For Quick Alerts
  ALLOW NOTIFICATIONS  
  For Daily Alerts

  ದೊಡ್ಡ ಸಂಸ್ಥೆಗಳಿಗೆ ಬೇಡವಾಗಿದ್ದ ಕಾರ್ತಿಕ್‌ಗೆ ಸಿಕ್ತು ಬಂಪರ್ ಪ್ರಾಜೆಕ್ಟ್

  |

  ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಮೀರ್ ವಿದ್ವಾನ್ಸ್ ಜೊತೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕಳೆದ ಒಂದೂವರೆ ತಿಂಗಳಿಂದ ಚರ್ಚೆಯಲ್ಲಿದೆ. ಇದೀಗ, ಈ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಿದೆ. ಕಾರ್ತಿಕ್ ಮತ್ತು ಸಮೀರ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಶುರುವಾಗಿದೆ.

  ಈ ಚಿತ್ರಕ್ಕೆ ಬಿಟೌನ್‌ನ ಖ್ಯಾತ ನಿರ್ಮಾಪಕ ಸಾಜಿದ್ ಬಂಡವಾಳ ಹಾಕುತ್ತಿದ್ದಾರೆ. 'ಸತ್ಯನಾರಾಯಣ್ ಕಿ ಕಥಾ' ಎಂದು ಹೆಸರಿಟ್ಟಿದ್ದು, ಚಿತ್ರದ ಟೈಟಲ್ ಪೋಸ್ಟರ್ ಇಂದು (ಜೂನ್ 23) ರಿಲೀಸ್ ಆಗಿದೆ. ಮುಂದೆ ಒದಿ...

  ಸಮೀರ್ ವಿದ್ವಾನ್ಸ್ ಚಿತ್ರದಲ್ಲಿ ಕಾರ್ತಿಕ್

  ಸಮೀರ್ ವಿದ್ವಾನ್ಸ್ ಚಿತ್ರದಲ್ಲಿ ಕಾರ್ತಿಕ್

  ಮರಾಠಿ ಇಂಡಸ್ಟ್ರಿಯಲ್ಲಿ ಹೆಸರುವಾಸಿಯಾಗಿರುವ ಸಮೀರ್ ಈಗ ಬಾಲಿವುಡ್‌ನಲ್ಲಿ ಚೊಚ್ಚಲ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಮೀರ್ ವಿದ್ವಾನ್ಸ್ ನಿರ್ದೇಶಿಸಿದ್ದ ಮರಾಠಿ ಸಿನಿಮಾ 'ಆನಂದಿ ಗೋಪಾಲ್' ಅತ್ಯುತ್ತಮ ಸಾಮಾಜಿಕ ಕಳಕಳಿ ಚಿತ್ರ ಎಂದು ರಾಷ್ಟ್ರ ಪ್ರಶಸ್ತಿ ಪಡೆದಿತ್ತು. ಇದಕ್ಕೂ ಮುಂಚೆ ಡಬಲ್ ಸೀಟ್, ಟೈಮ್ ಪ್ಲೀಸ್, ಮಾಲಾ ಕಹಿಚ್ ಪ್ರಾಬ್ಲಮ್ ನಹಿ ಮತ್ತು ಆನಂದಿ ಗೋಪಾಲ್ ಅಂತಹ ಹಿಟ್ ಚಿತ್ರಗಳನ್ನು ಮಾಡಿದ್ದರು.

  ಕರಣ್ ಬಳಿಕ ಶಾರುಖ್ ಸಂಸ್ಥೆಯಿಂದನೂ ಕಾರ್ತಿಕ್ ಆರ್ಯನ್ ಔಟ್: ಕಾರಣವೇನು?ಕರಣ್ ಬಳಿಕ ಶಾರುಖ್ ಸಂಸ್ಥೆಯಿಂದನೂ ಕಾರ್ತಿಕ್ ಆರ್ಯನ್ ಔಟ್: ಕಾರಣವೇನು?

