For Quick Alerts
  ALLOW NOTIFICATIONS  
  For Daily Alerts

  ಕೆಟ್ಟ ಮೇಲೆ ಬುದ್ದಿ ಬಂತು ನೋಡಿ ನಮ್ಮ ಕತ್ರಿನಾಗೆ

  By Suneetha
  |

  ಬಾಲಿವುಡ್ ನಲ್ಲಿ ಒಂದು ಕಾಲದಲ್ಲಿ ಹಾಟ್ ಕಪಲ್ ಆಗಿದ್ದ ಬಿಟೌನ್ ಬಾರ್ಬಿ ಡಾಲ್ ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಅವರ ಪ್ರೀತಿ ಮುರಿದು ಬಿದ್ದಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.

  ಆದರೆ ಇದೀಗ ಮುರಿದು ಹೋಗಿರುವ ಸಂಬಂಧವನ್ನು ಮತ್ತೆ ಜೋಡಿಸುವಲ್ಲಿ ಕತ್ರಿನಾ ಅವರು ಪ್ರಯತ್ನ ಪಡುತ್ತಿದ್ದಾರೆ ಎಂಬ ಗಾಸಿಪ್ ಒಂದು ಇಡೀ ಬಿಟೌನ್ ನ ಗಲ್ಲಿ-ಗಲ್ಲಿಗಳಲ್ಲಿ ಹರಿದಾಡುತ್ತಿದೆ.

  ಇತ್ತೀಚೆಗೆ ನಡೆದ ಪಾರ್ಟಿಯೊಂದರಲ್ಲಿ ಈ ಜೋಡಿ ಪರಸ್ಪರ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ನಟಿ ಕತ್ರಿನಾ ಕೈಫ್ ಅವರು ರಣಬೀರ್ ಕಪೂರ್ ಅವರ ಜೊತೆ ಮುರಿದು ಹೋಗಿರುವ ಸಂಬಂಧವನ್ನು ಮತ್ತೆ ಜೋಡಿಸುವ ಬಗ್ಗೆ ಮಾತಾಡಿದ್ದರಂತೆ.['ದಿ ಕಪೂರ್ಸ್' ಖಾನ್ದಾನ್ ನಿಂದ ಕತ್ರೀನಾ ಕಿಕ್ ಔಟ್.!]

  ಆದರೆ ಇದನ್ನು ನಯವಾಗಿ ತಿರಸ್ಕರಿಸುವ ರಣಬೀರ್ ಕಪೂರ್ ಮತ್ತೆ ಸಂಬಂಧವನ್ನು ಮುಂದುವರಿಸುವ ಇಚ್ಛೆ ತೋರಲಿಲ್ಲ. ಇದರಿಂದ ಕ್ಯಾಟ್ ಮಾತ್ರ ತೀವ್ರ ಅಸಮಾಧಾನಗೊಂಡಿದ್ದಾರಂತೆ. ಇದಕ್ಕೆ ಹೇಳೋದು ದೊಡ್ಡವರು ಕೆಟ್ಟ ಮೇಲೆ ಬುದ್ದಿ ಬಂತು ಅಂತ.

  ಇನ್ನು ಕೆಲವು ದಿನಗಳ ಹಿಂದೆ ನಡೆದ ನಿರ್ಮಾಪಕಿ ಆರತಿ ಶೆಟ್ಟಿ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಕೂಡ ರಣಬೀರ್ ಮತ್ತು ಕತ್ರಿನಾ ಕೈಫ್ ಅವರು ಭಾಗಿಯಾಗಿದ್ದರು. ಆದರೆ ಅಲ್ಲಿ ಮಾತನಾಡುವುದಿರಲಿ, ಒಬ್ಬರನ್ನೊಬ್ಬರು ಕಣ್ಣೆತ್ತಿ ಕೂಡ ನೋಡದೇ ಹಾಗೆ ಮುಖ ತಿರುಗಿಸಿಕೊಂಡು ವಾಪಸ್ ಹೋಗಿದ್ದರು.[ರಣಬೀರ್ ಮೇಲೆ ಸೇಡಿನ ಜ್ವಾಲೆ, ಸಲ್ಲು ಜೊತೆ ಸೇರಿಕೊಂಡ ಕ್ಯಾಟ್]

  ಮಾತ್ರವಲ್ಲದೇ ಅನುರಾಗ್ ಬಸು ನಿರ್ದೇಶನದ 'ಜಗ್ಗ ಜಸೂಸ್' ಚಿತ್ರದ ಶೂಟಿಂಗ್ ಸಂದರ್ಭದಲ್ಲಿಯೂ ಕ್ಯಾಟ್ ಮತ್ತು ರಣಬೀರ್ ಮುನಿಸಿಕೊಂಡೇ ಇದ್ದರಂತೆ. ಏನು ಮಾಡೋದು ಜಗಳ ಆಡೋ ಮುನ್ನ ಯೋಚನೆ ಮಾಡಬೇಕಿತ್ತಲ್ವಾ ಕತ್ರಿನಾ ಅವರು. ಎಲ್ಲಾ ಮುಗಿದು ಹೋದ ಮೇಲೆ ಈಗ ಪ್ಯಾಚ್ ಅಪ್ ಮಾಡೋಣ ಅಂದ್ರೆ ಏನು ಪ್ರಯೋಜನ.[ಅಬ್ಬಾ! ಲವ್ ಬ್ರೇಕ್ ಅಪ್ ಆದ್ರೂ ಕ್ಯಾಟ್ ಹ್ಯಾಪಿ, ಹೇಗೆ]

  ಕತ್ರಿನಾ ಕೈಫ್ ಅವರ ಅಪರೂಪದ ಚಿತ್ರಗಳ ಫೋಟೋ ಗ್ಯಾಲರಿ ಕೇವಲ ನಿಮಗಾಗಿ...

  English summary
  Hindi Actor Ranbir Kapoor and Actress Katrina Kaif met at a party of a common friend for the first time post their break-up. At the party, Katrina Kaif went to meet Ranbir Kapoor and requested him for a patch up but he firmly told her that the relationship is over.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X