»   » ಅಷ್ಟಕ್ಕೂ ಡಿಪ್ಪಿ ಮೇಲೆ ಕತ್ರಿನಾ ಕಿಡಿ ಕಾರುತ್ತಿರುವುದೇಕೆ?

ಅಷ್ಟಕ್ಕೂ ಡಿಪ್ಪಿ ಮೇಲೆ ಕತ್ರಿನಾ ಕಿಡಿ ಕಾರುತ್ತಿರುವುದೇಕೆ?

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಬಿಟೌನ್ ನ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಅವರು ಒಂದಾಗಿ ಕಾಣಿಸಿಕೊಂಡಿದ್ದ 'ತಮಾಷ' ಸಿನಿಮಾ ಬಾಕ್ಸಾಫೀಸ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.

ಬಾಕ್ಸಾಫೀಸ್ ನಲ್ಲಿ ಸಿನಿಮಾ ಹಿಟ್ ಆಗಿದ್ದೇನೋ ನಿಜ ಆದರೆ ಗುಳಿಕೆನ್ನೆ ಬೆಡಗಿ ಡಿಪ್ಪಿ ಅವರು ಮಾತ್ರ ಕತ್ರೀನಾ ಕೈಫ್ ಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.[ನಾನು ಹಾಕಿಕೊಂಡಿರುವ ಟ್ಯಾಟೂ ಬಗ್ಗೆ ಇಡೀ ದೇಶಕ್ಕೆ ಗೊತ್ತಾಗಬೇಕೆ? ]

Katrina Kaif getting Insecure of Ranbir Kapoor-Deepika Padukone's Intimacy

ಅಂದಹಾಗೆ ಕ್ಯಾಟ್ ಗೆ ಡಿಪ್ಪಿ ಮೇಲೆ ಭಾರಿ ಕೋಪ ಬಂದಿದೆಯಂತೆ, ಯಾಕಂತೀರಾ?, ಯಾಕೆಂದರೆ ಒಂದಾನೊಂದು ಕಾಲದಲ್ಲಿ ರಣಬೀರ್ ಮತ್ತು ದೀಪಿಕಾ ಪಡುಕೋಣೆ ಅವರು ಲವ್ವು ಗಿವ್ವು ಅಂತ ಓಡಾಡಿಕೊಂಡಿದ್ದು ಎಲ್ಲರಿಗೂ ಗೊತ್ತೀರೋ ವಿಚಾರವೇ ತಾನೆ.

ಇದೀಗ ಮತ್ತೆ ಇವರಿಬ್ಬರು ಹೀಗೆ ತೆರೆಯ ಮೇಲೆ ಕಿಸ್ಸಿಂಗ್, ಡ್ಯುಯೆಟ್, ರೋಮ್ಯಾನ್ಸ್ ಅಂತ ಮಾಡುತ್ತಿದ್ದರೆ ಕ್ಯಾಟ್ ಗೆ ಕೋಪ ಬರಬೇಕೋ ಬೇಡ್ವೋ. ಬಂದೇ ಬರುತ್ತೆ ಅಲ್ವಾ.[ರಣವೀರ್-ದೀಪಿಕಾ ನಡುವೆ ಏನಿಲ್ಲ, ಏನೇನಿಲ್ಲ!]

Katrina Kaif getting Insecure of Ranbir Kapoor-Deepika Padukone's Intimacy

ಈ ವಿಚಾರವಾಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಕತ್ರಿನಾ ಕೈಫ್, ನಟಿ ದೀಪಿಕಾ ಪಡುಕೋಣೆ ಮತ್ತು ತಮ್ಮ ಪ್ರಿಯತಮ ರಣಬೀರ್ ಕಪೂರ್ ಅನ್ನು ಒಟ್ಟಿಗೆ ನೋಡಿ ಸಖತ್ ಉರಿದು ಬಿದ್ದಿದ್ದಾರೆ.

ಅದೇನೇ ಇರಲಿ ಒಟ್ನಲ್ಲಿ ತನ್ನ ಪ್ರಿಯತಮನನ್ನು ಕಸಿದುಕೊಂಡ ಡಿಪ್ಪಿ ಮೇಲೆ ಕ್ಯಾಟ್ ಉರಿದು ಬೀಳೋದು ನ್ಯಾಯ ಸಮ್ಮತ ಆಗಿದೆ ಅಲ್ವಾ.

English summary
Rumours are rift that Bollywood star Katrina Kaif who is dating Ranbir Kapoor, , seems to be upset about his intimacy with Deepika Padukone in ‘Tamasha’. It’s also being said that Katrina is having sleepless nights constantly thinking of Ranbir and Deepika’s insane chemistry on screen, and how much everyone keeps talking about it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada