"ಮತ್ತೆ ನಟಿಸ್ಬೇಕು ಅಂದಾಗ ನಿರ್ದೇಶಕನೊಬ್ಬ ಆತನೊಂದಿಗೆ ಮಲಗಲು ಕರೆದಿದ್ದ"; ನಟಿ ಕಸ್ತೂರಿ ಶಂಕರ್

By ಫಿಲ್ಮಿಬೀಟ್ ಡೆಸ್ಕ್

ಮೀಟೂ ಅಭಿಯಾನ ಅದ್ಯಾವಾಗ ಶುರುವಾಯ್ತೋ ಅಲ್ಲಿಂದ ಭಾರತದಲ್ಲೂ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಓಪನ್ ಆಗಿ ಮಾತಾಡಲು ಆರಂಭಿಸಿದ್ದಾರೆ. ಸಿನಿಮಾರಂಗದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಆಗುತ್ತಿರೋ ವಿಷಯ ಕೇಳಿ ಬರುತ್ತಿದ್ದರೂ, ಆ ಬಗ್ಗೆ ಓಪನ್ ಮಾತಾಡುವುದಕ್ಕೆ ಶುರು ಮಾಡಿದ್ದು ಮೀಟೂ ವೇಳೆನೇ..

ಅಲ್ಲಿಂದ ನಟಿಯರು ಸಿನಿಮಾರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಸಂದರ್ಶನಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದ ಮತ್ತೊಬ್ಬ ನಟಿ ಕೂಡ ಸಂದರ್ಶನವೊಂದರಲ್ಲಿ ನಿರ್ದೇಶಕನಿಂದ ಅನುಭವಿಸಿದ ಲೈಂಗಿಕ ಕಿರಕುಳದ ಬಗ್ಗೆ ಇತ್ತೀಚೆಗೆ ಓಪನ್ ಆಗಿ ಮಾತಾಡಿದ್ದಾರೆ.

Actress Kasturi Shanka says that she had bad casting couch experience in tamil and malayalam industry

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಕಸ್ತೂರಿ ಶಂಕರ್ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಸಂದರ್ಶನದಲ್ಲಿ ಮುಕ್ತವಾಗಿ ಮಾತಾಡಿದ್ದಾರೆ. ನಿರ್ದೇಶಕನೊಬ್ಬ ಆತನೊಂದು ಮಲಗುವಂತೆ ಕರೆದಿದ್ದ. ಈ ನಟಿ ನಿರಾಕರಿಸಿದ ಬಳಿಕ ಏನಾಯ್ತು ಅನ್ನೋನ್ನು ಸಂದರ್ಶದಲ್ಲಿ ರಿವೀಲ್ ಮಾಡಿದ್ದಾರೆ.

ಕಸ್ತೂರಿ ಶಂಕರ್ ಕನ್ನಡದಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕ್ರೇಜಿಸ್ಟಾರ್ ನಟಿ ರವಿಚಂದ್ರನ್ ನಟಿಸಿದ 'ಜಾಣ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ 'ಇಬ್ಬರ ನಡುವೆ ಮುದ್ದಿ ಆಟ', 'ತುತ್ತಾ ಮುತ್ತಾ', 'ಒನ್ ಮ್ಯಾನ್ ಆರ್ಮಿ', 'ಹಬ್ಬ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ನಟಿ ಕನ್ನಡದಲ್ಲಿ ನಟಿಸಿದ ಕೊನೆಯ ಸಿನಿಮಾ 'ಪ್ರೇಮಕ್ಕೆ ಸೈ'. 2001ರಲ್ಲಿ ತೆರೆಕಂಡಿತ್ತು.

ವಿವಾಹದ ಬಳಿಕ ಕಸ್ತೂರಿ ಶಂಕರ್ ಸಿನಿಮಾದಿಂದ ಕೆಲವು ವರ್ಷ ದೂರ ಉಳಿದಿದ್ದರು. ಸುಮಾರು ಏಳು ವರ್ಷಗಳ ಕಾಲ ಯಾವುದೇ ಭಾಷೆಯ ಸಿನಿಮಾದಲ್ಲಿ ನಟಿಸಿರಲಿಲ್ಲ. 2009ರ ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ್ದಾರೆ. ಸದ್ಯ ತೆಲುಗು ಕಿರುತೆರೆಯಲ್ಲಿ ಕಸ್ತೂರಿ ಶಂಕರ್‌ಗೆ ಬೇಡಿಕೆ ಹೆಚ್ಚಿದೆ. ಇದೀಗ 'ಇಂಟಿಂಟಿ ಗೃಹಲಕ್ಷ್ಮಿ' ಅನ್ನುವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

Actress Kasturi Shanka says that she had bad casting couch experience in tamil and malayalam industry

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕಸ್ತೂರಿ ಶಂಕರ್ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾರಂಗದಲ್ಲಿ ಪ್ರತಿಯೊಬ್ಬ ಮಹಿಳೆಯೂ ಒಂದಲ್ಲ ಒಂದು ರೀತಿ ಲೈಂಗಿಕ ಕುರುಕುಳದಂತಹ ಸಮಸ್ಯೆ ಎದುರಿಸಿರುತ್ತಾಳೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದರೊಂದಿಗೆ ತನಗೂ ಸಿನಿಮಾರಂಗದಲ್ಲಿ ಲೈಂಗಿಕ ಕಿರುಕುಳ ಆಗಿದ್ದು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಈ ಅನುಭವ ಆಗಿದೆ ಎಂದಿದ್ದಾರೆ.

ಈ ಸಂದರ್ಶನದಲ್ಲಿ ತನಗೂ ಲೈಂಗಿಕ ಕಿರುಕುಳ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಸಿನಿಮಾ ಬಿಟ್ಟು ಮತ್ತೆ ಚಿತ್ರರಂಗಕ್ಕೆ ಮರಳಬೇಕು ಅಂತ ನಿರ್ಧರಿಸಿದ್ದಾಗ, ನಿರ್ದೇಶಕರೊಬ್ಬರು ತನ್ನೊಂದಿಗೆ ಮಲಗಬೇಕು ಎಂದು ಹೇಳಿದ್ದರಂತೆ. ಕಸ್ತೂರಿ ಶಂಕರ್ ನಿರಾಕರಿಸಿದ್ದರಿಂದ ಆ ಸಿನಿಮಾದಿಂದಲೇ ಅವರನ್ನು ಕಿತ್ತೊಗೆಯಲಾಗಿತ್ತು. ಕಸ್ತೂರಿ ಶಂಕರ್ ಬಿಚ್ಚಿಟ್ಟ ಈ ಕರಾಳ ಅನುಭವ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

More from Filmibeat

English summary
South Actress Kasthuri Shankar about casting couch Tamil and Malayalam film industry:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X