ಐಶ್ವರ್ಯಾ ರೈ ಅವರನ್ನು ಹಿಂದಿಕ್ಕಲು ಕತ್ರಿನಾ ಕಸರತ್ತು!
ಸೆಕ್ಸಿ ತಾರೆಯಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾದ, ಶೃಂಗಾರ ನಾಯಕಿಯಾಗಿ ಪ್ರಶಸ್ತಿ ಪಡೆದ ಹಾಟ್ ಬೆಡಗಿ ಕತ್ರಿನಾ ಕೈಫ್ ಸದ್ಯಕ್ಕೆ 'ಧೂಮ್ 3' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮತ್ತಷ್ಟು ಸೆಕ್ಸಿಯಾಗಿ ಕಾಣಿಸಿಕೊಳ್ಳಲು ಕಸರತ್ತು ಮಾಡುತ್ತಿದ್ದಾರೆ ಕತ್ರಿನಾ.
'ಧೂಮ್ 2' ಚಿತ್ರದಲ್ಲಿ ಐಶ್ವರ್ಯಾ ರೈ ತೆಳ್ಳಗೆ, ಸೆಕ್ಸಿಯಾಗಿ ಬಳುಕುವ ಬಳ್ಳಿಯಂತೆ ಕಾಣಿಸಿಕೊಂಡು ಎಲ್ಲರ ಹೃದಯ ಕದ್ದಿದ್ದರು. ಈಗ ಐಶ್ವರ್ಯಾ ಅವರ ಅಂದಚೆಂದಗಳನ್ನು ಹಿಂದಿಕ್ಕಲು ಕತ್ರಿನಾ ಕಂಕಣ ಕಟ್ಟಿದ್ದಾರೆ.
ಪ್ರತಿದಿನ ಬೆವರಿಳಿಸುವಂತೆ ಕಸರತ್ತು ಮಾಡಿ 5 ಕೆಜಿ ತೂಕ ಇಳಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ತಮ್ಮ 'ಧೂಮ್ 3' ಚಿತ್ರದ ಬಗ್ಗೆ ಕತ್ರಿನಾ ಮಾತನಾಡುತ್ತಾ, "ಈ ಚಿತ್ರದ ಬಗ್ಗೆ ಪ್ರೇಕ್ಷಕರು ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಫಿಟ್ ಅಂಡ್ ಪರ್ಫೆಕ್ಟ್ ಆಗಿ ಕಾಣಲು ತುಂಬಾ ಕಷ್ಟಪಡುತ್ತಿದ್ದೇನೆ..."
"ಪ್ರತಿನಿತ್ಯ ಒಂದೂವರೆ ಗಂಟೆ ಕಾಲ ವ್ಯಾಯಾಮ ಮಾಡುತ್ತಿದ್ದೇನೆ. ಡಯಟ್ ವಿಷಯದಲ್ಲೂ ಸಾಕಷ್ಟು ಮುಂಜಾಗ್ರತೆಗಳನ್ನು ಪಾಲಿಸುತ್ತಿದ್ದೇನೆ. ಮಸಾಲಾ ತಿಂಡಿ ತಿನಿಸುಗಳನ್ನು ಬಿಟ್ಟಿದ್ದೇನೆ. ತುಂಬಾ ಇಷ್ಟಪಡುತ್ತಿದ್ದ ಚಾಕೋಲೇಟ್ ಗಳು, ಐಸ್ ಕ್ರೀಮ್ ಗಳಿಂದಲೂ ದೂರವಾಗಿದ್ದೇನೆ".
"ಈಗ ಏನಿದ್ದರೂ ಸಲಾಡ್ಸ್, ಸಮುದ್ರ ಆಹಾರವನ್ನು ಹೆಚ್ಚಾಗಿ ಸ್ವೀಕರಿಸುತ್ತಿದ್ದೇನೆ" ಎನ್ನುತ್ತಿದ್ದಾರೆ. ಈ ಹಿಂದೆ 'ಧೂಮ್' ಹಾಗೂ 'ಧೂಮ್ 2' ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ತಮ್ಮ ದೇಹವನ್ನು ಬಿಕಿನಿಗೆ ಹೊಂದುವಂತೆ ಕಸರತ್ತು ಮಾಡುತ್ತಿದ್ದು ಅಮೀರ್ ಖಾನ್ ಜೊತೆ ರೊಮಾನ್ಸ್ ಮಾಡಲು ಅಣಿಯಾಗಿದ್ದಾರೆ ಕತ್ರಿನಾ. (ಏಜೆನ್ಸೀಸ್)


Click it and Unblock the Notifications











