For Quick Alerts
  ALLOW NOTIFICATIONS  
  For Daily Alerts

  ಬಿಕಿನಿ ಚಿತ್ರ ಹಂಚಿಕೊಂಡು ವಿರೋಧಿಗಳ ಬಾಯಿ ಮುಚ್ಚಿಸಿದ ನಟಿ

  By ಫಿಲ್ಮೀಬೀಟ್ ಡೆಸ್ಕ್
  |

  'ಟ್ರೋಲ್' ಎಂಬುದು ದೊಡ್ಡ ಪಿಡುಗಾಗಿ ಭಾರತದಲ್ಲಿ ಬೆಳೆಯುತ್ತಿದೆ. ಕ್ರಿಕೆಟಿಗರು, ರಾಜಕಾರಣಿಗಳು, ಸಿನಿಮಾದವರಿಗೆ ಈ ಟ್ರೋಲಿಗರ ಕಾಟ ತಪ್ಪಿದ್ದಲ್ಲ. ಅದರಲ್ಲೂ ನಟಿಯರಿಗಂತೂ ಟ್ರೋಲ್‌ಗಳು ಹೆಚ್ಚೇ ಕಾಟ ಕೊಡುತ್ತಾರೆ. ಆದರೆ ಕೆಲವು ನಟಿಯರಷ್ಟೆ ಟ್ರೋಲ್‌ಗಳನ್ನು ಎದುರಿಸುವ ಧೈರ್ಯ ತೋರುತ್ತಾರೆ. ಅದರಲ್ಲಿ ಒಬ್ಬರು ನಟಿ ಕಶ್ಮೀರಾ ಶಾ.

  ಹಿಂದಿ ಬಿಗ್‌ಬಾಸ್‌ನಲ್ಲಿ ಸಹ ಕಾಣಿಸಿಕೊಂಡಿದ್ದ ಹಿರಿಯ ನಟಿ ಕಶ್ಮೀರಾ ಶಾ ವಯಸ್ಸು 49 ಆದರೂ ಈಗಲೂ ಯುವ ನಟಿಯರನ್ನು ನಾಚಿಸುವಂತೆ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಹಾಟ್ ಚಿತ್ರಗಳಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಫಾಲೋವರ್ಸ್‌ಗಳನ್ನು ನಟಿ ಕಶ್ಮೀರಾ ಶಾ ಗಳಿಸಿಕೊಂಡಿದ್ದಾರೆ.

  ನಟಿ ಕಶ್ಮೀರಾ ಶಾ ವಯಸ್ಸಿನ ಬಗ್ಗೆ ಕೆಲವು ಟ್ರೋಲರ್‌ಗಳು ಇತ್ತೀಚೆಗೆ ಅಸಭ್ಯವಾಗಿ ಕಮೆಂಟ್‌ ಮಾಡಿದ್ದಾರೆ. ಆದರೆ ನಟನಾ ವೃತ್ತಿಯಲ್ಲಿ 21 ವರ್ಷಗಳ ಅನುಭವ ಹೊಂದಿರುವ ಕಶ್ಮೀರಾ ಆ ಟ್ರೋಲ್‌ಗಳಿಗೆಲ್ಲಾ ಸರಿಯಾದ ರೀತಿಯಲ್ಲಿಯೇ ಉತ್ತರಿಸಿದ್ದಾರೆ.

  ಟ್ರೋಲಿಗರ ಬಾಯಿ ಮುಚ್ಚಿಸಲು ಬಿಕಿನಿ ಚಿತ್ರ

  ಟ್ರೋಲಿಗರ ಬಾಯಿ ಮುಚ್ಚಿಸಲು ಬಿಕಿನಿ ಚಿತ್ರ

  ವಯಸ್ಸಿನ ಬಗ್ಗೆ ಮಾತನಾಡಿದವರಿಗೆ ತಾನು ಚಿರವಯವ್ವನೆ ಎಂದು ತೋರಿಸಲು ಮಾದಕವಾದ ಬಿಕಿನಿ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಕಶ್ಮೀರಾ ಶಾ. ಬಿಕಿನಿ ಉಡುಗೆಯ ಬಗ್ಗೆ ವಿಶೇಷ ಪ್ರೀತಿಯುಳ್ಳ ಕಶ್ಮೀರಾ ಈ ಹಿಂದೆಯೂ ಕೆಲವು ಬಿಕಿನಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ ಈ ಬಾರಿಯದ್ದು ವಿಶೇಷವಾಗಿ ಟ್ರೋಲಿಗರಿಗೆ.

