ಅಬ್ಬಬ್ಬಾ ಕತ್ರಿನಾ ಮದುವೆ ಲೆಹೆಂಗ ಎಷ್ಟು ದುಬಾರಿ ಗೊತ್ತಾ:ಇದೇ ಸಾಲಲ್ಲಿ ಪ್ರಿಯಾಂಕಾ, ದೀಪಿಕಾ, ಅನುಷ್ಕಾ!

ಮದುವೆ ಅಂದ್ರೆ ಅದೊಂದು ಸಂಭ್ರಮ ಸಡಗರ. ಅದರಲ್ಲೂ ಅದ್ದೂರಿತನದಿಂದ ಮದುವೆ ಆಗುವ ಜೋಡಿಗಳಿಗಳ ಸಂಭ್ರಮಕ್ಕೆ ಎಲ್ಲೆ ಇರುವುದಿಲ್ಲ. ಸಾಮಾನ್ಯ ಜನರ ಮದುವೆಗಳೇ ಈ ಅದ್ದೂರಿತನದಿಂದ ಕೂಡಿರುತ್ತವೆ. ಇನ್ನು ಸಿನಿಮಾ ತಾರೆಯರ ಮದುವೆ ಅಂದ್ರೆ ಕೇಳ ಬೇಕಾ. ಅಲ್ಲಿ ಎಲ್ಲವೂ ದುಬಾರಿ.

ಸದ್ಯಕ್ಕೆ ಸಿನಿಮಾ ರಂಗದಲ್ಲಿ ಅತಿ ಹೆಚ್ಚಾಗಿ ಸದ್ದು ಮಾಡ್ತಿರುವುದು ಬಾಲಿವುಡ್‌ ಜೋಡಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಮದುವೆ. ಈ ಜೋಡಿ ಮದುವೆ ಗುಟ್ಟು ಗುಟ್ಟಾಗಿ ನಡೆದರೂ ಕೂಡ ಎಲ್ಲರ ಚಿತ್ತ ಅವರ ಮದುವೆ ಮೆಲೆಯೇ ಇತ್ತು. ಈ ಜೋಡಿ ಮದುಮಕ್ಕಳಾಗಿ ಯಾವ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಎನ್ನುವ ಕುತುಹಲ ಎಲ್ಲರಲ್ಲೂ ಮನೆ ಮಾಡಿದ್ದವು.

ಈಗ ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಕತ್ರಿನಾ ಮದುವೆಗೆ ಧರಿಸಿದ ಲೆಹೆಂಗದ ಬೆಲೆ ರಿವೀಲ್ ಆಗಿದೆ. ಇದುವೇ ಸಾಕಷ್ಟು ಚರ್ಚೆಗೆ ಕಾರಣ ಆಗಿದೆ.

17 ಲಕ್ಷದ ಲೆಹೆಂಗ ತೊಟ್ಟ ಕತ್ರಿನಾ!

17 ಲಕ್ಷದ ಲೆಹೆಂಗ ತೊಟ್ಟ ಕತ್ರಿನಾ!

ಸಾಮಾನ್ಯವಾಗಿ ನಟಿ ಮಣಿಯರ ಮದುವೆ ಅಂದ್ರೆ ಅಲ್ಲಿ ಮದುವೆ ಹೇಗೆ ಆಯ್ತು ಎನ್ನುವುದಕ್ಕಿಂತ ಹೆಚ್ಚಾಗಿ ಮದುಮಗಳು ಯಾವ ಸೀರೆ ಉಟ್ಟಿದ್ದಾಳೆ? ಯಾವ ಒಡವೆ ತೊಟ್ಟಿದ್ದಾಳೆ? ಎನ್ನುವ ವಿಚಾರದ ಬಗ್ಗೆಯೇ ಹೆಚ್ಚಿನ ಆಸಕ್ತಿ ಇರುತ್ತದೆ. ಅದರಲ್ಲೂ ಸೆಲೆಬ್ರೆಟಿಗಳ ವಿಚಾರದಲ್ಲಿ ಒಬ್ಬರಿಗಿಂತ ಒಬ್ಬರು ಮದುವೆ ಬಟ್ಟೆಗಳ ಬೆಲೆ ಹೆಚ್ಚು ಇರುವುದನ್ನೇ ನೋಡುತ್ತಾರೆ.

