»   » ಏಷ್ಯಾದ ನಂ.1 ಕಾಮ ಕನ್ಯೆ ಕತ್ರೀನಾ ಕೈಫ್

ಏಷ್ಯಾದ ನಂ.1 ಕಾಮ ಕನ್ಯೆ ಕತ್ರೀನಾ ಕೈಫ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಟಾಪ್ ಸೆಕ್ಸಿ ನಟಿ ಎಂದು ಫಾರ್ ಹಿಮ್ ಮ್ಯಾಗಜೀನ್ ನಿಂದ ಕರೆಸಿಕೊಂಡಿದ್ದ ಕತ್ರೀನಾ ಕೈಫ್ ಈಗ ವಾರ ಪತ್ರಿಕೆಗಳ ಸಮೀಕ್ಷೆಯಲ್ಲೂ ನಂ.1 ಎನಿಸಿದ್ದಾಳೆ. ಕತ್ರೀನಾ ಕೈಫ್ ಅವರು ಪ್ರಿಯಾಂಕಾ ಕೈಫ್ ಅವರನ್ನು ಹಿಂದಿಕ್ಕಿ ಏಷ್ಯಾನ ನಂ.1 ಸೆಕ್ಸಿ ಎಂಬ ಕಿರೀಟ ಧರಿಸಿದ್ದಾಳೆ. ಸತತ ನಾಲ್ಕನೇ ಬಾರಿಗೆ ಕೈಫ್ ಈ ಗೌರವಕ್ಕೆ ಪಾತ್ರಳಾಗಿದ್ದಾಳೆ. ಸೌಂದರ್ಯ ರಾಣಿ ರೇಸಿನಲ್ಲಿ ಪ್ರಿಯಾಂಕಾ ಚೋಪ್ರರನ್ನು ಹಿಂದಿಕ್ಕಿದ್ದು ನಂತರದ ಸ್ಥಾನದಲ್ಲಿ ಟಿವಿ ತಾರೆ ದ್ರಷ್ಟಿ ದಾಮಿ, ದೀಪಿಕಾ ಪಡುಕೋಣೆ ಇದ್ದಾರೆ.

ಕತ್ರೀನಾ ಕೈಫ್ ಸದ್ಯಕ್ಕೆ ಧೂಮ್ 3 ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾಳೆ. ಧೂಮ್ ನಿಂದ ಮತ್ತೊಮ್ಮೆ ಮಿಂಚಲು ಸಿದ್ಧಳಾಗಿದ್ದಾಳೆ. ಈ ನಡುವೆ ರಣಬೀರ್ ಕಪೂರ್ ಜತೆಗಿನ ಬಾಂಧವ್ಯ ಪ್ರೇಮ, ಮದುವೆ, ಗಾಸಿಪ್ ನಿಂದಾಗಿ ವೃತ್ತಿಯಲ್ಲಿ ಕೊಂಚ ಹಿನ್ನಡೆಯುಂಟಾಗಿದೆ ಎನ್ನಲಾಗಿದೆ. ಈ ಬಾರಿಯೇ ಕೊನೆ ಇನ್ಮುಂದೆ ಕೈಫ್ ಮತ್ತೊಮ್ಮೆ ಈ ಪಟ್ಟಿಯಲ್ಲಿ ಅಗ್ರಸ್ಥಾನ ಕಾಣಿಸಿಕೊಳ್ಳುವುದು ಕಷ್ಟ.

2013ರ ಅಚ್ಚರಿ ಎಂಟ್ರಿ ಎಂದರೆ ಟಿವಿ ತಾರೆ ಧಾಮಿ. ಧಾಮಿ ಟಾಪ್ 3 ಸ್ಥಾನಕ್ಕೇರಿದ್ದರೆ ಆಕೆ ಗೆಳತಿ ಸನಾಯಾ ಇರಾನಿ ಟಾಪ್ 10 ಯೊಳಗೆ ಎಂಟ್ರಿ ಕೊಟ್ಟು 6ನೇ ಸ್ಥಾನಕ್ಕೇರಿದ್ದಾಳೆ. ಇದರ ಜತೆಗೆ 2013ರ ಅಚ್ಚರಿ ಎಂಟ್ರಿ ಎಂದರೆ ಟಿವಿ ತಾರೆ ಧಾಮಿ. ಧಾಮಿ ಟಾಪ್ 3 ಸ್ಥಾನಕ್ಕೇರಿದ್ದರೆ, ಆಕೆ ಗೆಳತಿ ಸನಾಯಾ ಇರಾನಿ ಟಾಪ್ 10 ಯೊಳಗೆ ಎಂಟ್ರಿ ಕೊಟ್ಟು 6ನೇ ಸ್ಥಾನಕ್ಕೇರಿದ್ದಾಳೆ. ಇದರ ಜತೆಗೆ ಪಾಕಿಸ್ತಾನ ಹುಮೈಮಾ ಮಲಿಕ್(15) ಏಕೈಕ ಭಾರತೀಯಲ್ಲದ ತಾರೆ ಎನಿಸಿದ್ದಾಳೆ. anger ಮ್ಯಾನೇಜ್ಮೆಂಟ್ ನಟಿ ನೌರಿನ್ ಡಿವುಲ್ಫ್(10) ಕೂಡಾ ಟಾಪ್ 10 ನಲ್ಲಿ ಕಾಣಿಸಿಕೊಂಡಿದ್ದಾಳೆ. (ಪಿಟಿಐ)

