ತಾಯಿಯಾದ ನಂತರ ಕಂಬ್ಯಾಕ್‌ಗೆ ರೆಡಿಯಾದ ಕತ್ರಿನಾ ಕೈಫ್ ; 2ವರ್ಷದ ಬ್ರೇಕ್ ನಂತರ ಶುರು ಕ್ಯಾಟ್ ಹೊಸ ಅಧ್ಯಾಯ

ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು ಕೂಡ ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ.

ಇನ್ನು, ಬಣ್ಣದ ಲೋಕ ಕೂಡ ಅಷ್ಟೇ. ಮದುವೆಯಾದರೆ ನಾಯಕಿಯರಿಗೆ ಕೊಡುವ ಗೌರವವೇ ಬೇರೆ. ಅದರಲ್ಲಿಯೂ ಮಕ್ಕಳಾದರೆ ಮುಗೀತು ಅವಕಾಶಗಳ ಬಾಗಿಲು ಸಂಪೂರ್ಣ ಮುಚ್ಚಿ ಹೋದಂತೆಯೇ. ಚಿತ್ರರಂಗ ಸಂಪೂರ್ಣವಾಗಿ ಮರೆತೇ ಹೋಗುತ್ತೆ.

Katrina Kaif Lines Up Massive 2027 OTT Debut for Her Post-Maternity Comeback

ಇದಕ್ಕೆ ಕೈಗನ್ನಡಿ ಎಂಬಂತೆ ಭಾಗ್ಯಶ್ರೀಯಿಂದ ಹಿಡಿದು ಟ್ವಿಂಕಲ್ ಖನ್ನಾವರೆಗೆ.. ಆಯೇಶ್ ಟಾಕೀಯಾ ಅವರಿಂದ ಹಿಡಿದು ಆಸಿನ್‌ವರೆಗೆ.. ಹಲವಾರು ನಾಯಕಿಯರು ಮದುವೆಯಾದ ನಂತರ ಕಣ್ಮರೆಯಾದ ಉದಾಹರಣೆಗಳಿವೆ.

ಹಾಗಂಥ, ಎಲ್ಲರೂ ಈ ಸಾಲಿಗೆ ಸೇರಲ್ಲ. ಬದಲಿಗೆ ಕೆಲವರು ಒಂದು ಗ್ಯಾಪ್‌ನ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿ ಬರುವ ಪ್ರಯತ್ನ ಮಾಡುತ್ತಾರೆ. ಇದಕ್ಕೆ ದೀಪಿಕಾ ಪಡುಕೋಣೆ ಸೇರಿ ಹಲವು ಉದಾಹರಣೆಗಳು ಕೂಡ ಇವೆ. ಈ ಸಾಲಿನಲ್ಲಿ ಈಗ ಕತ್ರಿನಾ ಕೈಫ್ ಕೂಡ ಸೇರಿಕೊಳ್ಳುತ್ತಿದ್ಧಾರೆ ಎನ್ನುವುದೇ ಸದ್ಯದ ಫ್ಲ್ಯಾಶ್ ನ್ಯೂಸ್.

ಹೌದು, ಕೇವಲ ಗ್ಲ್ಯಾಮರ್ ಮಾತ್ರ ಅಲ್ಲ ಅಭಿನಯದ ಗ್ರಾಮರ್ ಕೂಡ ಗೊತ್ತಿರಬೇಕು ಅನ್ನುವುದನ್ನೂ ಸಾಬೀತು ಮಾಡಿದವರು ಕತ್ರಿನಾ ಕೈಫ್. 1983ರಲ್ಲಿ ಅದೆಲ್ಲೋ ಹಾಂಗ್ ಕಾಂಗ್‌ನಲ್ಲಿ ಜನ್ಮ ಪಡೆದು, ಬಾಲಿವುಡ್‌ನಲ್ಲಿ ಹೆಸರು ಮಾಡಿದ ಕತ್ರಿನಾ ಕೈಫ್ ಅಸಂಖ್ಯಾತ ಅಭಿಮಾನಿಗಳನ್ನು ಕೂಡ ಸಂಪಾದಿಸಿದ್ಧಾರೆ. ಭಾರತದಲ್ಲಿಯೇ ಬಿಡಾರ ಹೂಡಿದ್ದಾರೆ. ಬದುಕು ಕಟ್ಟಿಕೊಂಡಿದ್ದಾರೆ.

ಇಂಥಾ ಕತ್ರಿನಾ ಕೈಫ್ 2021ರಲ್ಲಿ ವಿಕ್ಕಿ ಕೌಶಲ್ ಅವರನ್ನು ಮದುವೆಯಾದ ನಂತರ, ಚಿತ್ರರಂಗದಿಂದ ಅಂತರ ಕಾಪಾಡಿಕೊಂಡಿದ್ದರು. ಅಳೆದು ತೂಗಿ ''ಮೇರಿ ಕ್ರಿಸ್ಮಸ್'' ಎಂಬ ಚಿತ್ರವನ್ನು ಮಾಡಿದ್ದರು. ಹಿಂದಿ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾದ ಈ ಚಿತ್ರ 2024ರಲ್ಲಿ ಬಿಡುಗಡೆಯಾಗಿತ್ತು. ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ವಿಫಲವೂ ಆಗಿತ್ತು.

