For Quick Alerts
  ALLOW NOTIFICATIONS  
  For Daily Alerts

  ಅಬ್ಬಾ! ಲವ್ ಬ್ರೇಕ್ ಅಪ್ ಆದ್ರೂ ಕ್ಯಾಟ್ ಹ್ಯಾಪಿ, ಹೇಗೆ

  By ಸೋನು ಗೌಡ
  |

  ಬಾಲಿವುಡ್ ನಲ್ಲಿ ಅಮರ ಪ್ರೇಮಿಗಳಂತೆ ಒಬ್ಬರಿಗೊಬ್ಬರು ಅಂಟಿಕೊಂಡು ಓಡಾಡುತ್ತಿದ್ದ ಪ್ರಣಯ ಹಕ್ಕಿಗಳು ಇದೀಗ ಕಿತ್ತಾಡಿಕೊಂಡು ರೆಕ್ಕೆ ಮುರಿದಂತಾಗಿ ಬೇರೆ ಬೇರೆ ಆಗಿರುವ ವಿಚಾರ ಇಡೀ ಬಿಟೌನ್ ಗೆ ಗೊತ್ತಿದೆ.

  ನಾವೀಗ ಯಾರ ಪ್ರೀತಿ ವಿಚಾರದ ಬಗ್ಗೆ ಮಾತನಾಡುತ್ತಿದ್ದೇವೆ ಅಂದ್ರೆ, ಬಿಟೌನ್ ನಲ್ಲಿ ಕೈ ಕೈ ಹಿಡಿದು ಸುತ್ತಾಡಿ ತದನಂತರ 'ಮದುವೆ'ವರೆಗೂ ಮಾತಾಡಿ, ಆಮೇಲೆ ಬೇಡ ಅಂತ ಬ್ರೇಕ್ ಅಪ್ ಮಾಡಿಕೊಂಡ ನಟಿ ಕತ್ರಿನಾ ಮತ್ತು ರಣಬೀರ್ ಕಪೂರ್ ಜೋಡಿ ಬಗ್ಗೆ.[ನಿಖಿಲ್ 'ಜಾಗ್ವಾರ್' ನಲ್ಲಿ ಸೊಂಟ ಬಳುಕಿಸಲು ಕ್ಯಾಟ್ ಬರ್ತಾರಂತೆ.!]

  ಇದೀಗ ಪ್ರೀತಿ ಮುರಿದು ಹೋದ ಮೇಲೆ ಇವರಿಬ್ಬರೂ ಏನೂ ಮಾಡುತ್ತಿರಬಹುದು, ಫುಲ್ ಡಲ್ ಆಗಿ ಯಾವುದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲವೇ, ಚಿತ್ರದ ಪ್ರೊಮೋಷನ್ ಅಂತ ಹೊರಗಡೆ ಎಲ್ಲೂ ಕಾಣಿಸಿಕೊಳ್ಳದೇ, ಮನೆಯಲ್ಲಿ ಇದ್ದಿರಬಹುದು ಅಂತ ನೀವು ಯೋಚನೆ ಮಾಡಿದರೆ ನಿಮ್ಮ ಊಹೆ ತಪ್ಪು.

  ನಟಿ ಕತ್ರಿನಾ ಕೈಫ್ ಅವರು ಲವ್ ಬ್ರೇಕ್ ಅಪ್ ಆದ ಮೇಲೆ ಫುಲ್ ಬಿಂದಾಸ್ ಆಗಿದ್ದಾರೆ. ಭಾರಿ ಸಂತೋಷದಲ್ಲಿರುವ ಕ್ಯಾಟ್ ಆದಿತ್ಯ ರಾಯ್ ಕಪೂರ್ ಜೊತೆ ಫೆಬ್ರವರಿ 12ಕ್ಕೆ ರಿಲೀಸ್ ಆಗುವ 'ಫಿತೂರ್' ಚಿತ್ರದ ಪ್ರೊಮೊಷನ್ ನಲ್ಲಿ ಬ್ಯುಸಿಯಾಗಿದ್ದಾರೆ.[ಅಷ್ಟಕ್ಕೂ ಡಿಪ್ಪಿ ಮೇಲೆ ಕತ್ರಿನಾ ಕಿಡಿ ಕಾರುತ್ತಿರುವುದೇಕೆ?]

  ಅಂದಹಾಗೆ ರಣಬೀರ್ ಜೊತೆ ಲವ್ವಿ-ಡವ್ವಿ ಇರೋವಾಗ ಕತ್ರಿನಾ ಅವರು ಪಾರ್ಟಿ, ಕ್ಲಬ್ ಅಂತ ಹೆಚ್ಚಾಗಿ ಹೊರ ಜಗತ್ತಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ತಮ್ಮನ್ನು ತಾವು ಬಚ್ಚಿಡುತ್ತಿದ್ದರು. ಆದರೆ ಇದೀಗ ಎಲ್ಲಾ ಕಡೆ ಫುಲ್ ಜೋಶ್ ನಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಮುಂದೆ ಓದಿ...