ನಂ.1 ಕಾಮ ಕನ್ಯೆ ಕತ್ರೀನಾ ಕೈಫ್

ಕತ್ರೀನಾ ಕೈಫ್ ಅವರು ಪ್ರಿಯಾಂಕಾ ಕೈಫ್ ಅವರನ್ನು ಹಿಂದಿಕ್ಕಿ ಏಷ್ಯಾನ ನಂ.1 ಸೆಕ್ಸಿ ಎಂಬ ಕಿರೀಟ ಧರಿಸಿದ್ದಾಳೆ.

ಪ್ರಿಯಾಂಕ ಛೋಪ್ರಾ

2008ರಲ್ಲಿ 4ನೇ ಸ್ಥಾನದಲ್ಲಿದ್ದ ಪ್ರಿಯಾಂಕಾ ‍ಚೋಪ್ರಾ ಇತ್ತೀಚಿನ ಕ್ರಿಶ್ 3 ಯಶಸ್ಸಿನ ನಂತರ ಎರಡನೇ ಸ್ಥಾನಕ್ಕೇರಿದ್ದಾಳೆ

ಫ್ರೀಡಾ ಪಿಂಟೋ

ಸ್ಲಂ ಡಾಗ್ ಮಿಲೇನಿಯರ್ ಚಿತ್ರ ಖ್ಯಾತಿಯ ಫ್ರೀಡಾ ಈ ಪಟ್ಟಿಯಲ್ಲಿ ಮೊದಲ ಬಾರಿಗೆ ಉನ್ನತ ಸ್ಥಾನಕ್ಕೇರಿದ್ದಾಳೆ

ಕರೀನಾ ಕಪೂರ್

ಕಳೆದ ವರ್ಷಕ್ಕಿಂತ ಒಂದು ಸ್ಥಾನ ಕೆಳಗಿಳಿದಿರುವ ಸೈಜ್ ಜೀರೋ ನಟಿ ಕರೀನಾ ಕಪೂರ್ 5ನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಬ್ರಿಟಿಷ್ ನಟಿ ನಾಲ್ಕನೇ ಸ್ಥಾನ್ದಲ್ಲಿ ಬ್ರಿಟಿಷ್ ನಟಿ ಲೈಲಾ

ಉಳಿದ ಸುಂದರಿಯರು

ಬಿಪಾಶಾ ಬಸು 2ನೇ ಸ್ಥಾನದಿಂದ (6), ಲಾರಾ ದತ್ತ 13ನೇ ಸ್ಥಾನದಿಂದ (7), ಐಶ್ವರ್ಯಾ ರೈ ಬಚ್ಚನ್ ಒಂದು ಸ್ಥಾನ ಕೆಳಗಿಳಿದು 8ನೇ ಸ್ಥಾನಕ್ಕೆ ಕುಸಿದಿದ್ದಾರೆ. ಪಾಕಿಸ್ತಾನದ ಮಾಡೆಲ್ ಕಮ್ ನಟಿ ಮೆಹ್ವಿಷ್ ಹಯಾತ್ 9ನೇ ಸ್ಥಾನದಲ್ಲಿದ್ದಾಳೆ. ದೀಪಿಕಾ ಪಡುಕೋಣೆ ಹತ್ತನೇ ಸ್ಥಾನದಲ್ಲಿದ್ದಾಳೆ.

ಸೋನಮ್ ಕಪೂರ್, ಪರಿಣಿತಿ ಛೋಪ್ರಾ(14), ಸೋಫಿ ಚೌಧರಿ(21), ಮೆಹ್ರಿನ್ ಸೈಯದ್ (22), ಸುನಿಧಿ ಚೌಹಣ್ (28), ಅಂಕಿತಾ ಲೊಖಂಡೆ (29), ಹೀನಾ ಖಾನ್ (31) ಹಾಗೂ ಶ್ರೇಯಾ ಘೋಶಾಲ್ (43) ಕೂಡಾ ಸ್ಥಾನ ಪಡೆದಿದ್ದಾರೆ

English summary
Her absence from the big screen for a year has not stopped Bollywood beauty Katrina Kaif from winning the world's sexiest Asian woman title for the fourth consecutive year in a poll by a weekly magazine here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada