For Quick Alerts
  ALLOW NOTIFICATIONS  
  For Daily Alerts

  ವಿಜಯ್ ಸೇತುಪತಿಗೆ ಜೋಡಿ ಆದ ಕತ್ರೀನಾ ಕೈಫ್! ಬಾಲಿವುಡ್ ಚಿತ್ರದಲ್ಲಿ ವಿಜಯ್-ಕತ್ರೀನಾ ಮಾಡ್ತಾರ ಮೋಡಿ

  |

  ಸಿನಿಮಾ ರಂಗಕ್ಕೆ ಯಾವುದೇ ಮಿತಿಗಳು ಇಲ್ಲ. ಕಲಾವಿದರಿಗೆ ಯಾವುದೇ ನಿರ್ಭಂಧಗಳು ಇರೋದಿಲ್ಲ. ಯಾವುದೇ ಭಾಷೆಯ ಕಲಾವಿದರು, ಬೇರೆ ಬೇರೆ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡು ಕಮಾಲ್ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಪದ್ದತಿ ಕೊಂಚ ಹೆಚ್ಚಾಗಿದ್ದು, ಇದೀಗ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಕೂಡ ಇಂತದ್ದೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

  ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಹೆಸರುವಾಸಿ ಆಗಿರುವ ನಟ ವಿಜಯ್ ಸೇತುಪತಿ ತನ್ನ ನಟನೆ, ರಗಡ್ ಲುಕ್ಕಿನಿಂದಲೇ ಎಲ್ಲರ ನೆಚ್ಚಿನ ನಟರಾಗಿ ಗುರುತಿಸಿಕೊಂಡಿದ್ದಾರೆ. ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ವಿಭಿನ್ನ ಬಗೆಯ ಸಿನಿಮಾಗಳಲ್ಲಿ ನಟಿಸುತ್ತ ಗಮನ ಸೆಳೆದಿರುವ ವಿಜಯ್ ಸೇತುಪತಿ ಇದೀಗ ಬಾಲಿವುಡ್‌ಗೆ ಪ್ರವೇಶ ಪಡೆದಿದ್ದು, ಅವರ ಅಭಿನಯದ ಸಿನಿಮಾ ಕೂಡ ಇದೀಗ ಅನೌನ್ಸ್ ಆಗಿದೆ.

  ಚಿತ್ರತಂಡದ ವಿಶೇಷತೆ, ಸಿನಿಮಾದ ಟೈಟಲ್ ಕೂಡ ಕ್ರಿಸ್‌ಮಸ್ ಸಂಭ್ರಮದಲ್ಲಿ ಅನೌನ್ಸ್ ಆಗಿದ್ದು, ಚಿತ್ರತಂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ನಟ ವಿಜಯ್ ಸೇತುಪತಿ ಕೂಡ ಈ ಬಗ್ಗೆ ಕುತೂಹಲ ಭರಿತರಾಗಿದ್ದು, ಸಿನಿಮಾದ ನಾಯಕಿ ಯಾರು ಅನ್ನೋದು ಕೂಡ ಈಗ ರಿವೀಲ್ ಮಾಡಿದೆ ವಿತ್ರತಂಡ. ಈ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಮುಂದೆ ಓದಿ...

  ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿ ಬರಲಿದೆ ಸಿನಿಮಾ

  ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿ ಬರಲಿದೆ ಸಿನಿಮಾ

  ವಿಜಯ್ ಸೇತುಪತಿ ಬಾಲಿವುಡ್‌ಗೆ ಪ್ರವೇಶ ಪಡೆದ ಸುದ್ದಿ ಈ ಹಿಂದೆಯೇ ತಿಳಿದು ಬಂದಿತ್ತು. ಆಗ ಅಭಿಮಾನಿಗಳು ವಿಜಯ್ ಸೇತುಪತಿಯವರ ಸಿನಿಮಾ ಯಾವುದಿರಬಹುದು? ಟೈಟಲ್ ಏನು? ತಾರಾಬಳಗದಲ್ಲಿ ಯಾರು ಇರಬಹುದು ಎಂಬ ಬಗ್ಗೆ ಎಲ್ಲಾ ತಲೆ ಕೆಡಿಸಿಕೊಂಡಿದ್ದರು. ಇದೀಗ ಸಿನಿಮಾದ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ಚಿತ್ರತಂಡ ನೀಡಿದ್ದು, ಚಿತ್ರಕ್ಕೆ 'ಮೆರ್ರಿ ಕ್ರಿಸ್‌ಮಸ್' ಎಂದು ಹೆಸರಿಡಲಾಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶೂಟಿಂಗ್‌ ಕೂಡ ಈಗಾಗಲೇ ಆರಂಭವಾಗಿದೆ.

  ಮೊದಲ ಬಾರಿಗೆ ಒಂದಾಗುತ್ತಿದೆ ಈ ಜೋಡಿ.

  ಮೊದಲ ಬಾರಿಗೆ ಒಂದಾಗುತ್ತಿದೆ ಈ ಜೋಡಿ.