  ಹ್ಯಾಪಿ ಕತ್ರಿನಾ ಕೈಫ್

  ಹ್ಯಾಪಿ ಕತ್ರಿನಾ ಕೈಫ್

  ನಟಿ ಕತ್ರಿನಾ ಕೈಫ್ ಅವರು ನಟ ರಣಬೀರ್ ಕಪೂರ್ ಜೊತೆ ಲವ್ ಬ್ರೇಕ್ ಅಪ್ ಆದ ಮೇಲೆ ಇನ್ನಷ್ಟು ಸಂತಸದಿಂದ ಲಕ ಲಕನೆ ಹೊಳೆಯುತ್ತಿದ್ದಾರೆ. ಇನ್ನು ಕತ್ರಿನಾ ಅವರ ಲವ್ ಬ್ರೇಕ್ ಅಪ್ ಆದರೂ ಕೂಡ ಪ್ರೀತಿ ಬಗ್ಗೆ ಅವರಿಗೆ ತುಂಬಾ ನಂಬಿಕೆ ಇದೆಯಂತೆ, ಜೊತೆಗೆ ಅವರು ಸಿನಿಮಾದಲ್ಲೂ ಲವ್ ಸ್ಟೋರಿ ಸಿನಿಮಾಗಳನ್ನು ಜಾಸ್ತಿ ಇಷ್ಟಪಡುತ್ತಾರಂತೆ. ಹೀಗಂತ ಸ್ವತಃ ಕತ್ರಿನಾ ಅವರೇ ತಿಳಿಸಿದ್ದಾರೆ. ಲವ್ ಸ್ಟೋರಿ ಸಿನಿಮಾಗಳು ಎಲ್ಲಾ ಪ್ರೇಕ್ಷಕರನ್ನು ಬೇಗ ತಲುಪುತ್ತದೆ ಎಂದು ಕ್ಯಾಟ್, ಕ್ಯೂಟಾಗಿ ಹೇಳಿದ್ದಾರೆ.

  ಸಂತೋಷ ಎಂಬುದು ತುಂಬಾ ಗ್ರೇಟ್: ಕತ್ರಿನಾ

  ಸಂತೋಷ ಎಂಬುದು ತುಂಬಾ ಗ್ರೇಟ್: ಕತ್ರಿನಾ

  ಪ್ರೀತಿ ಬಗ್ಗೆ ನಟಿ ಕತ್ರಿನಾ ಅವರಿಗೆ ಇರುವಷ್ಟು ನಂಬಿಕೆ ಯಾರಿಗೂ ಇರಲಿಕ್ಕಿಲ್ಲ. ಅವರು ಯಾವಾಗಲೂ ಸಂತೋಷವಾಗಿರಲು ಬಯಸುತ್ತಾರೆ. ಹಾಗೆಯೇ ತಮ್ಮ ಮುಂಬರುವ ಸಿನಿಮಾ 'ಫಿತೂರ್' ನಲ್ಲಿ ತುಂಬಾ ಆಕರ್ಷಕವಾಗಿ ಮಿಂಚಿದ್ದಾರೆ.

  ಜಾಲಿ ಮೂಡ್ ನಲ್ಲಿ ಕತ್ರಿನಾ

  ಜಾಲಿ ಮೂಡ್ ನಲ್ಲಿ ಕತ್ರಿನಾ

  ನಟ ರಣಬೀರ್ ಕಪೂರ್ ಜೊತೆ ಕತ್ರಿನಾ ಅವರ ಪ್ರೀತಿ ಮುರಿದು ಹೋದ ಮೇಲೆ ಬಹಳ ಜಾಲಿ ಮೂಡಿನಲ್ಲಿ ಎಲ್ಲರ ಜೊತೆ ವ್ಯವಹರಿಸುತ್ತಾರೆ. ಇತ್ತೀಚೆಗೆ ತಮ್ಮ ಹಳೇ ಬಾಯ್ ಫ್ರೆಂಡ್ ಸಲ್ಮಾನ್ ಖಾನ್ ಅವರನ್ನು ಬಿಗ್ ಬಾಸ್ ವೇದಿಕೆಯಲ್ಲಿ ಭೇಟಿಯಾಗಿದ್ದರು.