  ನಿಮ್ಮ ಜೀವನಕ್ಕೆ ಬೇರೆ ದಾರಿ ಹುಡುಕಿಕೊಳ್ಳಿ: ಕಶ್ಮೀರಾ

  ನಿಮ್ಮ ಜೀವನಕ್ಕೆ ಬೇರೆ ದಾರಿ ಹುಡುಕಿಕೊಳ್ಳಿ: ಕಶ್ಮೀರಾ

  'ನಾನು ಈಗಾಗಲೇ ಸಾಕಷ್ಟು ಟೀಕೆಗಳನ್ನು ಎದುರಿಸಿಬಿಟ್ಟಿದ್ದೇನೆ. ಆದರೆ ನಾನು ಕೇಳುವುದು ನನ್ನ ಮಾತನ್ನು ಮಾತ್ರ. ನನ್ನ ಜೀವನಕ್ಕೆ ನಾನೇ ರಾಣಿ. ನಿಮ್ಮ ಟ್ರೋಲ್‌ಗಳನ್ನು ಬೇರೆಡೆ ಇಟ್ಟುಕೊಳ್ಳಿ. ನಿಮ್ಮ ಜೀವನಕ್ಕಾಗಿ ಬೇರೆ ದಾರಿ ಯಾವುದನ್ನಾದರೂ ಹುಡುಕಿಕೊಳ್ಳಿ' ಎಂದಿದ್ದಾರೆ ಕಶ್ಮೀರಾ.

  ನಿಮ್ಮಂಥಹಾ ದೇಹ ಹೊಂದುವ ಆಸೆ: ಅಂಕಿತಾ ಲೋಖಂಡೆ

  ನಿಮ್ಮಂಥಹಾ ದೇಹ ಹೊಂದುವ ಆಸೆ: ಅಂಕಿತಾ ಲೋಖಂಡೆ

  ಕಶ್ಮೀರಾ ಚಿತ್ರಕ್ಕೆ ಕಮೆಂಟ್ ಮಾಡಿರುವ ನಟಿ, ಸುಶಾಂತ್ ಸಿಂಗ್ ರಜಪೂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ, 'ಬಹಳ ಪ್ರೇರೇಪಿಸುವ ಚಿತ್ರವಿದು. ನನಗೂ ನಿಮ್ಮಂಥಹಾ ದೇಹ ಹೊಂದುವ ಆಸೆಯಿದೆ' ಎಂದಿದ್ದಾರೆ. ಕಶ್ಮೀರಾ ಚಿತ್ರವನ್ನು ಹಲವರು ಮೆಚ್ಚಿದ್ದಾರೆ. ಕಶ್ಮೀರಾ ತೋರಿದ ಧೈರ್ಯಕ್ಕೆ ಮೆಚ್ಚಿ ಹಲವು ಕಮೆಂಟ್‌ಗಳು ಬಂದಿವೆ.

  ಕೊರೊನಾ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾದ ಮೇಘಾ ಶೆಟ್ಟಿ | Filmibeat Kannada
  ಐಟಂ ಡ್ಯಾನ್ಸರ್ ಆಗಿ ಚಿತ್ರರಂಗಕ್ಕೆ ಎಂಟ್ರಿ

  ಐಟಂ ಡ್ಯಾನ್ಸರ್ ಆಗಿ ಚಿತ್ರರಂಗಕ್ಕೆ ಎಂಟ್ರಿ

  ನಟಿ ಕಶ್ಮೀರಾ ಶಾ 1996 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ಸಿನಿಮಾಗಳಲ್ಲಿ ಐಟಂ ಹಾಡುಗಳ ಡಾನ್ಸರ್ ಆಗಿ ವೃತ್ತಿ ಆರಂಭಿಸಿದ ಕಶ್ಮೀರಾ ಶಾ, ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾಗಳಾದ 'ಯೆಸ್ ಬಾಸ್', 'ಸಾಜಿಷ್', 'ಪ್ಯಾರ್‌ ತೋ ಹೋನಾ ಹೀ ತಾ', 'ವಾಸ್ತವ್', 'ಹೇರಾ-ಪೇರಿ', 'ಜಂಗಲ್', 'ಆಶಿಕ್', 'ಮರ್ಡರ್' ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ 'ಬಿಗ್‌ ಬಾಸ್', 'ನಚ್‌ ಬಲಿಯೇ' 'ಸ್ಟೀಲ್ ಯುರ್ ಗರ್ಲ್‌ಫ್ರೆಂಡ್' ಸೇರಿದಂತೆ ಹಲವಾರು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Bollywood actress Kashmera Shah posted a bikini photo of her to shut trolls. Aankita Lokhande said want to have body like that.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X