  ದೊಡ್ಡ ನಿರ್ಮಾಪಕ ಸಾಜಿದ್

  ದೊಡ್ಡ ನಿರ್ಮಾಪಕ ಸಾಜಿದ್

  ಹಿಂದಿ ಚಿತ್ರರಂಗದಲ್ಲಿ ಸಾಜಿದ್ ಹೆಸರು ಬಹಳ ದೊಡ್ಡದು. ಈ ಸಂಸ್ಥೆಯಲ್ಲಿ ನಿರ್ಮಾಣವಾಗಿದ್ದ 'ಚಿಚೋರೆ' ಅತ್ಯುತ್ತಮ ಹಿಂದಿ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದಿತ್ತು. ಹೌಸ್‌ಫುಲ್ ಸರಣಿ, ಭಾಗಿ ಸರಣಿ, ಸೂಪರ್ 30, ಕಿಕ್, ಹೈವೇ, 2 ಸ್ಟೇಟ್ಸ್ ಅಂತಹ ಹಿಟ್ ಚಿತ್ರಗಳನ್ನು ನಿರ್ಮಿಸಿರುವುದು ಸಹ ಸಾಜಿದ್.

  ಜವಾಬ್ದಾರಿ ಹೆಚ್ಚಿದ ಎಂದ ಕಾರ್ತಿಕ್

  ಜವಾಬ್ದಾರಿ ಹೆಚ್ಚಿದ ಎಂದ ಕಾರ್ತಿಕ್

  ಈ ಕುರಿತು ಮಾತನಾಡಿರುವ ಕಾರ್ತಿಕ್ ''ಇದೊಂದು ಲವ್ ಸ್ಟೋರಿ, ಸಾಜಿದ್ ಸರ್ ಜೊತೆ ಕೆಲಸ ಮಾಡಲು ಬಹಳ ದಿನಗಳಿಂದ ಎದುರು ನೋಡುತ್ತಿದ್ದೆ. ಈಗ ಅವಕಾಶ ಸಿಕ್ಕಿದೆ. ತುಂಬಾ ಸಂತೋಷವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ತಂಡದ ಜೊತೆ ಕೆಲಸ ಮಾಡುತ್ತಿರುವ ನನ್ನ ಜವಾಬ್ದಾರಿ ಹೆಚ್ಚಿಸಿದೆ'' ಎಂದಿದ್ದಾರೆ.

  ಕರಣ್ ಜೋಹರ್ ಧರ್ಮ ಸಂಸ್ಥೆಯಿಂದ ನಟ ಕಾರ್ತಿಕ್ ಆರ್ಯನ್ ಬ್ಯಾನ್: ಕಾರಣವೇನು?ಕರಣ್ ಜೋಹರ್ ಧರ್ಮ ಸಂಸ್ಥೆಯಿಂದ ನಟ ಕಾರ್ತಿಕ್ ಆರ್ಯನ್ ಬ್ಯಾನ್: ಕಾರಣವೇನು?

  ಕರೀನಾ ಕಪೂರ್ ಸೀತೆ ಅಲ್ಲ ಎಂದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ | Filmibeat Kannada
  ದೊಡ್ಡ ಸಂಸ್ಥೆಗಳಿಂದ ಕಿಕ್‌ಔಟ್

  ದೊಡ್ಡ ಸಂಸ್ಥೆಗಳಿಂದ ಕಿಕ್‌ಔಟ್

  ಈ ಹಿಂದೆ ಕರಣ್ ಜೋಹರ್ ನಿರ್ಮಾಣದ ದೋಸ್ತಾನ 2 ಹಾಗೂ ಶಾರೂಖ್ ಖಾನ್ ಒಡೆತನದ ರೆಡ್‌ ಚಿಲ್ಲಿಸ್ ಸಂಸ್ಥೆಯಲ್ಲೊಂದು ಸಿನಿಮಾ ಮಾಡಬೇಕಿತ್ತು. ಆದರೆ, ಚಿತ್ರಗಳಿಂದ ಕಾರ್ತಿಕ್‌ ಆರ್ಯನ್‌ರನ್ನು ಉದ್ದೇಶಿತವಾಗಿ ಕಿಕ್‌ಔಟ್ ಮಾಡಲಾಯಿತು ಎಂಬ ವಿಚಾರ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

  English summary
  Bollywood actor Kartik Aaryan announces his next film with Sajid Nadiadwala, titled as 'satyanarayan ki katha'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X