For Quick Alerts
  ALLOW NOTIFICATIONS  
  For Daily Alerts

  ಮೊದಲು ಕತ್ರಿನಾ ಕಚ್ಚಿದಳು, ಈಗ ಹಾವು ಕಚ್ಚಿದೆ ನೆಟ್ಟಿಗರಿಂದ ಟ್ರೋಲ್ ಆದ ಸಲ್ಮಾನ್ ಖಾನ್

  |

  ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಹಾವು ಕಚ್ಚಿರುವ ಸುದ್ದಿ ಕಳೆದೆರಡು ದಿನಗಳಿಂದ ಚರ್ಚೆಯಲ್ಲಿದೆ. ಸಲ್ಮಾನ್ ತನ್ನ ಫಾರ್ಮ್ ಹೌಸ್‌ಗೆ ತೆರಳಿದ್ದಾಗ, ಅಲ್ಲಿ ಸಲ್ಮಾನ್ ಖಾನ್‌ಗೆ ಹಾವು ಕಚ್ಚಿತ್ತು. ಕೂಡಲೇ ಬಾಲಿವುಡ್‌ ನಟನನ್ನು ರಾತ್ರೋ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಬಾಲಿವುಡ್ ಸೂಪರ್‌ಸ್ಟಾರ್ ಅನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಆರೋಗ್ಯವಾಗಿದ್ದಾರೆಂದು ತಿಳಿದು ಬಂದಿದೆ.

  ಸಲ್ಮಾನ್ ಖಾನ್ ತನ್ನ ಹುಟ್ಟುಹಬ್ಬವನ್ನು ಆಚರಿಸುವ ಸಲವಾಗಿ ರಾಯ್‌ಘಡ್ ಫಾರ್ಮ್ ಹೌಸ್‌ಗೆ ತೆರಳಿಸಿದ್ದರು. ಈ ವೇಳೆ ಸಲ್ಮಾನ್ ಖಾನ್ ಬೆಡ್ ರೂಮ್‌ನಲ್ಲಿ ಸೇರಿಕೊಂಡಿದ್ದ ಹಾವು ಸಲ್ಮಾನ್ ಖಾನ್‌ಗೆ ಕಚ್ಚಿದೆ ಎಂದು ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ತಿಳಿಸಿದ್ದಾರೆ. ಆದರೆ, ಸಲ್ಮಾನ್‌ಗೆ ಹಾವು ಕಚ್ಚಿದ ಸಂಗತಿ ನೆಟ್ಟಿಗರಿಗೆ ದೊಡ್ಡ ಚರ್ಚೆಯ ವಿಷಯವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಅನ್ನು ನೆಟ್ಟಿಗರು ಟ್ರೋಲ್ ಮೇಲೆ ಟ್ರೋಲ್ ಮಾಡಿದ್ದಾರೆ. ಈ ಟ್ರೋಲ್‌ಗಳನ್ನು ನೋಡಿವುದಕ್ಕೂ ಮುನ್ನ ಹಾವು ಹಚ್ಚಿದ ಬಗ್ಗೆ ಸಲ್ಮಾನ್ ಖಾನ್ ಪ್ರತಿಕ್ರಿಯೆ ಅನ್ನುವುದನ್ನು ತಿಳಿಯಲು ಮುಂದೆ ಓದಿ.

  ಸಲ್ಮಾನ್ ಖಾನ್‌ಗೆ 3 ಬಾರಿ ಹಾವು ಕಚ್ಚಿತ್ತು

  ಸಲ್ಮಾನ್ ಖಾನ್‌ಗೆ 3 ಬಾರಿ ಹಾವು ಕಚ್ಚಿತ್ತು

  ಸಲ್ಮಾನ್ ಖಾನ್ ಡಿಸೆಂಬರ್ 27ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಭಾನುವಾರ( ಡಿಸೆಂಬರ್ 26) ಬೆಳಗ್ಗೆ ತನ್ನ ಫಾರ್ಮ್ ಹೌಸ್‌ಗೆ ತೆರಳಿದ್ದರು. ಈ ವೇಳೆ ಹಾವು ಫಾರ್ಮ್ ಹೌಸ್ ಒಳಗೆ ಬಂದಿದೆ. ಆಗ ಕೋಲಿನ ಮೂಲಕ ಹಾವನ್ನು ಹೊರಗೆ ತೆಗೆದುಕೊಂಡು ಬಂದಿದ್ದಾರೆ. ಆಗ ಅದು ಸಲ್ಮಾನ್ ಖಾನ್ ಕೈವರೆಗೂ ಬಂದಿತ್ತು. ಈ ವೇಳೆ ತನಗೆ ಮೂರು ಬಾರಿ ಹಾವು ಕಚ್ಚಿತ್ತು. ಇದು ವಿಷಪೂರಿತ ಹಾವು. ಹೀಗಾಗಿ 6 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಈಗ ನಾನು ಆರೋಗ್ಯವಾಗಿದ್ದೇನೆ ಎಂದು ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

