ಅಂದು ಕೇವಲ ₹70,000ಕ್ಕೆ ಮೊದಲ ಚಿತ್ರ ಒಪ್ಪಿಕೊಂಡ ಈ ಸ್ಟಾರ್ ಇಂದು ಪಡೆಯುವ ಸಂಭಾವನೆ 50 ಕೋಟಿ..!

ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಇನ್ನೂ ಚಿತ್ರರಂಗದ ವಿಚಾರಕ್ಕೆ ಬಂದರೆ ಇಲ್ಲಿ ಅನೇಕರು ಪ್ರೇಕ್ಷಕರ ಭಾವನೆಗಳಿಗೆ ಬೆಲೆ ನೀಡಲ್ಲ. ಯಾಕೆಂದರೆ, ಇಲ್ಲಿ ಬಹುತೇಕರದ್ದು ಲೆಕ್ಕಾಚಾರದ ಬದುಕಾಗಿರುತ್ತೆ. ನಾವು ಉದ್ಧಾರ ಆದರೆ ಸಾಕು ಎಂಬ ಭಾವನೆ ಬಹುತೇಕರಲ್ಲಿರುತ್ತೆ.

ಅದರಲ್ಲಿಯೂ ಯಾವ ಗಾಡ್ ಫಾದರ್ ಬೆಂಬಲ ಇಲ್ಲದೇ ತಮ್ಮ ಪರಿಶ್ರಮದಿಂದ ಬದುಕು ಕಟ್ಟಿಕೊಳ್ಳಲು ಬರುವ ಬಹುತೇಕರು, ತಮ್ಮ ಆರಂಭಿಕ ಪ್ರಯಾಣದಲ್ಲಿ.. ಕೇವಲ ಹಣ ಸಿಗುತ್ತೆ ಎಂಬ ಕಾರಣಕ್ಕೆ ಮಾಡಬಾರದ ಚಿತ್ರಗಳನ್ನೆಲ್ಲ ಮಾಡುತ್ತಾರೆ. ಈ ಮೂಲಕ ಅವರ ಮೇಲೆ ನಂಬಿಕೆ ಇಟ್ಟಿರುವ ಪ್ರೇಕ್ಷಕರಿಗೆ ಮತ್ತು ಅವರ ಬದುಕನ್ನು ತುಂಬಾ ಹತ್ತಿರದಿಂದ ನೋಡುತ್ತಿರುವವರಿಗೆ ನಿರಾಸೆಯನ್ನು ಮಾಡುತ್ತಾರೆ. ಇದಕ್ಕೆ ಕಾರ್ತಿಕ್ ಆರ್ಯನ್ ಸದ್ಯದ ಉದಾಹರಣೆ.

Kartik Aaryan revealed that he once did a film just for money during his early struggles

ಹೌದು, ಕಾರ್ತಿಕ್ ಆರ್ಯನ್.. ಬಾಲಿವುಡ್‌ನ ಹೊಸ ಬ್ರ್ಯಾಂಡ್. ಯಾರ ನೆರವು ಇಲ್ಲದೆ, ಯಾರ ಸಹಾಯ ಇಲ್ಲದೇ ಹಿಂದಿ ಚಿತ್ರರಂಗಕ್ಕೆ ಬಂದು ತಮ್ಮದೇ ಸ್ಥಾನ-ಮಾನ ಸಂಪಾದಿಸಿದ ಸ್ಟಾರ್. ಹಂತ ಹಂತವಾಗಿ ಹಿಂದಿ ಚಿತ್ರರಂಗದಲ್ಲಿ ನೆಲೆಯೂರಿದ ಕಾರ್ತಿಕ್ ಆರ್ಯನ್ ಅವರಿಗೆ ಇವತ್ತು ಉತ್ತರ ಭಾರತದಲ್ಲಿ ಅಗಣಿತ ಅಭಿಮಾನಿಗಳಿದ್ದಾರೆ.

ಇನ್ನೂ ಸಂಭಾವನೆಯ ವಿಚಾರಕ್ಕೆ ಬಂದರೆ ಕಾರ್ತಿಕ್ ಆರ್ಯನ್ ಚಿತ್ರವೊಂದಕ್ಕೆ ಹತ್ ಹತ್ರ 40-50 ಕೋಟಿ ಸಂಭಾವನೆ ಪಡೆಯುತ್ತಾರೆ ಅನ್ನುವ ಸುದ್ದಿ ಇದೆ. ಇಂಥಾ ಕಾರ್ತಿಕ್ ಆರ್ಯನ್ ಒಂದು ಕಾಲದಲ್ಲಿ ಕೇವಲ ದುಡ್ಡು ಸಿಗುತ್ತೆ ಎನ್ನುವ ಕಾರಣಕ್ಕೆ ಚಿತ್ರದ ಕಥೆಯನ್ನು ಕೇಳದೇ ಅಭಿನಯಿಸಿದ್ದು ಇದೆ. ಖುದ್ದು ಕಾರ್ತಿಕ್ ಆರ್ಯನ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ತಮ್ಮ ಭೂಲ ಭೂಲಯ್ಯ 3 ಚಿತ್ರದ ಪ್ರಚಾರದ ಸಮಯದಲ್ಲಿ ಪಿಂಕ್ ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕಾರ್ತಿಕ್ ಆರ್ಯನ್ ನಾನು ಯಾವ ಚಿತ್ರ ಎಂದು ಹೇಳಲಾರೆ ಆದರೆ ಆರಂಭದಲ್ಲಿ ನನ್ನ ಬಳಿ ಬಿಡಿಗಾಸು ಇರುತ್ತಿರಲಿಲ್ಲ. ಆ ಸಮಯದಲ್ಲಿ ಚಿತ್ರವೊಂದರ ಅವಕಾಶ ಸಿಕ್ಕಿತ್ತು. ನಾನು ಕೂಡಲೇ ಒಪ್ಪಿಕೊಂಡೆ ಎಂದಿದ್ದಾರೆ. ಒಪ್ಪಿಕೊಳ್ಳದೇ ಆ ಕ್ಷಣಕ್ಕೆ ನನಗೆ ಬೇರೆ ಯಾವ ದಾರಿ ಕೂಡ ಇರಲಿಲ್ಲ ಎಂದು ಹೇಳಿದ್ದಾರೆ. ಕೇವಲ ಹಣಕ್ಕೆ ಆ ಚಿತ್ರ ಒಪ್ಪಿಕೊಂಡೆ ಎಂದು ಕೂಡ ಹೇಳಿದ್ದಾರೆ.

ಮುಂದುವರೆದು ಆ ಚಿತ್ರ ಮಾಡಿದ್ದಕ್ಕೆ ನನಗೆ ಈಗಲೂ ಪ್ರಾಯಶ್ಚಿತ ಇದೆ ಆದರೆ ಆಗ ನನಗೆ ಅದು ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ. ಇನ್ನೂ ಇದೇ ಸಂದರ್ಶನದಲ್ಲಿ ಸ್ಟಾರ್‌ ಹೀರೋ ಅಥವಾ ಹೀರೋಯಿನ್‌ಗಳ ಸಂಭಾವನೆ ಗಗನದೆತ್ತರಕ್ಕೆ ಬೆಳೆದ ವಿಚಾರದ ಕುರಿತು ಕೂಡ ಮಾತನಾಡಿರುವ ಕಾರ್ತಿಕ್ ಆರ್ಯನ್ ಇಲ್ಲಿ ಎಲ್ಲವೂ ವ್ಯಾಪಾರ ಆಗಿ ಈಗ ಬದಲಾಗಿದೆ. ಈಗ ನಿರ್ಮಾಪಕರಿಗೆ ಹಣ ಮರಳಿ ಪಡೆಯಲು ಅಥವಾ ಲಾಭ ಮಾಡಲು ಹತ್ತಾರು ದಾರಿಗಳಿವೆ, ಅನೇಕ ಹಕ್ಕುಗಳನ್ನು ನೀವು ಮಾರಾಟ ಮಾಡಬಹುದು ಅದರಿಂದ ದುಡ್ಡು ಗಳಿಸಬಹುದು, ಹೀಗಾಗಿ ಹೆಚ್ಚು ಸಂಭಾವನೆಯನ್ನು ನಿರೀಕ್ಷೆ ಮಾಡುವುದು ತಪ್ಪಲ್ಲ ಎಂದು ಹೇಳಿದ್ದಾರೆ.

ಅಂದ್ಹಾಗೇ ಇವತ್ತು ಒಂದಾದ ಮೇಲೊಂದು ಚಿತ್ರ ಮಡುತ್ತಿರುವ ಕಾರ್ತಿಕ್ ಆರ್ಯನ್, ಒಂದಾನೊಂದು ಕಾಲದಲ್ಲಿ ಕೇವಲ 70,000 ರೂಪಾಯಿಗೆ ಚಿತ್ರವನ್ನು ಒಪ್ಪಿಕೊಂಡಿದ್ದರು. ಆ ಚಿತ್ರದ ಹೆಸರು ಪ್ಯಾರ್ ಕಾ ಪಂಚನಾಮ. ವಿಶೇಷ ಅಂದರೆ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಕೂಡ ಗೆದ್ದಿತ್ತು. ಕಾರ್ತಿಕ್ ಆರ್ಯನ್‌ ಅವರಿಗೆ ಅಪಾರವಾದ ಹೆಸರನ್ನು ಕೂಡ ತಂದು ಕೊಟ್ಟಿತ್ತು. ಇಲ್ಲಿಂದ ಶುರುವಾದ ಕಾರ್ತಿಕ್ ಆರ್ಯನ್ ಯಾತ್ರೆ ಈಗ ಭೂಲ್ ಭೂಲಯ್ಯ 3 ವರೆಗೆ ಬಂದು ನಿಂತಿದೆ. 70,000 ರೂಪಾಯಿಯಿಂದ 50 ಕೋಟಿಯವರೆಗೆ ಕಾರ್ತಿಕ್ ಆರ್ಯನ್ ಸಂಭಾವನೆ ತಲುಪಿದೆ. ಭೂಲ್ ಭೂಲಯ್ಯ 3 ಈ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ.

More from Filmibeat

Read more about: remuneration money bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X