ಟೈಟಲ್ ಘೋಷಿಸಿದ 10 ದಿನದಲ್ಲೇ ಹೆಸರು ಬದಲಿಸಿದ ಕಾರ್ತಿಕ್ ಆರ್ಯನ್
ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ನಟಿಸುತ್ತಿರುವ ಹೊಸ ಸಿನಿಮಾದ ಶೀರ್ಷಿಕೆ ಬದಲಾಯಿಸಲಾಗಿದೆ. ಈ ಕುರಿತು ನಿರ್ದೇಶಕರು ಅಧಿಕೃತವಾಗಿ ಪ್ರಕಟಣೆ ಮಾಡಿದ್ದು, ಈ ಹಿಂದೆ ಘೋಷಿಸಿದ್ದ ''ಸತ್ಯನಾರಾಯಣ ಕೀ ಕಥಾ'' ಟೈಟಲ್ ಕೈ ಬಿಟ್ಟಿದೆ.
ಸಮೀರ್ ವಿದ್ವಾನ್ಸ್ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಮಾಡಿದ್ದು, ''ಕೆಲವರ ಭಾವನೆಗಳಿಗೆ ನೋವುಂಟು ಆಗುತ್ತಿದೆ'' ಎಂಬ ಉದ್ದೇಶದಿಂದ ಶೀರ್ಷಿಕೆ ಬದಲಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ನಿರ್ದೇಶಕರ ನಿರ್ಧಾರಕ್ಕೆ ನಟ ಕಾರ್ತಿಕ್ ಆರ್ಯನ್ ದನಿಗೂಡಿಸಿದ್ದಾರೆ.
ಸದ್ಯಕ್ಕೆ ಹೊಸ ಹೆಸರು ಅಂತಿಮಗೊಳಿಸಿಲ್ಲ. ಶೀಘ್ರದಲ್ಲೇ ಹೊಸ ಶೀರ್ಷಿಕೆ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ನಮಾಹ ಪಿಕ್ಚರ್ಸ್ ಸಹಯೋಗದಲ್ಲಿ ಸಾಜಿದ್ ನಾದಿಯಾಡ್ವಾಲಾ ಈ ಸಿನಿಮಾ ನಿರ್ಮಿಸುತ್ತಿದ್ದು, 2021ರ ಅಂತ್ಯದ ವೇಳೆಗೆ ಸಿನಿಮಾ ಶುರು ಮಾಡುವ ಸಾಧ್ಯತೆ ಇದೆ.

ನಿರ್ದೇಶಕ ಸಮೀರ್ ವಿದ್ವಾನ್ಸ್ ಯಾರು?
ಮರಾಠಿ ಇಂಡಸ್ಟ್ರಿಯಲ್ಲಿ ಹೆಸರುವಾಸಿಯಾಗಿರುವ ಸಮೀರ್‌ಗೆ ಬಾಲಿವುಡ್‌ನಲ್ಲಿ ಚೊಚ್ಚಲ ಸಿನಿಮಾ ಇದು. ಸಮೀರ್ ವಿದ್ವಾನ್ಸ್ ನಿರ್ದೇಶಿಸಿದ್ದ ಮರಾಠಿ ಸಿನಿಮಾ 'ಆನಂದಿ ಗೋಪಾಲ್' ಅತ್ಯುತ್ತಮ ಸಾಮಾಜಿಕ ಕಳಕಳಿ ಚಿತ್ರ ಎಂದು ರಾಷ್ಟ್ರ ಪ್ರಶಸ್ತಿ ಪಡೆದಿತ್ತು. ಇದಕ್ಕೂ ಮುಂಚೆ ಡಬಲ್ ಸೀಟ್, ಟೈಮ್ ಪ್ಲೀಸ್, ಮಾಲಾ ಕಹಿಚ್ ಪ್ರಾಬ್ಲಮ್ ನಹಿ ಮತ್ತು ಆನಂದಿ ಗೋಪಾಲ್ ಅಂತಹ ಹಿಟ್ ಚಿತ್ರಗಳನ್ನು ಮಾಡಿದ್ದರು.
ಕಾರ್ತಿಕ್ ಆರ್ಯನ್ ಸಂತಸ
ಈ ಸಿನಿಮಾದಲ್ಲಿ ನಟಿಸುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿದ್ದ ನಟ ಕಾರ್ತಿಕ್ ''ಇದೊಂದು ಲವ್ ಸ್ಟೋರಿ, ಸಾಜಿದ್ ಸರ್ ಜೊತೆ ಕೆಲಸ ಮಾಡಲು ಬಹಳ ದಿನಗಳಿಂದ ಎದುರು ನೋಡುತ್ತಿದ್ದೆ. ಈಗ ಅವಕಾಶ ಸಿಕ್ಕಿದೆ. ತುಂಬಾ ಸಂತೋಷವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ತಂಡದ ಜೊತೆ ಕೆಲಸ ಮಾಡುತ್ತಿರುವ ನನ್ನ ಜವಾಬ್ದಾರಿ ಹೆಚ್ಚಿಸಿದೆ'' ಎಂದಿದ್ದರು.


Click it and Unblock the Notifications