  ಮೊದಲು ಕತ್ರಿನಾ, ಈಗ ಹಾವು ಕಚ್ಚಿದೆ

  ಮೊದಲು ಕತ್ರಿನಾ, ಈಗ ಹಾವು ಕಚ್ಚಿದೆ

  ಸಲ್ಮಾನ್ ಖಾನ್‌ಗೆ ಹಾವು ಕಚ್ಚಿದ ಸುದ್ದಿ ಕೇಳಿ ಅವರ ಅಭಿಮಾನಿಗಳು ಹಾಗೂ ಕುಟುಂಬ ಆತಂಕಕ್ಕೆ ಒಳಗಾಗಿದ್ದರು. ತಮ್ಮ ನೆಚ್ಚಿನ ನಟನಿಗೆ ಏನಾಗಿದೆ? ಆರೋಗ್ಯ ಈಗ ಹೇಗಿದೆ ಎಂಬ ಚಿಂತೆಯಲ್ಲಿದ್ದರು. ಆದೇ ಇನ್ನೊಂದು ಕಡೆ ಸಲ್ಮಾನ್ ಖಾನ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಟ್ರೋಲ್ ಮಾಡಲು ಆರಂಭಿಸಿದ್ದರು. ಅದರಲ್ಲಿ ಒಂದು ಕತ್ರಿನಾ ಕಚ್ಚಿದ ಟ್ರೋಲ್. ನೆಟ್ಟಿಗನೊಬ್ಬ "ಮೊದಲು ಸಲ್ಮಾನ್ ಖಾನ್‌ಗೆ ಕತ್ರಿನಾ ಕೈಫ್ ಕಚ್ಚಿದಳು. ಈಗ ಪಾಪ ಹಾವು ಕಚ್ಚಿದೆ." ಎಂದು ವ್ಯಕ್ತಿಯೊಬ್ಬ ಟ್ರೋಲ್ ಮಾಡಿದ್ದಾನೆ. ಇದು ಸೋಶಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಟ್ರೋಲ್ ಆಗಿದೆ. ಕತ್ರಿನಾ ಕೈಫ್ ನಟ ವಿಕ್ಕಿ ಕೌಶಲ್‌ರನ್ನು ಇತ್ತೀಚೆಗೆ ವಿವಾಹವಾಗಿದ್ದರು. ಕತ್ರಿನಾ ಹಾಗೂ ಸಲ್ಮಾನ್ ಖಾನ್‌ ಇಬ್ಬರೂ ಡೇಟಿಂಗ್ ಮಾಡುತ್ತಿದ್ದದ್ದು ಕೆಲವು ದಿನ ಸುದ್ದಿಯಲ್ಲಿತ್ತು. ಹೀಗಾಗಿ ಮೊದಲು ಕತ್ರಿನಾ, ಈಗ ಹಾವು ಕಚ್ಚಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

  ಪೊಲೀಸರಿಂದ ಸಲ್ಮಾನ್‌ಗೆ ಕಚ್ಚಿದ ಹಾವು ಬಂಧನ

  ಪೊಲೀಸರಿಂದ ಸಲ್ಮಾನ್‌ಗೆ ಕಚ್ಚಿದ ಹಾವು ಬಂಧನ

  ಸಲ್ಮಾನ್ ಖಾನ್ ಹಾವಿನಿಂದ ಕಚ್ಚಿಸಿಕೊಂಡ ಬಳಿಕ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೆರೈಟಿ ವೆರೈಟಿ ಟ್ರೋಲ್‌ಗಳಾಗುತ್ತಿವೆ. ಇದರಲ್ಲಿ ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಕೇಸ್ ಅನ್ನೂ ಸೇರಿಸಿಕೊಂಡು ಟ್ರೋಲ್ ಮಾಡಿದ್ದಾರೆ. " ಸಲ್ಮಾನ್ ಖಾನ್‌ಗೆ ಕಚ್ಚಿ ಓಡಿ ಹೋದ ಹಾವನ್ನು ಈಗ ಪೊಲೀಸರು ಬಂಧಿಸಲಿದ್ದಾರೆ." ಎಂದು ಟ್ರೋಲ್ ಮಾಡುತ್ತಿದ್ದಾರೆ.

  ಜನರಿಗೆ ಹಾವಿನ ಬಗ್ಗೆನೇ ಚಿಂತೆ

  ಜನರಿಗೆ ಹಾವಿನ ಬಗ್ಗೆನೇ ಚಿಂತೆ

  ಕೆಲವು ಟ್ರೋಲ್‌ಗಳಂತೂ ಜನರಿಗೆ ನಗುತರಿಸಿವೆ. " ನ್ಯೂಸ್ ಹೆಡ್‌ಲೈನ್: ಹಾವು ಕಚ್ಚಿದ ಬಳಿಕ ಪ್ರಾಣಾಪಾಯದಿಂದ ಪಾರಾದ ಸಲ್ಮಾನ್ ಖಾನ್. ಆದರೆ, ಹೆಡ್‌ಲೈನ್ ಹೀಗಿರಬೇಕಿತ್ತು. ಜನರಿಗೆ ಸಲ್ಮಾನ್ ಖಾನ್‌ಗಿಂತ ಹಾವಿನ ಬಗ್ಗೆನೇ ಚಿಂತೆ" ಎಂದು ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರು ಸಲ್ಮಾನ್‌ಗೆ ಕಚ್ಚಿದ ಹಾವು ಬದುಕುಳಿದಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಹೀಗೆ ಕಳೆದೆರಡು ದಿನಗಳಿಂದ ಸಲ್ಮಾನ್ ಖಾನ್ ಮೇಲೆ ಟ್ರೋಲ್ ಮೇಲೆ ಟ್ರೋಲ್ ಮಾಡಲಾಗಿದೆ.

  English summary
  Katrina kaif and salman khan trolled after bitten by snake in his farmhouse. Now the snake bite has given some netizens a reason to troll Salman.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X