ಇತ್ತೀಚೆಗೆ ಮದುವೆ ಆಗಿರುವ ಕತ್ರಿನಾ ಮದುವೆ ಲೆಹೆಂಗಾದ ಬೆಲೆ 17 ಲಕ್ಷ ರೂಪಾಯಿ. ಈ ಲೆಹೆಂಗಾ ಕತ್ರಿನಾಳಿಗಾಗಿ ವಿಶೇಷವಾಗಿ ತಯಾರಾಗಿದೆ. ಬಾಲಿವುಡ್‌ನ ಖ್ಯಾತ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಈ ಲೆಹೆಂಗಾ ವಿನ್ಯಾಸ ಮಾಡಿದ್ದಾರೆ. ಕೆಂಪು ಮತ್ತು ಗೊಲ್ಡನ್ ಬಣ್ಣದಲ್ಲಿ ಈ ಲೆಹೆಂಗಾ ತಯಾರಾಗಿದೆ. ಈ ಲೆಹೆಂಗಾ ಮದುಮಗಳು ಕತ್ರಿನಾ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ಫೋಟೊಗಳಲ್ಲಿ ಕತ್ರಿನಾ ಲುಕ್ ವಾವ್ ಎನ್ನುವಂತಿದೆ.

ಕತ್ರಿನಾ ಉಂಗುರವೂ ಲಕ್ಷ ಬೆಲೆಯುಳ್ಳದ್ದು!

ಕತ್ರಿನಾ ಉಂಗುರವೂ ಲಕ್ಷ ಬೆಲೆಯುಳ್ಳದ್ದು!

ಇನ್ನೂ ಕತ್ರಿನಾ ಉಟ್ಟ ಬಟ್ಟೆ ಮಾತ್ರವಲ್ಲ ಆಕೆಗೆ ತೊಡಿಸಿದ ಉಂಗುರ ಕೂಡ ಲಕ್ಷ ಲಕ್ಷ ಬೆಲೆ ಉಳ್ಳದ್ದು. ಕತ್ರಿನಾಗೆ ತೊಡಿಸಿದ ಉಂಗುರ ಪ್ಲಾಟಿನಂದು. ಅದರ ಬೆಲೆ 7.4 ಲಕ್ಷ ರೂಪಾಯಿ. ಹೀಗೆ ಪ್ರತಿ ಒಂದರಲ್ಲೂ ಅದ್ದೂರಿತನ ಹೊಂದಿದೆ ಈ ಸೆಲೆಬ್ರೆಟಿ ವೆಡ್ಡಿಂಗ್.

ದೀಪಿಕಾ ಪಡುಕೋಣೆ ಮದುವೆ ಲೆಹೆಂಗಾ 12 ಲಕ್ಷ!

ದೀಪಿಕಾ ಪಡುಕೋಣೆ ಮದುವೆ ಲೆಹೆಂಗಾ 12 ಲಕ್ಷ!

ಇನ್ನು ಹೀಗೆ ಗೌಪ್ಯವಾಗಿ ಅದ್ದೂರಿಯಾಗಿ ಮದುವೆ ಆದ ನಟ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಕೂಡ ತಮ್ಮ ಮದುವೆ ಲುಕ್‌ನಿಂದ ಹೆಚ್ಚಿನ ಗಮನ ಸೆಳೆದಿದ್ದರು. ಈ ಜೋಡಿ ಕೂಡ ಮದುವೆ ಬಳಿಕ ತಮ್ಮ ಕಾಸ್ಟ್ಯೂಂ ನಿಂದ ಹೆಚ್ಚಾಗಿ ಸುದ್ದಿ ಆಗಿದ್ದರು. ದೀಪಿಕಾ ತೊಟ್ಟ ಲೆಹೆಂಗಾದ ಬೆಲೆ ಬರೋಬ್ಬರಿ 12 ಲಕ್ಷ ರೂ. ಕೆಂದು ಮತ್ತು ಗೋಲ್ಡನ್ ಬಣ್ಣದ ಈ ಲೆಹೆಂಗಾ ಕೂಡ ಸಬ್ಯಸಾಚಿ ವಿನ್ಯಾಸ ಮಾಡಿದ್ದರು.

