂಸ್ಥೆಯೊಂದಿಗೆ ಸೇರಿ ಜಂಟಿ ನಿರ್ಮಾಣ ಮಾಡಲು ಮುಂದಾಗಿದೆ. ಸದ್ಯಕ್ಕೆ ನಾಯಕ-ನಾಯಕಿ ಆಯ್ಕೆ ಅಂತಿಮವಾಗಿದ್ದು, ನಿರ್ದೇಶಕ ಯಾರೆಂದು ಬಹಿರಂಗವಾಗಿಲ್ಲ. ಇನ್ನುಳಿದಂತೆ ಪೂರ್ವ ತಯಾರಿ ನಡೆಯುತ್ತಿದ್ದು, ಸದ್ಯದಲ್ಲೇ ಸಿನಿಮಾ ಆರಂಭವಾಗಲಿದೆ.


Click it and Unblock the Notifications