  'ಮೆರ್ರಿ ಕ್ರಿಸ್‌ಮಸ್' ಸಿನಿಮಾದಲ್ಲಿ ವಿಜಯ್ ಸೇತುಪತಿಗೆ ಬಾಲಿವುಡ್‌ನ ಖ್ಯಾತ ನಟಿ ಕತ್ರೀನಾ ಕೈಫ್ ಜೋಡಿಯಾಗಿ ಅಭಿನಯಿಸಲಿದ್ದಾರೆ. ಈ ವಿಚಾರವನ್ನು ಸ್ವತಃ ಕತ್ರಿನಾ ಕೈಫ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಜಯ್ ಸೇತುಪತಿ ಮತ್ತು ಈಡಿ ಚಿತ್ರತಂಡದ ಫೋಟೊವನ್ನು ಕತ್ರೀನಾ ಕೈಫ್ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕತ್ರೀನಾ ಕೈಫ್ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅಭಿಮಾನಿಗಳಿಗೆ ಕತ್ರಿನಾ ಲುಕ್ ಹಿಡಿಸಲಿದೆಯಂತೆ. ಹಾಗೇ ಮದುವೆ ನಂತರ ಕತ್ರೀನಾ ಸಿನಿಮಾ ಬಗ್ಗೆ ಅಭಿಮಾನಿಗಳು ಕುತೂಹಲಭರಿತರಾಗಿದ್ದರು. ಇದೀಗ ಕತ್ರೀನಾ ಕೈಫ್ ಸಿನಿಮಾದ ಬಗ್ಗೆ ಸುದ್ದಿ ತಿಳಿದು ಖುಷಿಯಾಗಿದ್ದಾರೆ.

  ಶೂಟಿಂಗ್ ಪ್ರಾರಂಭಿಸಿದ ಚಿತ್ರತಂಡ !

  ಶೂಟಿಂಗ್ ಪ್ರಾರಂಭಿಸಿದ ಚಿತ್ರತಂಡ !

  'ಮೆರ್ರಿ ಕ್ರಿಸ್‌ಮಸ್' ಚಿತ್ರ ಈಗಾಗಲೇ ಶೂಟಿಂಗ್ ಆರಂಭಿಸಿದೆ. ಈ ಹಿಂದೆಯೇ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಕ್ರಿಸ್‌ಮಸ್‌ಗೆ ಚಿತ್ರದ ಟೈಟಲ್‌ಅನ್ನು ತಂಡ ರಿವೀಲ್ ಮಾಡಿದೆ. ಈ ಹಿಂದೆ ಸಿನಿಮಾ ಶೂಟಿಂಗ್‌ನ ಒಂದಷ್ಟು ಫೊಟೋಗಳು ಲೀಕ್ ಆಗಿದ್ದವು, ಆದರೆ ಅದು ಯಾವ ಸಿನಿಮಾ ಎಂಬ ಬಗ್ಗೆ ಜನರಿಗೆ ಮಾಹಿತಿ ಇರಲಿಲ್ಲ. ಇದೀಗ ಈ ಸಿನಿಮಾ ಬಗ್ಗೆ ಸಂಪೂರ್ಣ ಮಾಹಿತಿ ಹೊರ ಬಂದಿದ್ದು, 2022ಕ್ಕೆ ಸಿನಿಮಾ ರಿಲೀಸ್ ಮಾಡುವ ಬಗ್ಗೆ ಚಿತ್ರತಂಡ ಚಿಂತಿಸಿದೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದು, ಒಂದೊಳ್ಳೆ ದಿನಾಂಕ ನಿಗದಿ ಮಾಡಿ ಚಿತ್ರ ರಿಲೀಸ್ ಮಾಡುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

  ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ವಿಜಯ್-ಕತ್ರೀನಾ!

  ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ವಿಜಯ್-ಕತ್ರೀನಾ!

  ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ಕತ್ರೀನಾ ಕೈಫ್ ಇಬ್ಬರು ಜೋಡಿಯಾಗಿ ಅಭಿನಯಿಸುತ್ತಿದ್ದು, ಅಂಧಾದುನ್, ಬದ್ಲಾಪುರ್ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಶ್ರೀರಾಮ್ ರಾಘವನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ ಸಿನಿಮಾದ ಮೇಲೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಇನ್ನು ವಿಜಯ್ ಸೇತುಪತಿ ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ನಟಿ ಕತ್ರೀನಾ ಕೈಫ್ ಟೈಗರ್ 3 ಮತ್ತು ಜೀ ಲೇ ಜರಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ 'ಮೆರ್ರಿ ಕ್ರಿಸ್‌ಮಸ್' ಸಿನಿಮಾದ ಬಗ್ಗೆಯೂ ನಿರೀಕ್ಷೆ ಹೆಚ್ಚಾಗಿದ್ದು, ಫ್ಯಾನ್ಸ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

  English summary
  Katrina Kaif and Vijay Sethupathi starring Sriram Raghavan directorial Merry Christmas announced.
  Monday, December 27, 2021, 11:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X