katrina-kaif-lines-up-massive-2027-ott-debut-for-her-post-maternity-comeback

ಇದಾದ ನಂತರ ಕತ್ರಿನಾ ಕೈಫ್ ಗರ್ಭಿಣಿಯಾದರು. ಕಳೆದ ವರ್ಷ ಮುದ್ದಾದ ಮಗುವಿಗೆ ಜನ್ಮ ನೀಡಿದರು. ಸದ್ಯ ತಾಯ್ತನದ ಸುಖವನ್ನು ಕತ್ರಿನಾ ಕೈಫ್ ಅನುಭವಿಸುತ್ತಿದ್ಧಾರೆ. ಇದೇ ವೇಳೆ ಕತ್ರಿನಾ ಕೈಫ್ ಚಿತ್ರರಂಗಕ್ಕೆ ಮರಳಿ ಬರಲಿದ್ದಾರೆ ಎನ್ನುವ ಸುದ್ದಿಯೊಂದು ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಬೆಳ್ಳಿಪರದೆಯ ಮೇಲೆ ಇವರನ್ನು ಕಣ್ತುಂಬಿಕೊಳ್ಳಲಾಗದೇ ನಿರಾಸೆಗೊಂಡಿದ್ದ ಅಭಿಮಾನಿಗಳ ಸಂಭ್ರಮಕ್ಕೂ ಈ ಸುದ್ದಿ ಕಾರಣವಾಗಿದೆ.

ಕತ್ರಿನಾ ಕೈಫ್ ಕಂಬ್ಯಾಕ್ ಕುರಿತು ''ಇಂಡಿಯಾ ಟುಡೇ'' ವರದಿಯನ್ನು ಮಾಡಿದ್ದು, ತಮ್ಮ ಪುನರಾಗಮನಕ್ಕಾಗಿ ಕತ್ರಿನಾ ಕೈಫ್ ಸದ್ಯ ಒಂದೊಳ್ಳೆಯ ಕಥೆಯ ಹುಡುಕಾಟದಲ್ಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಈಗಾಗಲೇ ಕೆಲವು ಕಥೆಗಳನ್ನು ಕೂಡ ಕತ್ರಿನಾ ಕೈಫ್ ಓದಲು ಶುರು ಮಾಡಿದ್ದು ಎಲ್ಲವೂ ಅಂದುಕೊಂಡತೆ ಆದರೆ 2027ರ ದ್ವೀತಿಯಾರ್ಧದಲ್ಲಿ ಕತ್ರಿನಾ ಕೈಫ್ ಚಿತ್ರದ ಚಿತ್ರೀಕರಣಕ್ಕೆ ಮರಳಲಿದ್ಧಾರೆ ಎಂದು ತನ್ನ ವರದಿಯಲ್ಲಿ ''ಇಂಡಿಯಾ ಟುಡೇ'' ಉಲ್ಲೇಖ ಮಾಡಿದೆ.

ಇನ್ನು ಕತ್ರಿನಾ ಚಿತ್ತ ಕೇವಲ ಬೆಳ್ಳಿಪರದೆಯತ್ತ ಮಾತ್ರ ಇಲ್ಲ. ಬದಲಿಗೆ ಓಟಿಟಿ ವೇದಿಕೆಯತ್ತ ಕೂಡ ಕತ್ರಿನಾ ಗಮನ ಹರಿಸಿದ್ದಾರೆ ಎನ್ನಲಾಗಿದ್ದು, ಕಂಬ್ಯಾಕ್‌ಗೆ ಕತ್ರಿನಾ ಹರಿಬಿರಿ ಮಾಡುತ್ತಿಲ್ಲ, ಬದಲಿಗೆ ತಮ್ಮ ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕು ಎರಡು ಸಮತೋಲನದಿಂದ ಇರಬೇಕು, ಎರಡು ಜವಾಬ್ಧಾರಿಗಳಿಗೆ ಹೊಂದಿಕೆಯಾಗುವಂತಹ ಪಾತ್ರ ಬೇಕು, ಎಂಬ ಆಲೋಚನೆಯಲ್ಲಿ ಕಥೆಯ ಹುಡುಕಾಟ ನಡೆಸಿದ್ಧಾರೆ ಎಂದು ಹೇಳಲಾಗಿದೆ.

''ಇಂಡಿಯಾ ಟುಡೇ''ಯ ಈ ವರದಿಯ ಪ್ರಕಾರ ಕತ್ರಿನಾ ಕೈಫ್ ಓಟಿಟಿಯ ವೇದಿಕೆಯ ಮೂಲಕವೇ ಕಂಬ್ಯಾಕ್ ಮಾಡುವ ಸಾಧ್ಯತೆ ಹೆಚ್ಚಿದೆ. ಹಾಗೊಂದು ವೇಳೆ ಇದು ನಿಜಾ ಆಗಿದ್ದೇ ಆದರೆ, ಓಟಿಟಿಯಲ್ಲಿ ಇದು ಕತ್ರಿನಾ ಕೈಫ್ ಅವರ ಮೊದಲ ಸಿನಿಮಾ ಅಥವಾ ಸರಣಿಯಾದಂತೆ ಆಗಲಿದೆ.

ಒಟ್ನಲ್ಲಿ ಸದ್ಯ ಕತ್ರಿನಾ ಕೈಫ್ ಅವರ ಕಂಬ್ಯಾಕ್ ಚರ್ಚೆ ಶುರುವಾಗಿದ್ದು, ಕತ್ರಿನಾ ಕೈಫ್ ಬಾಲಿವುಡ್‌ನ ಬೆಳ್ಳಿ ಪರದೆಯ ಮೇಲೆ ಮತ್ತೆ ಮಿಂಚುತ್ತಾರಾ..? ಅಥವಾ ಓಟಿಟಿಯ ಮೂಲಕ ಮನೆ ಮತ್ತು ಮನವನ್ನು ಮತ್ತೆ ಪ್ರವೇಶಿಸುವ ಪ್ರಯತ್ನ ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

English summary
A new era begins! Katrina Kaif plots a major career pivot. Find out everything we know about her massive 2027 digital debut and post-maternity return.
Read more about: katrina kaif motherhood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X