ಯಾರಿಗೂ ಕಮ್ಮಿ ಇಲ್ಲಿ ಪ್ರಿಯಾಂಕಾ ಚೋಪ್ರಾ ಲೆಹೆಂಗಾ ಬೆಲೆ!

ಯಾರಿಗೂ ಕಮ್ಮಿ ಇಲ್ಲಿ ಪ್ರಿಯಾಂಕಾ ಚೋಪ್ರಾ ಲೆಹೆಂಗಾ ಬೆಲೆ!

ಹಾಲಿವುಡ್‌ ಮೂಲಕ ನಿಕ್ ಜೋನಸ್ ಕೈ ಹಿಡಿದ ನಟಿ ಪ್ರಿಯಾಂಕಾ ಚೋಪ್ರಾ ಯಾರಿಗೂ ಕಮ್ಮಿ ಇಲ್ಲ. ಅಷ್ಟಕ್ಕೂ ಇವರಲ್ಲಿ ಅತಿ ಹೆಚ್ಚು ಬೆಲೆಯ ಲೆಹೆಂಗಾ ತೊಟ್ಟಿದ್ದು ಪ್ರಿಯಾಂಕಾ ಚೋಪ್ರಾ. ಪ್ರಿಯಾಂಕಾ ಚೋಪ್ರಾ ಕೂಡ ರಾಜಾಸ್ಥಾನದಲ್ಲಿ ಮದುವೆ ಆಗಿದ್ದಾರೆ. ಮದುವೆಗೆ ಪ್ರಿಯಾಂಕ ಚೋಪ್ರಾ ತೊಟ್ಟ ಕೆಂಪು ಬಣ್ಣದ ಲೆಹೆಂಗಾ 18 ಲಕ್ಷ ಬೆಲೆ ಉಳ್ಳದ್ದು, ವಿಶೇಷ ಅಂದ್ರೆ ಈ ಲೆಹೆಂಗಾವನ್ನು ಕೂಡ ಸಬ್ಯಸಾಚಿ ವಿನ್ಯಾಸ ಮಾಡಿದ್ದಾರೆ.

ಅನುಷ್ಕಾ ಶರ್ಮಾ ಲೆಹೆಂಗಾ 8 ಲಕ್ಷಕ್ಕೂ ಅಧಿಕ!

ಅನುಷ್ಕಾ ಶರ್ಮಾ ಲೆಹೆಂಗಾ 8 ಲಕ್ಷಕ್ಕೂ ಅಧಿಕ!

ಇನ್ನು ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮದುವೆ ಕೂಡ ಅದ್ಧೂರಿಯಾಗಿ ನಡೆಯಿತು. ನಟಿ ಅನುಷ್ಕಾ ಶರ್ಮಾ ಪೇಸ್ಟಲ್‌ ಬಣ್ಣದ, ಫ್ಲೋರಲ್ ಡಿಸೈನ್‌ ಉಳ್ಳ ಲೆಹೆಂಗ ತೊಟ್ಟು ಮಿಂಚಿದ್ದರು. ಈ ಲೆಹೆಂಗವನ್ನು ಸಬ್ಯಸಾಚಿ ವಿನ್ಯಾಸ ಮಾಡಿದ್ದಾರೆ. ಈ ಲೆಹೆಂಗಾದ ಬೆಲೆ 8 ಲಕ್ಷದ 75 ಸಾವಿರ ರೂಪಾಯಿ.

ವಿಶೇಷ ಅಂದ್ರೆ ಹೀಗೆ ಹೆಚ್ಚೆಚ್ಚು ಬೆಲೆಯ ಉಡುಗೆಗಳನ್ನ ತೊಡುವುದು ಸೆಲೆಬ್ರೆಟಿಗಳಿಗೆ ಪ್ರತಿಷ್ಠೆಯ ವಿಚಾರ. ಬಾಲಿವುಡ್‌ನ ಈ ತಾರೆಯರ ಮದುವೆ ಲೆಹೆಂಗಾದ ಬೆಲೆಯೆ ಉಬ್ಬೇರಿಸುವಂತೆ ಇದೆ. ಇನ್ನು ಮದುವೆ ಖರ್ಚು ಎಷ್ಟಿರ ಬೇಡ ಊಹಿಸಿ.

More from Filmibeat

English summary
Katrina Kaif Stuns In Sabyasachi Lehenga Whopping Worth Rs 17 Lakhs For Her Marriage With Vicky,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X