  ನಗು ನಗುತ್ತಾ ಇರುವ ಕತ್ರಿನಾ ಕೈಫ್

  ನಗು ನಗುತ್ತಾ ಇರುವ ಕತ್ರಿನಾ ಕೈಫ್

  ಈ ಮೊದಲು ಕತ್ರಿನಾ ಅವರು ರಣಬೀರ್ ಅವರ ಜೊತೆ ಇದ್ದಾಗ ಯಾವುದೇ ಕಾರ್ಯಕ್ರಮಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಬ್ರೇಕ್ ಅಪ್ ಆದ ಮೇಲೆ ಎಲ್ಲಾ ಕಾರ್ಯಕ್ರಮಗಳಲ್ಲೂ ಬಿಂದಾಸ್ ಆಗಿ ಮಿಂಚುತ್ತಿದ್ದಾರೆ.

  ಸುಂದರ ಮೊಗದ ಕ್ಯಾಟ್

  ಸುಂದರ ಮೊಗದ ಕ್ಯಾಟ್

  ಎಲ್ಲಾ ಸಿನಿಮಾಗಳಲ್ಲಿ ಬಬ್ಲಿ ಬಬ್ಲಿ ಆಗಿ ನಟಿಸುವ ಕ್ಯಾಟ್ ಗೆ ಅಪಾರ ಅಭಿಮಾನಿಗಳಿದ್ದಾರೆ. ಸದಾ ತಮ್ಮ ನಗುಮೊಗದಿಂದಲೇ ತಮ್ಮ ಅಭಿಮಾನಿಗಳನ್ನು ಆಕರ್ಷಿಸುತ್ತಾರೆ.

  ಕೂಲ್ ಆಗಿರುವ ಕತ್ರಿನಾ ಕೈಫ್

  ಕೂಲ್ ಆಗಿರುವ ಕತ್ರಿನಾ ಕೈಫ್

  ರಣಬೀರ್ ಅವರ ಜೊತೆ ಸಂಬಂಧ ಹಳಸಿದ ಮೇಲೆ ನಟಿ ಕತ್ರಿನಾ ಅವರು ತಮ್ಮನ್ನು ತಾವು ಬಹಳ ಕೂಲ್ ಆಗಿ ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಎಲ್ಲೂ ಗರಂ ಆದಂತೆ ಕಾಣಿಸಿಕೊಂಡಿಲ್ಲ. ಮಾಧ್ಯಮದವರ ಪ್ರಶ್ನೆಗೂ ಕ್ಯಾಟ್ ಕೂಲ್ ಆಗಿಯೇ ಉತ್ತರ ನೀಡಿದ್ದಾರೆ.

  ಸಲ್ಲು ಜೊತೆ ಸೆಲ್ಫಿ

  ಸಲ್ಲು ಜೊತೆ ಸೆಲ್ಫಿ

  ಇತ್ತೀಚೆಗೆ 'ಫಿತೂರ್' ಸಿನಿಮಾದ ಪ್ರೊಮೊಷನ್ ಗಾಗಿ ನಟಿ ಕತ್ರಿನಾ ಮತ್ತು ನಟ ಆದಿತ್ಯಾ ರಾಯ್ ಕಪೂರ್ ಅವರು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ನಟ ಸಲ್ಮಾನ್ ಖಾನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸೊಬಗು ನೋಡಿ.

  ಬಿಗ್ ವೇದಿಕೆಯಲ್ಲಿ ಬ್ಯೂಟಿಫುಲ್ ಪರ್ಫಾಮೆನ್ಸ್

  ಬಿಗ್ ವೇದಿಕೆಯಲ್ಲಿ ಬ್ಯೂಟಿಫುಲ್ ಪರ್ಫಾಮೆನ್ಸ್

  ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಆದಿತ್ಯಾ ರಾಯ್ ಕಪೂರ್ ಮತ್ತು ನಟಿ ಕತ್ರಿನಾ ಕೈಫ್ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಸುಂದರವಾದ ಡ್ಯಾನ್ಸ್ ಪರ್ಫಾಮೆನ್ಸ್ ಮಾಡಿದರು.

  ಗುಡ್ ಕೆಮಿಸ್ಟ್ರಿ

  ಗುಡ್ ಕೆಮಿಸ್ಟ್ರಿ

  'ಫಿತೂರ್' ಸಿನಿಮಾದಲ್ಲಿ ಕತ್ರಿನಾ ಮತ್ತು ಆದಿತ್ಯಾ ರಾಯ್ ಅವರ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿದ್ದು ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಫುಲ್ ರೊಮ್ಯಾಂಟಿಕ್ ಸಿನಿಮಾ 'ಫಿತೂರ್' ಫೆಬ್ರವರಿಯಲ್ಲಿ 12ಕ್ಕೆ ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ.

  English summary
  Katrina Kaif, after her breakup with Ranbir Kapoor, looks much more vibrant and happy. She's speaking her mind and is seen being present at every event possible. During her lovey-dovey days with Ranbir, Katrina looked as if she's hiding a lot of things, but things have changed for good now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X