twitter
    For Quick Alerts
    ALLOW NOTIFICATIONS  
    For Daily Alerts

    ಕಥಕ್ ನೃತ್ಯ ಪಾರಂಗತ ಬಿರ್ಜು ಮಹಾರಾಜ್ ನಿಧನ: ಬಾಲಿವುಡ್ಡಿಗರ ಸಂತಾಪ

    |

    'ವಿಶ್ವರೂಪಂ', 'ದಿಲ್‌ ತೋ ಪಾಗಲ್ ಹೇ', 'ದೇವ್‌ದಾಸ್' ಭಾಜಿರಾವ್ ಮಸ್ತಾನಿ' ಇನ್ನೂ ಹಲವು ಸಿನಿಮಾಗಳ ಐಕಾನಿಕ್ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದ ಕಥಕ್ ನೃತ್ಯ ಸಾಮ್ರಾಟ ಪಂಡಿತ್ ಬಿರ್ಜು ಮಹಾರಾಜ್ ಭಾನುವಾರ ದೆಹಲಿಯ ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

    ಬಿರ್ಜು ಮಹಾರಾಜ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದು ಈ ಖೇದಕರ ವಿಷಯವನ್ನು ಬಿರ್ಜು ಮಹಾರಾಜರ ಮೊಮ್ಮಗ ಸ್ವರಾಂಶ ಮಿಶ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಕಮಲ್ ಹಾಸನ್ ನಟಿಸಿದ್ದ 'ವಿಶ್ವರೂಂಪಂ' ಸಿನಿಮಾದ 'ಉನ್ನ ಕಾಣಾದೆ' ಹಾಡಿಗೆ ಮಾಡಿದ ಅದ್ಭುತ ನೃತ್ಯ ಸಂಯೋಜನೆಗೆ ಬಿರ್ಜು ಮಹಾರಾಜ್ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ. ಅದು ಮಾತ್ರವೇ ಅಲ್ಲದೆ ಎರಡನೇ ಅತ್ಯುತ್ತಮ ನಾಗರೀಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿ 1986ರಲ್ಲಿಯೇ ಅವರಿಗೆ ಸಂದಿದೆ.

    Kathak Dance Maestro Birju Maharaj Died Of Heart Attack In Delhi
    ಲಖನೌ ಕಲ್ಕ-ಬಿಂದಾದಿನ್ ಘರಾನಾ ಮಾದರಿಯ ಕಥಕ್ ನೃತ್ಯಗಾರರಾಗಿದ್ದ ಬಿರ್ಜು ಮಹಾರಾಜ್, ತಮ್ಮ 13 ನೇ ವಯಸ್ಸಿನಿಂದಲೇ ಕಥಕ್ ನೃತ್ಯ ಕಲಿಸಲು ಪ್ರಾರಂಭಿಸಿದ್ದರು. ಹಲವು ವರ್ಷಗಳ ನಂತರ ಸಂಗೀತ ನಾಟಕ ಅಕಾಡೆಮಿಯ ಮುಖ್ಯಸ್ಥರಾಗಿ ಕಾರ್ಯನಿರ್ಹಿವಿಸಿದರು. ನಂತರ ಅವರದ್ದೇ ಆದ 'ಕಲಾಶ್ರಮ' ಹೆಸರಿನ ನೃತ್ಯ ಶಾಲೆ ಪ್ರಾರಂಭಿಸಿದರು.

    'ದೇವ್‌ದಾಸ್' ಸಿನಿಮಾದ 'ಕಾಹೆ ಚೇಡೆ ಮೋಹೆ' ಹಾಡನ್ನು ಹಾಡಿರುವುದಲ್ಲದೆ ಹಾಡಿಗೆ ನೃತ್ಯ ಸಂಯೋಜನೆ ಸಹ ಮಾಡಿದ್ದಾರೆ. ಬಾಲಿವುಡ್‌ನ ಅತ್ಯುತ್ತಮ ಹಾಡುಗಳಲ್ಲಿ ಇದು ಸಹ ಒಂದು. ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರೊಟ್ಟಿಗೂ ಬಿರ್ಜು ಮಹಾರಾಜ್ ಕೆಲಸ ಮಾಡಿದ್ದಾರೆ. 'ಡೇಡ್ ಇಷ್ಕಿಯಾ', 'ದಿಲ್‌ ತೋ ಪಾಗಲ್ ಹೇ', ಭಾಜಿರಾವ್ ಮಸ್ತಾನಿ' ಇನ್ನೂ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಬಿರ್ಜು ಮಹಾರಾಜ್ ಕೆಲಸ ಮಾಡಿದ್ದಾರೆ.

    ಬಿರ್ಜು ಮಹಾರಾಜ್ ನಿಧನಕ್ಕೆ ಬಾಲಿವುಡ್‌ನ ಹಲವು ಖ್ಯಾತ ನಾಮರು ಸಂತಾಪ ವ್ಯಕ್ತಪಡಿಸಿದ್ದಾರೆ.

    English summary
    Kathank dance maestro Birju Maharaj died of heart attack in Delhi. He awarded Padma Vibhushana and many more awards for his excellency in Kathak dance form.
    Monday, January 17, 2022, 10:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X