For Quick Alerts
  ALLOW NOTIFICATIONS  
  For Daily Alerts

  ಸೋನಂ ಕಪೂರ್ ಡ್ರೆಸ್ ಮೇಲೆ ಕತ್ರೀನಾ ಕಣ್ಣು

  By Harshitha
  |

  ಹಿಟ್ ಮೇಲೆ ಹಿಟ್ ಕೊಟ್ಟು 'ಝರ ಝರ ಟಚ್ ಮೀ' ಅಂತ ಪಡ್ಡೆ ಹುಡುಗರಿಗೆ ಹುಚ್ಚು ಹಿಡಿಸಿದ ಬಾಲಿವುಡ್ ಬೆಳ್ಳಿ ಬೊಂಬೆ ನಟಿ ಕತ್ರೀನಾ ಕೈಫ್. ಇಂತಿಪ್ಪ ಶ್ವೇತ ಸುಂದರಿಗೆ ಬಟ್ಟೆ ಕೊರತೆ ಇದ್ಯಾ?

  ಮೊನ್ನೆಯಷ್ಟೇ ಕ್ಯಾಟ್ ಆಡಿರುವ ಮಾತುಗಳನ್ನ ಕೇಳಿದರೆ ಇಂತಹ ಅನುಮಾನ ಮೂಡುವುದು ಸಹಜ. ''ನನಗೆ ಸೂಕ್ತವಾದ ಉಡುಪು ಸಿಗದೆ ಹೋದರೆ, ಸೋನಂ ಕಪೂರ್ ಬಟ್ಟೆಯನ್ನೇ ಧರಿಸುವೆ!.'' ಹೀಗಂತ ಹೇಳಿರುವುದು ಖುದ್ದು ಕತ್ರೀನಾ ಕೈಫ್.

  ''ಮೇ 13 ರಂದು 68ನೇ ಕ್ಯಾನೆ ಚಲನಚಿತ್ರೋತ್ಸವಕ್ಕೆ ಚಾಲನೆ ಸಿಗಲಿದೆ. ಚಿತ್ರೋತ್ಸವದಲ್ಲಿ ಭಾಗಿಯಾಗುತ್ತಿರುವ ಕತ್ರೀನಾ ರೆಡ್ ಕಾರ್ಪೆಟ್ ವಾಕ್ ಗಾಗಿ ಯಾವ ಉಡುಪು ಧರಿಸುತ್ತಾರೆ ಅನ್ನುವ ಕುತೂಹಲ ಅವರ ಅಭಿಮಾನಿಗಳಿಗೆ ಸಹಜವಾಗೇ ಇರುತ್ತದೆ.

  ಇತ್ರೀಚಗಷ್ಟೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ''ನನ್ನ ಲುಕ್ ಬಗ್ಗೆ ನಾನು ನಿರ್ಧರಿಸಿಲ್ಲ. ಇನ್ನೂ ಯಾವುದೇ ಪ್ಲಾನ್ ನಡೆದಿಲ್ಲ. ನನಗೆ ಸೂಕ್ತ ಉಡುಪು ಸಿಗ್ಲಿಲ್ಲ ಅಂದ್ರೆ, ಸೋನಂ ಕಪೂರ್ ಉಡುಪ್ಪನ್ನೇ ಧರಿಸುವೆ'' ಅಂತ ಕತ್ರೀನಾ ಕೈಫ್ ಹೇಳಿದ್ದಾರೆ.

  ಹಾಗ್ನೋಡಿದ್ರೆ, ಸೋನಂ ಕಪೂರ್ ಸ್ಟೈಲಿಂಗ್ ಗೆ ಕತ್ರೀನಾ ಕ್ಲೀನ್ ಬೌಲ್ಡ್ ಆಗಿ ತುಂಬಾ ದಿನಗಳಾಗಿವೆ. ಡಿನ್ನರ್ ಗಂತ ಹೊಟೇಲ್ ಗೆ ಹೋದರೂ ಸ್ಟೈಲ್ ಮೇನ್ಟೇನ್ ಮಾಡುವ ಸೋನಂ ಬಗ್ಗೆ ಕ್ಯಾಟ್ ಗೆ ಹೆಮ್ಮೆ ಇದೆ. [ನಟಿ ಸೋನಂ ಕಪೂರ್ 'ಕ್ಲಾಸ್ ಲೆಸ್' ಅಂದಿದ್ದು ಯಾರಿಗೆ?]

  ಕ್ಯಾನೆ ಚಿತ್ರೋತ್ಸವದಲ್ಲಿ ಸೋನಂ ಕಪೂರ್ ಕೂಡ ಭಾಗಿಯಾಗುತ್ತಿರುವ ಕಾರಣ ಉಡುಪುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಅನ್ನೋದು ಕ್ಯಾಟ್ ಮಾತಿನ ಅರ್ಥ. ಆದರೂ, ಕ್ಯಾಟ್ ಅಂತ ಸುರಸುಂದರಾಂಗಿಗೆ ಏನು ಕಮ್ಮಿ ಅನ್ನೋದು ಅಭಿಮಾನಿಗಳ ಪ್ರಶ್ನೆ. (ಏಜೆನ್ಸೀಸ್)

  English summary
  Bollywood Actress Katrina Kaif had made a statement on her styling in Cannes Film Festival. The Actress said, ''If I don't find appropriate dress for Cannes, I'll just borrow a dress from Sonam Kapoor''.
  Sunday, April 26, 2015, 17:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X