For Quick Alerts
  ALLOW NOTIFICATIONS  
  For Daily Alerts

  ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರು

  |

  ಬಾಲಿವುಡ್ ನಟಿ ಕತ್ರಿನಾ ಕೈಫ್ ಲವ್, ಡೇಟಿಂಗ್ ಅಂತ ಆಗಾಗ ಸುದ್ದಿಯಲ್ಲಿರುತ್ತಾರೆ. ಕಳೆದ ಕೆಲವು ವರ್ಷಗಳ ಹಿಂದೆ ಸಲ್ಮಾನ್ ಖಾನ್ ಜೊತೆ ಕತ್ರಿನಾ ಹೆಸರು ಕೇಳಿಬರುತ್ತಿತ್ತು. ಬಳಿಕ ನಟ ರಣಬೀರ್ ಕಪೂರ್ ಜೊತೆ ಡೇಟಿಂಗ್ ನಲ್ಲಿದ್ದ ಬಾಲಿವುಡ್ ಕ್ಯಾಟ್ ರಣಬೀರ್ ಕಪೂರ್ ಅವರಿಂದನೂ ದೂರ ಆಗಿದ್ದಾರೆ.

  ಇದೀಗ ಕತ್ರಿನಾ ಹೆಸರು ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟನ ಜೊತೆ ಕೇಳಿಬರುತ್ತಿದೆ. ಹೌದು, ಕತ್ರಿನಾ ಕೈಫ್ ಬಾಲಿವುಡ್ ನಟ ವಿಕ್ಕಿ ಕೌಶಲ್ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ ಎನ್ನುವ ಗುಸುಗುಸು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಆಗಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿರುತ್ತಾರೆ. ಔಟಿಂಗ್, ವಿದೇಶಿ ಪ್ರವಾಸ ಅಂತ ಒಟ್ಟಿಗೆ ಓಡಾಡುತ್ತಿರುತ್ತಾರೆ.

  ಥ್ರಿಲ್ಲಿಂಗ್ ಸುದ್ದಿ ನೀಡಿದ ಕತ್ರಿನಾ ಕೈಫ್-ವಿಜಯ್ ಸೇತುಪತಿ ಚಿತ್ರ!ಥ್ರಿಲ್ಲಿಂಗ್ ಸುದ್ದಿ ನೀಡಿದ ಕತ್ರಿನಾ ಕೈಫ್-ವಿಜಯ್ ಸೇತುಪತಿ ಚಿತ್ರ!

  ಇದೀಗ ಕತ್ರೀನಾ ಕೈಫ್ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಒಂದು ಸೆಲ್ಫಿ ಶೇರ್ ಮಾಡಿದ್ದಾರೆ. ಈ ಸೆಲ್ಫಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕತ್ರಿನಾ ತಬ್ಬಿಕೊಂಡಿರುವುದು ಯಾರನ್ನ ಎನ್ನುವ ಚರ್ಚೆ ನಡೆಯುತ್ತಿದೆ. ಈ ಫೋಟೋ ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ಫೋಟೋದಲ್ಲಿ ಇರುವುದು ನಟ ವಿಕ್ಕಿ ಕೌಶಲ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  ಒಬ್ಬ ವ್ಯಕ್ತಿಯನ್ನು ತಬ್ಬಿಕೊಂಡಿರುವ ಕತ್ರಿನಾ ಫೋಟೋದಲ್ಲಿ ಚಿಟ್ಟೆಗಳು ಹಾರಾಡುತ್ತಿವೆ. ಈ ಫೋಟದಲ್ಲಿ ಕತ್ರಿನಾ ತಬ್ಬಿಕೊಂಡಿರುವ ವ್ಯಕ್ತಿ ಹಳದಿ ಬಣ್ಣದ ಬಟ್ಟಿ ಧರಿಸಿದ್ದಾರೆ. ವಿಕ್ಕಿ ಕೌಶಲ್ ಹಳದಿ ಬಣ್ಣದ ಬಟ್ಟೆ ಧರಿಸಿರುವ ಫೋಟೋವನ್ನು ಮ್ಯಾಚ್ ಮಾಡಿ, ಇದು ಪಕ್ಕಾ ವಿಕ್ಕಿ ಕೌಶಲ್ ಎನ್ನುತ್ತಿದ್ದಾರೆ ಅಭಿಮಾನಿಗಳು.

  ಇಬ್ಬರು ಪ್ರೀತಿಯ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿಲ್ಲವಾದರೂ ಗುಟ್ಟಾಗಿ ಉಳಿದ್ದಿಲ್ಲ. ಇಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಇಬ್ಬರ ನಡುವೆ ಸ್ನೇಹಿಕ್ಕಿಂತ ಮಿಗಿಲಾದ ಬಂಧವಿದೆ ಎನ್ನುವುದನ್ನು ಗೊತ್ತುಪಡಿಸುತ್ತಿದ್ದಾರೆ.

  ಪೊಗರು, ರಾಬರ್ಟ್ ಬಗ್ಗೆ ಮಾತನಾಡಿದ ಪುನೀತ್ ರಾಜ್ ಕುಮಾರ್ | Filmibeat Kannada

  ಕತ್ರಿನಾ ಕೈಫ್ ಸದ್ಯ ಸೂರ್ಯವಂಶಿ ಮತ್ತು ಫೋನ್ ಭೂತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇನ್ನೂ ಫೋನ್ ಭೂತ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಜೊತೆಗೆ ಸೌತ್ ಸ್ಟಾರ್ ವಿಜಯ್ ಸೇತುಪತಿ ನಟನೆಯ ಸಿನಿಮಾದಲ್ಲೂ ಕತ್ರಿನಾ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Bollywood Actress Katrina Kaif latest photo viral on Social media, Fans speculating she hugging rumoured boyfriend Vicky Kaushal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X