ಕಾರ್ತಿಕ್ ಆರ್ಯನ್ ಮನೆಯಲ್ಲಿ ಗಣೇಶನ ಹಬ್ಬ ಆಚರಿಸಿದ ಶ್ರೀಲೀಲಾ, ಮದುವೆ ಊಟ ಯಾವಾಗ ಎಂದ ಫ್ಯಾನ್ಸ್

ಚಿತ್ರರಂಗದಲ್ಲಿ ನಾಯಕಿಯರು ಯಾರೇ ಹುಡುಗರ ಜೊತೆ ಸುಳಿದಾಡಿದರೂ ಅವರ ಅಭಿಮಾನಿಗಳು ತಲೆ ಕೆದರಿಕೊಳ್ಳುತ್ತಾರೆ. ಆ ಹುಡುಗನ ಕುಲ.. ಗೋತ್ರ.. ಜನ್ಮವನ್ನೇ ಜಾಲಾಡಲು ಶುರು ಮಾಡುತ್ತಾರೆ. ಅಂಥಾದ್ದರಲ್ಲಿ ಚಿತ್ರರಂಗದಲ್ಲಿಯೇ ಇರುವ ಯುವ ನಾಯಕನ ಜೊತೆ ಮೇಲಿಂದ ಮೇಲೆ ನಾಯಕಿ ಕಾಣಿಸಿಕೊಂಡರೆ..? ಅಭಿಮಾನಿಗಳ ಎದೆಯೊಡೆಯದಿರುತ್ತಾ ? ಹಾಗಂತೆ .. ಹೀಗಂತೆ .. ಎಂದು ಮಾತನಾಡುವ ಒಂದು ವರ್ಗ ಸುಮ್ಮನೆ ಕೂರುತ್ತಾ ..?

ಸದ್ಯ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ವಿಚಾರದಲ್ಲಿ ಇದೇ ಆಗುತ್ತಿದೆ. ಹೌದು.. ಎಲ್ಲರಿಗೆ ಗೊತ್ತಿರುವಂತೆ ಕನ್ನಡದಿಂದ ಕಾಣೆಯಾದ ಶ್ರೀಲೀಲಾ ಸದ್ಯ ಬಾಲಿವುಡ್‌ನಲ್ಲಿ ಬಿಡಾರ ಹೂಡಿದ್ದಾರೆ. ಕಾರ್ತಿಕ್ ಆರ್ಯನ್ ಅಭಿನಯದ ಚಿತ್ರದ ಮೂಲಕ ಹಿಂದಿ ಉದ್ಯಮವನ್ನು ಪ್ರವೇಶ ಮಾಡುತ್ತಿದ್ದಾರೆ. ಅನುರಾಗ್ ಬಸು ನಿರ್ದೇಶನದ ಈ ಚಿತ್ರದ ಮೇಲೆ ಅಪಾರವಾದ ನಿರೀಕ್ಷೆಗಳಿವೆ.

Kartik Aaryan amp amp Sreeleela s Ganesh Chaturthi Sparks Dating Rumours

ಆದರೆ.. ಇದೇ ಸಮಯದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ನಡುವೆ ವೃತ್ತಿಪರ ಸಂಬಂಧಕ್ಕಿಂತ ಮೀರಿದ ಸಂಬಂಧ ಬೆಸೆದುಕೊಂಡಿದೆ ಎನ್ನುವ ಅನುಮಾನ ಮೊದಲಿಂದ ಹಲವರಲ್ಲಿದೆ. ಇದಕ್ಕೆ ಪೂರಕವಾಗಿ ಇಬ್ಬರ ನಡೆ ಕೂಡ ಹಾಗೇ ಇದೆ. ಸಿನಿಮಾದ ಸೆಟ್‌ನ ಆಚೆ ಕೂಡ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಹಲವು ಬಾರಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ.

ಇನ್ನು.. ಕಾರ್ತಿಕ್ ಆರ್ಯನ್ ಮನೆಯವರಿಗೆ ಶ್ರೀಲೀಲಾ ಅಂದರೆ ಪಂಚ ಪ್ರಾಣ. ಶ್ರೀಲೀಲಾ ಇರದೇ ಕಾರ್ತಿಕ್ ಆರ್ಯನ್ ಮನೆಯಲ್ಲಿ ಯಾವ ಸಭೆ-ಸಮಾರಂಭ-ಕಾರ್ಯಕ್ರಮ ನಡೆಯುವುದೇ ಇಲ್ಲವೆನ್ನುವಂತಾಗಿದೆ. ಇದಕ್ಕೆ ಇನ್ನೊಂದು ಕೈಗನ್ನಡಿ ಎಂಬಂತೆ ಸದ್ಯ ಕಾರ್ತಿಕ್ ಆರ್ಯನ್ ಮನೆಯಲ್ಲಿ ನಡೆದ ಗಣಪತಿ ಹಬ್ಬದಲ್ಲಿ ಶ್ರೀಲೀಲಾ ತಮ್ಮ ತಾಯಿಯ ಜೊತೆ ಭಾಗವಹಿಸಿದ್ದಾರೆ. ವಿಘ್ನ ನಿವಾರಕನ ಪೂಜೆಯನ್ನು ಮಾಡಿದ್ದಾರೆ.

ವಿಶೇ‍ಷ ಅಂದರೆ ಶ್ರೀಲೀಲಾ ತಾಯಿಯ ಪಕ್ಕ ಕಾರ್ತಿಕ್ ಆರ್ಯನ್ ನಿಂತರೆ .. ಕಾರ್ತಿಕ್ ಆರ್ಯನ್ ತಾಯಿಯ ಪಕ್ಕ ಶ್ರೀಲೀಲಾ ನಿಂತುಕೊಂಡಿದ್ದಾರೆ. ಕ್ಯಾಮರಾಗೆ ಫೋಸ್ ನೀಡಿದ್ದಾರೆ. ಕಾರ್ತಿಕ್ ಆರ್ಯನ್ ಆಗಲಿ.. ಶ್ರೀಲೀಲಾ ಆಗಲಿ.. ಗಣೇಶ ಹಬ್ಬದ ಸಂಭ್ರಮಾಚರಣೆಯ ಈ ಫೋಟೊಗಳನ್ನು ಹಂಚಿಕೊಂಡಿಲ್ಲವಾದರು ಸದ್ಯ ಈ ಫೋಟೊಗಳು ರೆಡ್ಡಿಟ್‌ನಲ್ಲಿ ವೈರಲ್ ಆಗಿವೆ. ಚರ್ಚೆಗೆ ನಾಂದಿಯನ್ನು ಹಾಡಿವೆ. ಹಲವರು ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿರುವುದು ನೂರಕ್ಕೆ ನೂರು ಕನ್ಫರ್ಮ್ ಎಂದು ಹೇಳುತ್ತಿದ್ದಾರೆ. ಮದುವೆ ಊಟ ಯಾವಾಗ ಹಾಕಿಸ್ತೀರಾ..? ಎಂದು ಪ್ರಶ್ನೆಯನ್ನು ಕೂಡ ಸೋಶಿಯಲ್ ಮೀಡಿಯಾ ಮೂಲಕ ಕೇಳುತ್ತಿದ್ಧಾರೆ.

ಅಂದ್ಹಾಗೇ ಇದಕ್ಕೂ ಮುನ್ನ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಸಹೋದರಿ ಮಾಡಿದ ಸಾಧನೆಗೆ ಕಾರ್ತಿಕ್ ಆರ್ಯನ್ ಮನೆಯಲ್ಲಿ ಪಾರ್ಟಿಯನ್ನು ಹಮ್ಮಿಕೊಂಡಿದ್ದರು. ಆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಶ್ರೀಲೀಲಾ, ಕಾರ್ತಿಕ್ ಆರ್ಯನ್ ಅವರ ಕುಟುಂಬದ ಜೊತೆ ಕುಣಿದು ಕುಪ್ಪಳಿಸಿದ್ದರು.

Kartik Aaryan amp amp Sreeleela s Ganesh Chaturthi Sparks Dating Rumours

ಇನ್ನು ಕೆಲ ದಿನಗಳ ಹಿಂದೆ ನಿಮ್ಮ ಮನೆಗೆ ಬರುವ ಸೊಸೆ ಹೇಗಿರಬೇಕು, ಅವರ ಮೇಲೆ ನಿಮಗೆ ಇರುವ ನಿರೀಕ್ಷೆಗಳೇನು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಕಾರ್ತಿಕ್ ಆರ್ಯನ್ ಅವರ ತಾಯಿ ಮಾಲಾ ತಿವಾರಿ ನನ್ನ ಮಗನ ಕೈ ಹಿಡಿಯುವ ಹುಡುಗಿ ಒಳ್ಳೆಯ ಡಾಕ್ಟರ್ ಆಗಿರಬೇಕು ಎಂದು ಹೇಳಿದ್ದರು. ಇದು ನನ್ನ ಬೇಡಿಕೆ ಮಾತ್ರವಲ್ಲ ನಮ್ಮ ಇಡೀ ಕುಟುಂಬದ ಬೇಡಿಕೆ ಕೂಡ ಹೌದು ಎಂದು ಹೇಳಿದ್ದರು.

ಇನ್ನು ಬಹುತೇಕರಿಗೆ ಗೊತ್ತಿರುವಂತೆ ಶ್ರೀಲೀಲಾ ಕೇವಲ ನಾಯಕಿ ಮಾತ್ರ ಅಲ್ಲ. ಆಕ್ಟಿಂಗ್ ಜೊತೆಯಲ್ಲಿ ಶ್ರೀಲೀಲಾ ಎಂಬಿಬಿಎಸ್ ವ್ಯಾಸಂಗವನ್ನು ಕೂಡ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ನಡುವೆ ಪ್ರೇಮಾಂಕುರವಾಗಿರುವುದು ನೂರಕ್ಕೆ ನೂರು ಸತ್ಯ ಎನ್ನುವ ಮಾತು ಬಾಲಿವುಡ್‌ನಲ್ಲಿ ಕೇಳಿ ಬರುತ್ತಲೇ ಇದೆ. ಹೀಗಿರುವಾಗ ಕಾರ್ತಿಕ್ ಆರ್ಯನ್ ಮನೆಯಲ್ಲಿ ಈಗ ಶ್ರೀಲೀಲಾ ಕಾಣಿಸಿಕೊಂಡು ಗಣೇಶನ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಮದುವೆ ಮತ್ತು ಪ್ರೀತಿಯ ವದಂತಿಗಳಿಗೆ ಇನ್ನಷ್ಟು ಪುಷ್ಠಿ ನೀಡಿದ್ಧಾರೆ.

Kartik & family with Sreeleela & family at Ganpati visarjan in his home
byu/Strict-Cup-6640 inBollyBlindsNGossip

Sreeleela at kartik aaryan's sister celebration
byu/Medium_Bicycle_1004 inBollyBlindsNGossip

More from Filmibeat

English summary
Are Kartik Aaryan and Sreeleela the new IT couple? New pictures of the rumored couple celebrating Ganesh Chaturthi with their families are reigniting dating speculation. Get all the details and fan reactions here.
Read more about: sreeleela dating love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X